• Home  
  • ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ (Press day program of Brahmavara Thaluka working Journalists Association)
- fastival

ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ (Press day program of Brahmavara Thaluka working Journalists Association)

Share: ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಮಾಧ್ಯಮ ಕ್ಷೇತ್ರದಲ್ಲಿ  ಸುವರ್ಣಾವಕಾಶ– ರಾಜ ಗುಡಿ  (Kota) ಕೋಟ: ಮಾಧ್ಯಮ ಎನ್ನುವುದು ಒಂದು ಸಂವಹನ ಕ್ಷೇತ್ರ ಅದು ಸಾಕಷ್ಟು ಬದಲಾವಣೆಗೊಂಡಿದೆ ಎಂದು ಮಣಿಪಾಲದ ಮಾಹೆಯ ಹಿರಿಯ ಸಹಾಯಕ ಪ್ರಾಧ್ಯಾಪಕ ರಾಜ ಗುಡಿ ಹೇಳಿದಾರೆ. ಬುಧವಾರ ಕೋಟದ ವಿವೇಕ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಮಾಧ್ಯಮ ಕ್ಷೇತ್ರ ಒಂದು ಜವಾಬ್ದಾರಿಯುತ ಹಾಗೂ […]

ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ

ವಿದ್ಯಾರ್ಥಿಗಳಿಗೆ ಮಾಧ್ಯಮ ಕ್ಷೇತ್ರದಲ್ಲಿ  ಸುವರ್ಣಾವಕಾಶರಾಜ ಗುಡಿ

 (Kota) ಕೋಟ: ಮಾಧ್ಯಮ ಎನ್ನುವುದು ಒಂದು ಸಂವಹನ ಕ್ಷೇತ್ರ ಅದು ಸಾಕಷ್ಟು ಬದಲಾವಣೆಗೊಂಡಿದೆ ಎಂದು ಮಣಿಪಾಲದ ಮಾಹೆಯ ಹಿರಿಯ ಸಹಾಯಕ ಪ್ರಾಧ್ಯಾಪಕ ರಾಜ ಗುಡಿ ಹೇಳಿದಾರೆ.

ಬುಧವಾರ ಕೋಟದ ವಿವೇಕ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಮಾಧ್ಯಮ ಕ್ಷೇತ್ರ ಒಂದು ಜವಾಬ್ದಾರಿಯುತ ಹಾಗೂ ಸಮಾಜದ ಒರೆಕೋರೆಗಳನ್ನು ಹೊರಜಗತ್ತಿಗೆ ಪ್ರಚುರಪಡಿಸಿ ಅದರ ಸಮಗ್ರ ಅನುಷ್ಠಾನದ ಕೇಂದ್ರವಾಗಿದೆ. ಪ್ರಸ್ತುತ ವಿದ್ಯಾಮಾನದಲ್ಲಿ ಮಾಧ್ಯಮ ಡಿಜಿಟಲಿಕರಣಗೊಂಡ ಹಿನ್ನೆಲೆಯಲ್ಲಿ ಅವಕಾಶಗಳು ತೆರೆದಿಡುವಂತ್ತಾಗಿದೆ. ಈ ಕ್ಷೇತ್ರದಲ್ಲಿ ಸಾಕಷ್ಟು ಕೋರ್ಸ್‌ಗಳಿಗೆ. ಇದನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕಿದೆ ಎಂದರು.

ಈ ವೇಳೆ ಪ್ರೆಸ್ ಕ್ಲಬ್ ವತಿಯಿಂದ ಹಿರಿಯ ಪತ್ರಕರ್ತ ರಂಗಪಯ್ಯ ಹೊಳ್ಳ ಇವರಿಗೆ ಗೌರವ ಪುರಸ್ಕಾರ ನೀಡಲಾಯಿತು.

ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ್ ನಾವಡ ಗೌರವ ಸನ್ಮಾನ ನೆರವೆವೇರಿಸಿದರು.

ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ  ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಉಪಸ್ಥಿತರಿದ್ದರು.

 ಪತ್ರಕರ್ತ ವಸಂತ ಗಿಳಿಯಾರ್ ಪ್ರಾಸ್ತಾವನೆ ಗೈದರು.  ಸಂಘದ ಗೌರವಾಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ ಸ್ವಾಗತಿಸಿದರು.

 ಪತ್ರಕರ್ತ ಚಂದ್ರಶೇಖರ್ ಬೀಜಾಡಿ ನಿರೂಪಿಸಿದರು. ಕಾರ್ಯದರ್ಶಿ ಹರೀಷ್ ಕಿರಣ್ ತುಂಗ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.