ಬೆಂಗಳೂರಿನಲ್ಲಿ ಹಳೆ ಆರೋಪಿಯ ಬಂಧನ
ಶಿರ್ವ : ಹಲವಾರು ಪ್ರಕರಣಗಳಲ್ಲಿ ಪೋಲಿಸರಿಗೆ ಬೇಕಾಗಿದ್ದ ಆರೋಪಿಯನ್ನು ಬೆಂಗಳೂರಿನಲ್ಲಿ ದಸ್ತಗಿರಿ ಮಾಡಿ ಕರೆ ತಂದ ಘಟನೆ ಘಟಿಸಿದೆ.
ರಾಜೇಂದ್ರ ಯಾನೆ ರಾಜ ವಡ್ಡರ್ ಆರೋಪಿಯಾಗಿದ್ದಾನೆ.
ರಾಜೇಂದ್ರನ ಮೇಲೆ ಹೆಬ್ರಿ, ಕಾರ್ಕಳ ಸಹಿತ ಹಲವಾರು ಪೋಲಿಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಹಲವಾರು ಸಮಯಗಳಿಂದ ನಾಪತ್ತೆ ಆಗಿದ್ದ.
ಶಿರ್ವ ಠಾಣಾ ಉಪನಿರೀಕ್ಷಕ ಶಕ್ತಿವೇಲು, ಅನಿಲ್ ವಿ ನಾಯಕ್ ರವರ ಮಾರ್ಗದರ್ಶನದಂತೆ ಶಿರ್ವ ಪೋಲಿಸರಾದ ಧರ್ಮಪ್ಪ, ರಘು, ರಿತೇಶ್ ರವರು ಖಚಿತ ಮಾಹಿತಿ ಮೇರೆಗೆ ಆರೋಪಿ ರಾಜೇಂದ್ರನನ್ನು ಬೆಂಗಳೂರಿನಲ್ಲಿ ದಸ್ತಗಿರಿ ಮಾಡಿ ಕರೆತಂದಿದ್ದಾರೆ.
ಉಡುಪಿ ಜಿಲ್ಲಾ ಪೋಲಿಸ್ ಅಧೀಕ್ಷಕರ ಕಛೇರಿಯ ದಿನೇಶ್ ಹಾಗೂ ಶಿರ್ವ ಠಾಣೆಯ ಭಾಸ್ಕರ್ ಸಹಕರಿಸಿದ್ದಾರೆ.
ಆರೋಪಿಯನ್ನು ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆಗಸ್ಟ್ 6 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

