• Home  
  • ಬೈಂದೂರಿಗೆ ಆಗಮಿಸಿದ ಬಾಹುಬಲಿ ವಿಗ್ರಹ (Bahubali idol arrived at Bainduru)
- ಧಾರ್ಮಿಕ

ಬೈಂದೂರಿಗೆ ಆಗಮಿಸಿದ ಬಾಹುಬಲಿ ವಿಗ್ರಹ (Bahubali idol arrived at Bainduru)

Share: ಬೈಂದೂರಿಗೆ ಆಗಮಿಸಿದ ಬಾಹುಬಲಿ ವಿಗ್ರಹ (Udupi) ಉಡುಪಿ : ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶ್ರೀ ಬೋಳಂಬಳ್ಳಿ ಕ್ಷೇತ್ರದಲ್ಲಿ ಭಗವಾನ್ ಬಾಹುಬಲಿಯ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದ್ದು, ಬೈಂದೂರಿಗೆ ಶುಕ್ರವಾರ ವಿಗ್ರಹವನ್ನು ತರಲಾಯ್ತು. ಬೆಂಗಳೂರು ಸಮೀಪದ ದೊಡ್ಡಬಳ್ಳಾಪುರದಲ್ಲಿ ಭಗವಾನ್‌ ಬಾಹುಬಲಿಯ ಮೂರ್ತಿಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.  ಬೈಂದೂರು ಕಂಬದಕೋಣೆ ಜಂಕ್ಷನ್ ನಲ್ಲಿ ಬಾಹುಬಲಿಯ ಮೂರ್ತಿಯನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯ್ತು. ನೂರಾರು ಜನ ಬೋಳಂಬಳ್ಳಿವರೆಗೆ ಅದ್ಧೂರಿ ಮೆರವಣಿಗೆ ಮೂಲಕ ಮೂರ್ತಿಯನ್ನು ಸ್ವಾಗತಿಸಿದರು.   ಮೂರ್ತಿಯ ಅಂತಿಮ ಕೆಲಸ ಮತ್ತು ಪೀಠದ […]

ಬೈಂದೂರಿಗೆ ಆಗಮಿಸಿದ ಬಾಹುಬಲಿ ವಿಗ್ರಹ

(Udupi) ಉಡುಪಿ : ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶ್ರೀ ಬೋಳಂಬಳ್ಳಿ ಕ್ಷೇತ್ರದಲ್ಲಿ ಭಗವಾನ್ ಬಾಹುಬಲಿಯ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದ್ದು, ಬೈಂದೂರಿಗೆ ಶುಕ್ರವಾರ ವಿಗ್ರಹವನ್ನು ತರಲಾಯ್ತು.

ಬೆಂಗಳೂರು ಸಮೀಪದ ದೊಡ್ಡಬಳ್ಳಾಪುರದಲ್ಲಿ ಭಗವಾನ್‌ ಬಾಹುಬಲಿಯ ಮೂರ್ತಿಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

 ಬೈಂದೂರು ಕಂಬದಕೋಣೆ ಜಂಕ್ಷನ್ ನಲ್ಲಿ ಬಾಹುಬಲಿಯ ಮೂರ್ತಿಯನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯ್ತು. ನೂರಾರು ಜನ ಬೋಳಂಬಳ್ಳಿವರೆಗೆ ಅದ್ಧೂರಿ ಮೆರವಣಿಗೆ ಮೂಲಕ ಮೂರ್ತಿಯನ್ನು ಸ್ವಾಗತಿಸಿದರು.

  ಮೂರ್ತಿಯ ಅಂತಿಮ ಕೆಲಸ ಮತ್ತು ಪೀಠದ ಕೆತ್ತನೆ ಕಾರ್ಯ ಇನ್ನಷ್ಠೇ ಆಗಬೇಕಿದೆ ಎಂದು ಬೋಳಂಬಳ್ಳಿ ಕ್ಷೇತ್ರದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

 ಈಗಾಗಲೇ ಕಾರ್ಕಳ, ವೇಣೂರು, ಧರ್ಮಸ್ಥಳದಲ್ಲಿ ಬಾಹುಬಲಿಯ ವಿಗ್ರಹ ಸ್ಥಾಪನೆ ಮಾಡಲಾಗಿದ್ದು, ಪ್ರತೀ 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತಿದೆ. ದೇಶದ ಅತೀ ಎತ್ತರದ ಗೊಮ್ಮಟೇಶನ ವಿಗ್ರಹ ಹಾಸನದ ಶ್ರವಣಬೆಳಗೊಳದಲ್ಲಿದೆ.

ಇದೀಗ ಬೈಂದೂರು ಬೋಳಂಬಳ್ಳಿಯಲ್ಲಿ ಬಾಹುಬಲಿಯ ನೂತನ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.