ಬೈಂದೂರು: ಮೀನುಗಾರಿಕೆ ಮುಗಿಸಿ ದಡಕ್ಕೆ ಬಂದಾಗ ಆಯತಪ್ಪಿ ನೀರಿಗೆ ಬಿದ್ದು ಸಾವು (Byndooru: Fisherman fell in to the water, died)
(Byndooru) ಬೈಂದೂರು: ಪಾತಿ ದೋಣಿಯ ಮೂಲಕ ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ಹಿಂದಿರುಗುವಾಗ ದಡದ ಬಳಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಬುಧವಾರ ಶಿರೂರು ಅಳ್ವೆಗದ್ದೆಯಲ್ಲಿ ನಡೆದಿದೆ.
ಇಲ್ಲಿನ ಅಳ್ವೆಗದ್ದೆ ನಿವಾಸಿ ವೆಂಕಟರಮಣ ದುರ್ಗಪ್ಪ ಮೊಗೇರ್ (65) ಮೃತರು.
ಅವರು ಮುಂಜಾನೆ ಐದು ಗಂಟೆಗೆ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದು, ಹಿಂದಿರುವಾಗ ದಡದ ಬಳಿ ನೀರಿಗೆ ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.
ಮೃತರು ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

