ಬಪ್ಪನಾಡು : ವಿಜೃಂಭಣೆಯ ಶಯನೋತ್ಸವ ; ಕವಾಟೋದ್ಘಾಟನೆ – ಪ್ರಸಾದ ವಿತರಣೆ
(Mulki) ಮುಲ್ಕಿ : ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀದೇವಿಗೆ ಶಯನೋತ್ಸವ, ಕವಾಟೋದ್ಘಾಟನೆ ಪ್ರಸಾದ ವಿತರಣೆ ನಡೆಯಿತು.
ಅವಿಭಜಿತ ದಕ್ಷಿಣ ಕನ್ನಡ ಉಡುಪಿ, ಕೇರಳ, ವಿದೇಶಗಳಿಂದ ಸಹಸ್ರಾರು ಮಂದಿ ಮಂದಿ ಭಕ್ತಾದಿಗಳು ಮಲ್ಲಿಗೆ ಪ್ರಿಯೆ ಶ್ರೀದೇವಿಯ ಶಯನೋತ್ಸವಕ್ಕೆ ಮಲ್ಲಿಗೆ ಅರ್ಪಿಸಿದರು.
ಗುರುವಾರ ಮಲ್ಲಿಗೆ ಅಟ್ಟಿಗೆ ಅಟ್ಟೆಗೆ ದುಬಾರಿ 1, 200ರೂ ಹಾಗೂ ಚೆಂಡಿಗೆ 300ರೂ ಇದ್ದರೂ, ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ಸರತಿಯಲ್ಲಿ ನಿಂತು ಮಲ್ಲಿಗೆ ಅರ್ಪಿಸಿದ್ದಾರೆ.
ಬಪ್ಪನಾಡು ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆಯುವ ಶಯನೋತ್ಸವಕ್ಕೆ ತನ್ನದೇ ಆದ ವಿಶಿಷ್ಟತೆ ಇದ್ದು, ಭಕ್ತರು ದೇವಳಕ್ಕೆ ಸಮರ್ಪಿಸುವ ಮಲ್ಲಿಗೆ ರಾಶಿ ನೋಡುವುದೇ ಅಂದ. ಭಕ್ತರು ಶ್ರದ್ಧಾ ಭಕ್ತಿಯಿಂದ ಶ್ರೀದೇವಿಗೆ ಅರ್ಪಿಸಿದ ಮಲ್ಲಿಗೆಯನ್ನು ರಥೋತ್ಸವದ ಮುಂಜಾನೆ ಕವಾಟೋದ್ಘಾಟನೆಯ ದಿನದಂದು ಬೆಳಿಗ್ಗೆ ವಿಶೇಷ ಪೂಜೆ ನಡೆದು ಭಕ್ತರಿಗೆ ವಿತರಿಸಲಾಯಿತು.
ಸಾವಿರಾರು ಭಕ್ತಾದಿಗಳು ಬೆಳಿಗ್ಗೆ ಕವಾಟೋದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸಿದರು.
ಬಳಿಕ ತುಲಾಭಾರ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.

