• Home  
  • ಬೆಂಗಳೂರು – ರಾಮನಗರ : ಮಾಜಿ ಡಾನ್, ಭೂಗತ ಪಾತಕಿ ಮುತ್ತಪ್ಪ ರೈ ಮಗನ ಮೇಲೆ ಶೂಟೌಟ್, ಆಸ್ಪತ್ರೆಗೆ ದಾಖಲು (Ramanagara: Former don, underworld don Muthappa Rai’s son shoot out, admitted to hospital)
- ಅಪರಾಧ

ಬೆಂಗಳೂರು – ರಾಮನಗರ : ಮಾಜಿ ಡಾನ್, ಭೂಗತ ಪಾತಕಿ ಮುತ್ತಪ್ಪ ರೈ ಮಗನ ಮೇಲೆ ಶೂಟೌಟ್, ಆಸ್ಪತ್ರೆಗೆ ದಾಖಲು (Ramanagara: Former don, underworld don Muthappa Rai’s son shoot out, admitted to hospital)

Share: ಬೆಂಗಳೂರು – ರಾಮನಗರ : ಮಾಜಿ ಡಾನ್, ಭೂಗತ ಪಾತಕಿ ಮುತ್ತಪ್ಪ ರೈ ಮಗನ ಮೇಲೆ ಶೂಟೌಟ್, ಆಸ್ಪತ್ರೆಗೆ ದಾಖಲು (Ramanagara – Bengaluru)ರಾಮನಗರ : ಮುತ್ತಪ್ಪ ರೈ ಮಗನ ಮೇಲೆ ಶೂಟೌಟ್ ನಡೆದ ಘಟನೆ ವರದಿಯಾಗಿದೆ. ಬಿಡದಿಯಲ್ಲಿರುವ ಮುತ್ತಪ್ಪ ರೈ ನಿವಾಸ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಮಧ್ಯರಾತ್ರಿ 1:30 ರ ಸುಮಾರಿಗೆ ಶೂಟೌಟ್ ನಡೆದಿದೆ.  ಬಿಡದಿ ಮನೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ರಿಕ್ಕಿ ರೈ ಮನೆ ಹೊರಗಡೆಯ ಕೌಂಪೌಡ್ ಬಳಿ ಡ್ರೈವರ್ […]

(Ramanagara – Bengaluru)ರಾಮನಗರ : ಮುತ್ತಪ್ಪ ರೈ ಮಗನ ಮೇಲೆ ಶೂಟೌಟ್ ನಡೆದ ಘಟನೆ ವರದಿಯಾಗಿದೆ. ಬಿಡದಿಯಲ್ಲಿರುವ ಮುತ್ತಪ್ಪ ರೈ ನಿವಾಸ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಮಧ್ಯರಾತ್ರಿ 1:30 ರ ಸುಮಾರಿಗೆ ಶೂಟೌಟ್ ನಡೆದಿದೆ.

 ಬಿಡದಿ ಮನೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ರಿಕ್ಕಿ ರೈ ಮನೆ ಹೊರಗಡೆಯ ಕೌಂಪೌಡ್ ಬಳಿ ಡ್ರೈವರ್ ಹಾಗೂ ಗನ್ ಮ್ಯಾನ್ ಜೊತೆ ಫರ್ಚೂನರ್ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಬಿಡದಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಶಿಫ್ಟ್ ಮಾಡಲಾಗಿದೆ.

ಅಪರಿಚಿತರು ಕಾರಿನ ಎದು ಗುಂಡು ಹಾರಿಸಿದಾಗ, ಕಾರಿನ ಚಾಲಕ ಬಗ್ಗಿದ್ದಾರೆ. ಚಾಲಕನ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ರಿಕ್ಕಿ ರೈವರ ಮೂಗಿಗೆ ಗುಂಡು ತಗಲಿದೆ.

ರಕ್ಕಿ ರೈಯವರು ರಷ್ಯಾದಿಂದ ಮೆಳಿದ್ದರು. ಅವರು ಈಗ ರಿಯಲ್‌ ಎಸ್ಟೇಟ್‌ ಉದ್ಯಮ ನಡೆಸುತ್ತಿದ್ದಾರೆ.

ಬಿಡದಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ, ಡಿವೈಎಸ್ಪಿ ಶ್ರೀನಿವಾಸ್ ಭೇಟಿ ಪರಿಶೀಲನೆ ನಡೆಸಿದ್ದಾರೆ.ಪೊಲೀಸರ ತನಿಖೆಯಿಂದಷ್ಟೇ ಸಮರ್ಪಕ ಮಾಹಿತಿ ಸಿಗಬೇಕಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.