ಬೆಳಪು: ಸ್ಕೂಟಿ ಸ್ಕಿಡ್, ಸವಾರ ಸಾವು (Belapu: Scooty skids, rider dies)
ಕಾಪು, ಆ. 17: ಸ್ಕೂಟಿಯೊಂದು ಬೆಳಪು ಪುಂಚಲಕಾಡು ರಸ್ತೆಯ ರುದ್ರಭೂಮಿ ಬಳಿಯ ಮೋರಿಗೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿಯೇ ಧಾರುಣವಾಗಿ ಮೃತಪಟ್ಟ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.
ಮೃತ ಯುವಕನನ್ನುಅದಮಾರು ಬಂಡಸಾಲೆ ನಿವಾಸಿ ಜಗದೀಶ್ ಮೂಲ್ಯ (33) ಎಂದು ಗುರುತಿಸಲಾಗಿದೆ.
ವಾರದ ಹಿಂದೆಯಷ್ಟೇ ವಿದೇಶದಿಂದ ಊರಿಗೆ ಬಂದಿದ್ದ ಜಗದೀಶ, ಪುಂಚಲಕಾಡಿಗೆ ತೆರಳಿ, ಅಲ್ಲಿಂದ ಬೆಳಪು ಮಾರ್ಗವಾಗಿ ಮನೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ಸ್ಕಿಡ್ ಆದ ಸ್ಕೂಟಿ ತಪ್ಪಿ ಮೋರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಜಗದೀಶ್ ಅವರ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವ ಉಂಟಾಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಅದಮಾರು ಬಂಡಸಾಲೆಯ ಅಶೋಕ್ ಮೂಲ್ಯ ಮತ್ತು ಶಾರದಾ ಮೂಲ್ಯ ದಂಪತಿಯ ಪ್ರಥಮ ಪುತ್ರರಾಗಿದ್ದ ಜಗದೀಶ್ ವಿವಾಹಿತರಾಗಿದ್ದು, ತಂದೆ, ತಾಯಿ, ಪತ್ನಿಯನ್ನು ಅಗಲಿದ್ದಾರೆ.
ಶಿರ್ವ ಪೊಲೀಸರು ಸ್ಥಳಕ್ಕೆ ತೆರಳಿದ್ದು, ತನಿಖೆ ಮುಂದುವರಿಸಿದ್ದಾರೆ.

