• Home  
  •   ಬೃಹತ್ ಮಟ್ಟದ ಡಿಜಿಟಲ್ ಅರೆಸ್ಟ್ ತಪ್ಪಿಸಿದ ಕಿನ್ನಿಗೋಳಿ ಬ್ಯಾಂಕ್ ಮ್ಯಾನೇಜರ್ (Kinnigoli Bank Manager Escapes Massive Digital Arrest)
- Crime

  ಬೃಹತ್ ಮಟ್ಟದ ಡಿಜಿಟಲ್ ಅರೆಸ್ಟ್ ತಪ್ಪಿಸಿದ ಕಿನ್ನಿಗೋಳಿ ಬ್ಯಾಂಕ್ ಮ್ಯಾನೇಜರ್ (Kinnigoli Bank Manager Escapes Massive Digital Arrest)

Share: ಬೃಹತ್ ಮಟ್ಟದ ಡಿಜಿಟಲ್ ಅರೆಸ್ಟ್ ತಪ್ಪಿಸಿದ ಕಿನ್ನಿಗೋಳಿ ಬ್ಯಾಂಕ್ ಮ್ಯಾನೇಜರ್  ಸಕಾಲದಲ್ಲಿ ತಪ್ಪಿದ 84 ಲಕ್ಷ ರೂ. ವಂಚನೆ (Kinnigoli) ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ದಾಮಸ್ ಕಟ್ಟೆ ಬಳಿಯ ವೃದ್ಧ ದಂಪತಿಗಳನ್ನು ಮುಂಬೈಯ ವಂಚನಾ ತಂಡವೊಂದು ಡಿಜಿಟಲ್ ಅರೆಸ್ಟ್ ಮೂಲಕ ಬೆದರಿಸಿ  ಸುಮಾರು 84 ಲಕ್ಷ  ವಂಚನೆ ಮಾಡಲು ಯತ್ನಿಸಿದ್ದು, ಬ್ಯಾಂಕ್ ಮ್ಯಾನೇಜರ್ ಹಾಗೂ ಮುಲ್ಕಿ ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ಭಾರೀ ವಂಚನೆಯ ಕೃತ್ಯ ತಡೆ ಹಿಡಿಯಲ್ಪಟ್ಟಿದೆ.     ಕಿನ್ನಿಗೋಳಿ ಸಮೀಪದ ಥಾಮಸ್ ಕಟ್ಟೆ ಕೊಲ್ಬೆಟ್ಟು  […]

(Kinnigoli) ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ದಾಮಸ್ ಕಟ್ಟೆ ಬಳಿಯ ವೃದ್ಧ ದಂಪತಿಗಳನ್ನು ಮುಂಬೈಯ ವಂಚನಾ ತಂಡವೊಂದು ಡಿಜಿಟಲ್ ಅರೆಸ್ಟ್ ಮೂಲಕ ಬೆದರಿಸಿ  ಸುಮಾರು 84 ಲಕ್ಷ  ವಂಚನೆ ಮಾಡಲು ಯತ್ನಿಸಿದ್ದು, ಬ್ಯಾಂಕ್ ಮ್ಯಾನೇಜರ್ ಹಾಗೂ ಮುಲ್ಕಿ ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ಭಾರೀ ವಂಚನೆಯ ಕೃತ್ಯ ತಡೆ ಹಿಡಿಯಲ್ಪಟ್ಟಿದೆ.

    ಕಿನ್ನಿಗೋಳಿ ಸಮೀಪದ ಥಾಮಸ್ ಕಟ್ಟೆ ಕೊಲ್ಬೆಟ್ಟು  ವೃದ್ಧ ದಂಪತಿಗಳಾದ ಬೆನೆಡಿಕ್ಟ್ ಫೆರ್ನಾಡೀಸ್ (86)ಹಾಗೂ ಲಿಲ್ಲಿ ಫೆರ್ನಾಡೀಸ್ (71) ರವರಿಗೆ ಮುಂಬೈ ಪೊಲೀಸರೆಂದು ಹೇಳಿ ವಂಚಕರು ಸೋಮವಾರ ಸಂಜೆ ಆನ್ಲೈನ್ ಮೂಲಕ ಬೆದರಿಕೆ ಹಾಕಿ, ಮುಂಬೈನಲ್ಲಿ  ಬ್ಯಾಂಕ್ ಅಕೌಂಟಿನಿಂದ ನೀವು ಆರು ಕೋಟಿ ಡ್ರಾ ಮಾಡಿದ್ದೀರಿ ಎಂದು  ಸುಳ್ಳು ಹೇಳಿ ವೃದ್ಧ ದಂಪತಿಗಳ ನಕಲಿ ಆಧಾರ್ ಕಾರ್ಡ್ ತೋರಿಸಿ ಡಿಜಿಟಲ್ ಅರೆಸ್ಟ್ ಬೆದರಿಕೆ ಹಾಕಿದ್ದಾರೆ.

  ನೀವು ಮನೆಯಿಂದ ಹೊರಗೆ ಬರಬೇಡಿ. ನಮ್ಮ ಸಿಬ್ಬಂದಿಗಳು ನಿಮ್ಮನ್ನು ಶೂಟ್ ಮಾಡುತ್ತಾರೆ. ಕೂಡಲೇ ನಮಗೆ ಹಣ ನೀಡಬೇಕು ಎಂದು ಬೆದರಿಕೆ ಹಾಕಿದ್ದಾರೆ.

    ಬಳಿಕ ವಂಚಕರು ಮತ್ತೆ ವೃದ್ಧ ದಂಪತಿಗಳನ್ನು ಬೆದರಿಸಿ, ಕಿನ್ನಿಗೋಳಿಯ ಕೆನರಾ ಬ್ಯಾಂಕ್ ನ ತಮ್ಮ ಖಾತೆಯಲ್ಲಿದ್ದ 84 ಲಕ್ಷ ರೂಪಾಯಿಯನ್ನು ತಮ್ಮ ಖಾತೆಗೆ ವರ್ಗಾಯಿಸಬೇಕು ಎಂದು ಸೂಚನೆ ನೀಡಿದ್ದಾರೆ.

    ಅವರ ಬೆದರಿಕೆಗೆ ಮಣಿದ ದಂಪತಿಗಳು ಮಂಗಳವಾರ ಕಿನ್ನಿಗೋಳಿ ಕೆನರಾ ಬ್ಯಾಂಕ್ ಮ್ಯಾನೇಜರ್  ರಾಯಿಸ್ಟನ್ ರವರನ್ನು ಸಂಪರ್ಕಿಸಿ, ನಮ್ಮ ಫಿಕ್ಸೆಡ್ ಖಾತೆಯಲ್ಲಿದ್ದ 84 ಲಕ್ಷ ರೂ. ವನ್ನು ಸೇವಿಂಗ್ಸ್ ಅಕೌಂಟ್ ಗೆ ವರ್ಗಾಯಿಸಬೇಕು ಎಂದು ಹೇಳಿ ತುರ್ತಾಗಿ ಹಣ ಬೇಕು ಎಂದು ಹೇಳಿದ್ದಾರೆ.

  ಆಗ ಬ್ಯಾಂಕ್ ಮ್ಯಾನೇಜರ್ ರವರಿಗೆ ಸಂಶಯ ಬಂದು ಯಾಕೆ ಎಂದು ಕೇಳಿದಾಗ, ದಂಪತಿಗಳು  ಬೆಂಗಳೂರಿನಲ್ಲಿ ಸೈಟ್ ತೆಗೆದುಕೊಳ್ಳಲು ಇದೆ ಎಂಬ ಹಾರಿಕೆಯ ಉತ್ತರ ನೀಡಿದ್ದಾರೆ.

   ಬುಧವಾರ ಬೆಳಿಗ್ಗೆ ವೃದ್ಧ ದಂಪತಿಗಳು ಬ್ಯಾಂಕ್ ಮ್ಯಾನೇಜರ್ ಗೆ  ಮತ್ತಷ್ಟು ಒತ್ತಡ ಹೇರಿ ತಮ್ಮ ಬ್ಯಾಂಕ್ ಖಾತೆಯಿಂದ  ಸುಮಾರು 84 ಲಕ್ಷವನ್ನು ತೆಗೆದು ಆರೋಪಿಗಳ ಖಾತೆಗೆ ವರ್ಗಾಯಿಸಿದ್ದಾರೆ.

   ವೃದ್ಧ ದಂಪತಿಗಳ ನಡೆಯಿಂದ ಬ್ಯಾಂಕ್ ಮ್ಯಾನೇಜರ್ ಗೆ  ಮತ್ತಷ್ಟು ಸಂಶಯ ಉಂಟಾಗಿ ಕೂಡಲೇ ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

   ಕೂಡಲೇ ಮುಲ್ಕಿ ಪೊಲೀಸರು ಕಾರ್ಯಪ್ರವೃತ್ತರಾಗಿ ನಿಮಿಷಾರ್ದದಲ್ಲಿ ವೃದ್ಧ ದಂಪತಿಗಳ ಮನೆಗೆ ಧಾವಿಸಿದ್ದು ಮನೆಯ ಒಳಗಡೆ ಪರಿಶೀಲಿಸಿದಾಗ ಡಿಜಿಟಲ್ ಅರೆಸ್ಟ್ ಕೃತ್ಯ ಬಯಲಿಗೆ ಬಂದಿದೆ.

   ವೃದ್ಧ ದಂಪತಿಗಳು ತಮಗೆ ವಂಚಕರಿಂದ ಬಂದ ಬೆದರಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು ಕೂಡಲೇ ಪೊಲೀಸರು ಹಾಗೂ ಬ್ಯಾಂಕ್ ಮ್ಯಾನೇಜರ್ ಕಾರ್ಯಾಚರಣೆ ನಡೆಸಿ ವಂಚಕರ ಖಾತೆಗೆ ವರ್ಗಾವಣೆಗೊಂಡ 84 ಲಕ್ಷ ತಡೆಹಿಡಿಯಲ್ಪಟ್ಟಿದ್ದು, ವಂಚಕರ ಭಾರಿ ವಂಚನಾ ಕೃತ್ಯ ಬಯಲಾಗಿದೆ.

     ಕಾರ್ಯಾಚರಣೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸೂಚನೆ ಮೇರೆಗೆ ಮುಲ್ಕಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಬಿ. ಎಸ್ ಹಾಗೂ ಸಿಬ್ಬಂದಿ ವರ್ಗ ಸಹಕರಿಸಿದ್ದಾರೆ

Leave a comment

Your email address will not be published. Required fields are marked *

eMedia Kannada  @2025. All Rights Reserved.