• Home  
  •  ಬೆಂಗಳೂರಿನ  ಬ್ರಾಡಿ ಕಂಪನಿಯಿಂದ ಬಾರ್ಕೂರು ನೇಶನಲ್ ಹಿರಿಯ ಪ್ರಾಥಮಿಕ ಶಾಲೆಗೆ ಕೊಡುಗೆ (Donation to barkuru National School by Brady Company, Bengaluru)
- ಶಾಲಾ ಕಾಲೇಜು

 ಬೆಂಗಳೂರಿನ  ಬ್ರಾಡಿ ಕಂಪನಿಯಿಂದ ಬಾರ್ಕೂರು ನೇಶನಲ್ ಹಿರಿಯ ಪ್ರಾಥಮಿಕ ಶಾಲೆಗೆ ಕೊಡುಗೆ (Donation to barkuru National School by Brady Company, Bengaluru)

Share: ಬೆಂಗಳೂರಿನ  ಬ್ರಾಡಿ ಕಂಪನಿಯಿಂದ ಬಾರ್ಕೂರು ನೇಶನಲ್ ಹಿರಿಯ ಪ್ರಾಥಮಿಕ ಶಾಲೆಗೆ ಕೊಡುಗೆ (Barkuru) ಬಾರಕೂರು: ಉಡುಪಿ ರೋಟರಿ ಕ್ಲಬ್‌ ಸಹಕಾರದಲ್ಲಿ, ಬೆಂಗಳೂರಿನ ಬ್ರಾಡಿ ಕಂಪನಿಯ ಸಿ ಎಸ್ ಆರ್ ಅನುದಾನದಿಂದ ಬಾರ್ಕೂರಿನ ನೇಶನಲ್ ಹಿರಿಯ ಪ್ರಾಥಮಿಕ ಶಾಲೆಗೆ ಅವರ ಅತಿಥಿ ಶಿಕ್ಷಕರ ಸಂಭಾವನೆ ಬಗ್ಗೆ ನೀಡಿದ ಕೊಡುಗೆಯ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.   ರೋಟರಿ ಉಡುಪಿಯ ಅಧ್ಯಕ್ಷ ರೋ. ಗುರುರಾಜ ಭಟ್‌ರವರು  ಮಾತನಾಡಿ, ಬ್ರಾಡಿ ಕಂಪನಿಯ ಸಾಮಾಜಿಕ ಕಳಕಳಿಯ ಈ ಕೊಡುಗೆಯಿಂದ ಶಾಲೆ ಉತ್ತಮ ಪ್ರಗತಿ  […]

ಬೆಂಗಳೂರಿನ  ಬ್ರಾಡಿ ಕಂಪನಿಯಿಂದ ಬಾರ್ಕೂರು ನೇಶನಲ್ ಹಿರಿಯ ಪ್ರಾಥಮಿಕ ಶಾಲೆಗೆ ಕೊಡುಗೆ

(Barkuru) ಬಾರಕೂರು: ಉಡುಪಿ ರೋಟರಿ ಕ್ಲಬ್‌ ಸಹಕಾರದಲ್ಲಿ, ಬೆಂಗಳೂರಿನ ಬ್ರಾಡಿ ಕಂಪನಿಯ ಸಿ ಎಸ್ ಆರ್ ಅನುದಾನದಿಂದ ಬಾರ್ಕೂರಿನ ನೇಶನಲ್ ಹಿರಿಯ ಪ್ರಾಥಮಿಕ ಶಾಲೆಗೆ ಅವರ ಅತಿಥಿ ಶಿಕ್ಷಕರ ಸಂಭಾವನೆ ಬಗ್ಗೆ ನೀಡಿದ ಕೊಡುಗೆಯ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.

  ರೋಟರಿ ಉಡುಪಿಯ ಅಧ್ಯಕ್ಷ ರೋ. ಗುರುರಾಜ ಭಟ್‌ರವರು  ಮಾತನಾಡಿ, ಬ್ರಾಡಿ ಕಂಪನಿಯ ಸಾಮಾಜಿಕ ಕಳಕಳಿಯ ಈ ಕೊಡುಗೆಯಿಂದ ಶಾಲೆ ಉತ್ತಮ ಪ್ರಗತಿ  ಕಾಣಲಿದೆ. ಬ್ರಾಡಿಕಂಪನಿಯ ಅಧಿಕಾರಿ ಮತ್ತು ಶಾಲಾ ಹಳೆ ವಿದ್ಯಾರ್ಥಿ ಪ್ರಕಾಶ್ ಆಚಾರ್ಯರ ಸಹಕಾರವನ್ನು ಸ್ಮರಿಸಿ ಬ್ರಾಡಿಕಂಪೆನಿಗೆ ದನ್ಯವಾದ ಸಮರ್ಪಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ರೋ. ಸುದಾಕರ ರಾವ್, ರೋಟರಿ ಉಡುಪಿಯ ರೋ. ರಾಮಚಂದ್ರ ಉಪಾಧ್ಯಾಯ, ರೋ. ಸುಬ್ರಹ್ಮಣ್ಯ ಕಾರಂತ, ಶಾಲಾ ಮಾಜಿ ಮುಖ್ಯೋಪಾಧ್ಯಾಯ ಧನಂಜಯ ಆಚಾರ್, ಪ್ರಸಕ್ತ ಮುಖ್ಯೋಪಾಧ್ಯಾಯ ಉದಯ ಶೆಟ್ಟಿ ಮತ್ತು ಇತರ ಶಿಕ್ಷಕರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.