ಬೆಳಪು : ಅನುಪೂರ್ವಿ ಫುಡ್ಸ್ ಉದ್ಯಮ ಲೋಕಾರ್ಪಣೆ
(Belapu) ಬೆಳಪು, ಎ. 1 : ಕಠಿಣ ಪರಿಶ್ರಮ, ಪ್ರಾಮಾಣಿಕ ಪ್ರಯತ್ನ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಂಡು ಬಂದಲ್ಲಿ ಉದ್ಯಮ ಕ್ಷೇತ್ರದಲ್ಲಿ ಪ್ರತೀಯೊಬ್ಬರೂ ಅದ್ವಿತೀಯ ಸಾಧಕರಾಗಿ ಮೂಡಿ ಬರಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಸಹಕಾರಿ ಮಹಾ ಮಂಡಲದ ನಿರ್ದೇಶಕ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದರು.
ಸೋಮವಾರ ಬೆಳಪು ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ಮಹಾಮಾಯ ಹೈಟ್ಸ್‌ನಲ್ಲಿ ನಿರ್ಮಾಣಗೊಂಡಿರುವ ಕಾಪು ಅನುಪೂರ್ವಿ ಸಮೂಹ ಸಂಸ್ಥೆಗಳ ಅನುಪೂರ್ವಿ ಫುಡ್ಸ್ ನೂತನ ಸ್ಥಾವರನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನುಪೂರ್ವಿ ಫುಡ್ಸ್ ಸಂಸ್ಥೆಯ ಪ್ರವರ್ತಕ ಹರೀಶ್ ನಾಯಕ್ ಅವರು ತಂದೆ ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆದು 2001ರಲ್ಲಿ ಪ್ರಾರಂಭಿಸಿದ ಅನುಪೂರ್ವಿ ಕಿಚನ್ಸ್ ಸಂಸ್ಥೆಯನ್ನು ಇಷ್ಟು ಎತ್ತರಕ್ಕೆ ಬೆಳೆಸುವಲ್ಲಿ ಅವರ ಶ್ರಮ ಶ್ಲಾಘನೀಯವಾಗಿದೆ. ತಾನು ಬೆಳೆಯುವುದರೊಂದಿಗೆ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ, ಇತರರಿಗೂ ಆಶ್ರಯ ಕಲ್ಪಿಸುವ ಅನುಪೂರ್ವಿ ಸ್ಥಾವರದ ಪ್ರಾರಂಭದ ಮೂಲಕವಾಗಿ ಬೆಳಪು ಕೈಗಾರಿಕಾ ಪಾರ್ಕ್‌ನಲ್ಲೂ ಹೊಸ ಸಂಚಲನ ಉಂಟಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಹಾಲು ಮಹಾಮಂಡಲದ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಮಾತನಾಡಿ, ವ್ಯವಹಾರ ಕ್ಷೇತ್ರದಲ್ಲಿ ಬೆಳೆಯಬೇಕಾದರೆ ಉತ್ಸಾಹ ಬೇಕು. ಹರೀಶ್ ನಾಯಕ್ ಅವರು ಉತ್ಸಾಹಶೀಲರಾಗಿ, ಕಠಿಣ ಪರಿಶ್ರಮವನ್ನು ಹಾಕಿ ಸಂಸ್ಥೆಯ ಬೆಳವಣಿಗೆಗಾಗಿ ಶ್ರಮಿಸುತ್ತಿದ್ದು, ಅವರ ಶ್ರಮವೇ ವ್ಯವಹಾರ ಕ್ಷೇತ್ರದಲ್ಲಿನ ಅವರ ಬೆಳವಣಿಗೆಗೆ ಮುಖ್ಯ ಕಾರಣವಾಗಿದೆ. ಕೆಎಂಎಫ್ ಉತ್ಪನ್ನಗಳ ಮಾರಾಟಗಾರರಾಗಿಯೂ ಗುರುತಿಸಿ ಕೊಂಡಿರುವ ಅನುಪೂರ್ವಿ ಫುಡ್ಸ್ ಸಂಸ್ಥೆ ಹೊರ ರಾಜ್ಯ, ಹೊರ ದೇಶಗಳಲ್ಲಿಯೂ ಪ್ರಸಿದ್ಧಿ ಪಡೆಯುವಂತಾಗಲಿ ಎಂದು ಹಾರೈಸಿದರು.
ಉದ್ಯಮಿಗಳಾದ ಕಮಲಾಕ್ಷ ನಾಯಕ್ ಕಾಪು ಮತ್ತು ಯಶವಂತ್ ಶೆಣೈಮಂಗಳೂರು ದೀಪ ಪ್ರಜ್ವಲನೆಗೈದು ಸಂಸ್ಥೆಯನ್ನು ಉದ್ಘಾಟಿಸಿ ಶುಭಹಾರೈಸಿದರು.
ಕಾಪು ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಪ್ರಧಾನ ಅರ್ಚಕ ವೇ| ಮೂ| ಕಮಲಾಕ್ಷ ಭಟ್ ಅವರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕಾಪು ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೋಕ್ತೇಸರ ಪ್ರಸಾದ್ ಜಿ. ಶೆಣೈ, ಜಿಎಸ್‌ಬಿ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್, ಸಂಚಾಲಕ ವಿವೇಕಾನಂದ್ ಶೆಣೈ, ಕೆಎಂಎಫ್ ನಿವೃತ್ತ ಅಧಿಕಾರಿ ರಮೇಶ್ ಬೂದಗಟ್ಟಿ, ಕೈಗಾರಿಕಾ ಇಲಾಖಾಧಿಕಾರಿ ವಾಮನ ನಾಯಕ್, ಕೆಐಎಡಿಬಿ ಇಂಜಿನಿಯರ್ ಸುಬ್ರಹ್ಮಣ್ಯ ಭಟ್, ಉದ್ಯಮಿಗಳಾದ ಶಬಿ ಅಹಮದ್ ಖಾಝಿ, ಮನೋಹರ್ ಶೆಟ್ಟಿ, ಸತ್ಯೇಂದ್ರ ಪೈ, ನಿತ್ಯಾನಂದ ಪೈ ಮಂಗಳೂರು, ಗಜಾನನ ಪೈ ಮಂಗಳೂರು ಅತಿಥಿಗಳಾಗಿ ಭಾಗವಹಿಸಿದ್ದರು.
ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಜಿ.ಪಂ. ಸದಸ್ಯೆ ಗೀತಾಂಜಲಿ ಎಂ. ಸುವರ್ಣ, ಗಣ್ಯರಾದ ಯೋಗೀಶ್ ಶೆಟ್ಟಿ ಬಾಲಾಜಿ, ಕೆ. ವಾಸುದೇವ ಶೆಟ್ಟಿ, ನಡಿಕೆರೆ ರತ್ನಾಕರ ಶೆಟ್ಟಿ, ರಮೇಶ್ ಹೆಗ್ಡೆ ಕಲ್ಯ, ಸತ್ಯೇಂದ್ರ ಪೈ, ನವೀನ್‌ಚಂದ್ರ ಸುವರ್ಣ, ಸುರೇಶ್ ಶೆಟ್ಟಿ ಅಯೋಧ್ಯೆ, ಡಾ| ಪ್ರಶಾಂತ್ ಶೆಟ್ಟಿ, ವರುಣ್ ಶೆಟ್ಟಿ, ಸುರೇಶ್ ಶೆಟ್ಟಿ ಉಡುಪಿ, ವಿಕ್ರಂ ಕಾಪು, ಮಾಧವ ಆರ್. ಪಾಲನ್, ಅನಿಲ್ ಕುಮಾರ್, ಅರುಣ್ ಶೆಟ್ಟಿ ಪಾದೂರು, ಕರುಣಾಕರ ಶೆಟ್ಟಿ ಪಣಿಯೂರು ಗುತ್ತು, ಶ್ರೀಕರ ಶೆಟ್ಟಿ ಕಲ್ಯ, ಉದಯ್ ಶೆಟ್ಟಿ, ಚಿತ್ತರಂಜನ್ ಭಂಡಾರಿ, ಸುಧೀರ್ ನಾಯಕ್, ದೀಪಕ್ ನಾಯಕ್, ಉಮೇಶ್ ನಾಯಕ್, ಗುರುದಾಸ್ ನಾಯಕ್, ಮುಶ್ತಾಕ್ ಅಹಮದ್, ಪ್ರಮೀಳಾ ಜತ್ತನ್ನ, ಪ್ರಶಾಂತ್ ಜತ್ತನ್ನ ಮೊದಲಾದ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಅನುಪೂರ್ವಿ ಸಮೂಹ ಸಂಸ್ಥೆಗಳ ಆಡಳಿತ ಪಾಲುದಾರರಾದ ಹರೀಶ್ ಕಮಲಾಕ್ಷ ನಾಯಕ್ ಕಾಪು ಮತ್ತು ಪ್ರೀತಿ ಹರೀಶ್ ನಾಯಕ್ ಅವರು ಅತಿಥಿಗಳನ್ನು ಸ್ವಾಗತಿಸಿ, ಗೌರವಿಸಿದರು.
ಗೀತಾ ಕಮಲಾಕ್ಷ ನಾಯಕ್, ಜಯಲಕ್ಷ್ಮೀ ಯಶವಂತ್ ಶೆಣೈ, ಪೂರ್ವಿ ಹರೀಶ್ ನಾಯಕ್, ಅನುಷ್ಕಾ ಹರೀಶ್ ನಾಯಕ್ ಉಪಸ್ಥಿತರಿದ್ದರು.

