ಬೆಳ್ಳೆ ಗ್ರಾಮಪಂಚಾಯತ್ ವ್ಯಾಪ್ತಿಯ ಕುರುಡಾಯಿ ಕೆರೆ ವೀಕ್ಷಣೆಗೆ ಆಗಮಿಸಿದ ಯುನಿಸೆಫ್ ತಂಡ
ಇತ್ತೀಚೆಗೆ ಕುರುಡಾಯಿ ಕೆರೆ ಅಭಿವೃದ್ಧಿ ಪಡಿಸಿದ್ದ ಶ್ರೀ ಕ್ಷೇತ್ರ ಧ.ಗ್ರಾಮಾಭಿವೃದ್ಧಿ ಯೋಜನೆ
(Belle) ಬೆಳ್ಳೆ : ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರುಡಾಯಿ ಕೆರೆ ವೀಕ್ಷಣೆಗೆಯುನಿಸೆಫ್ ಸಂಸ್ಥೆಯ ಅಧಿಕಾರಿ ಎನ್ ಎಲ್ ನರಸಿಂಹ ರೆಡ್ಡಿ ಆಗಮಿಸಿ ಪರಿಶೀಲನೆ ನಡೆಸಿದರು.
ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಪು ತಾಲೂಕು ಶಿಪಾರಸ್ಸಿನ ಮೇರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರುಡಾಯಿ ಕೆರೆಯನ್ನು ಅತ್ಯುತ್ತಮವಾಗಿ ಅಭಿವೃದ್ಧಿ ಪಡಿಸಿದ್ದರು. ಇದರಿಂದ ಗ್ರಾಮಸ್ಥರಿಗೆ ಕುಡಿಯುವ ನೀರು ಸಹಿತ, ಅಂತರ್ ಜಲ ಹೆಚ್ಚಿದೆ.
ಇಂದು ಕುರುಡಾಯಿ ಕೆರೆ ವೀಕ್ಷಣೆಗೆ ಆಗಮಿಸಿದ ಯುನಿಸೆಫ್ ತಂಡ ಆಗಮಿಸಿದ್ದು, ಕೆರೆ ಇತಿಹಾಸ, ಊರಿಗೆ ಕುಡಿಯುವ ನೀರಿನ ಬಳಕೆ, ಕೃಷಿಗೆ ಬಳಕೆ, ಅಂತರ್ಜಲ ಮಟ್ಟ ಸುಧಾರಣೆ ಬಗ್ಗೆ ಊರಿನ ರೈತರು ಸುತ್ತಲಿನ ಪರಿಸರದ ಜನರಲ್ಲಿ ಅಭಿಪ್ರಾಯ ಸಂಗ್ರಹಣೆಗೆ ಬಂದಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಕಚೇರಿ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಮಹಾಬಲ ಕುಲಾಲ್, ರಾಜ್ಯ ಜನಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಬೆಳ್ಳೆ ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಶಶಿಧರ ವಾಗ್ಲೆ, ಕುರುದಾಯಿ ಕೆರೆ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ, ಸದಸ್ಯರಾದ ಸ್ಯಾಮ್ಸನ್, ಭೋಜ ಕುಲಾಲ್, ಪ್ರೇಮ, ಕೇಂದ್ರ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ಯೋಜನಾಧಿಕಾರಿ ಮಮತಾ ಶೆಟ್ಟಿ, ಕೆರೆ ಎಂಜಿನಿಯರ್ ಪ್ರದೀಪ್, ಸುರೇಶ್ ಡಿಸೋಜ, ಮೇಲ್ವಿಚಾರಕರಾದ ಗೀತ, ದೇವೇಂದ್ರ, ಊರಿನ ರೈತ ಮಹಿಳೆಯರು ಉಪಸ್ಥಿತರಿದ್ದರು.

