• Home  
  • ಭಂಡಾರಕೇರಿ ಮಠದಲ್ಲಿ 18 ವಿದ್ವಾಂಸರಿಂದ ತಾತ್ಪರ್ಯ ನಿರ್ಣಯ ಪಾರಾಯಣ (Recitation of *Tatparya Nirnaya* by 18 scholars at Bhandarakeri Matha.)
- ಧಾರ್ಮಿಕ - ಸನ್ಮಾನ, ಅಭಿನಂದನೆ - ಸಾಂಸ್ಕೃತಿಕ

ಭಂಡಾರಕೇರಿ ಮಠದಲ್ಲಿ 18 ವಿದ್ವಾಂಸರಿಂದ ತಾತ್ಪರ್ಯ ನಿರ್ಣಯ ಪಾರಾಯಣ (Recitation of *Tatparya Nirnaya* by 18 scholars at Bhandarakeri Matha.)

Share: ಭಂಡಾರಕೇರಿ ಮಠದಲ್ಲಿ 18 ವಿದ್ವಾಂಸರಿಂದ ತಾತ್ಪರ್ಯ ನಿರ್ಣಯ ಪಾರಾಯಣ   ಹಲವು ಸಂಶಯಗಳಿಗೆ ಆಚಾರ್ಯ ಮಧ್ವರ ಗ್ರಂಥಗಳೇ ಪರಿಹಾರ : ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ (Udupi) ಉಡುಪಿ– ಬಾರ್ಕೂರು:  ತತ್ವಜ್ಞಾನ ಲೋಕದಲ್ಲಿ ಮಾತ್ರವಲ್ಲ, ಬದುಕಿನ ಪ್ರತಿಯೊಂದು ಸಂದರ್ಭದಲ್ಲೂ ಎದುರಾಗುವ ಜಿಜ್ಞಾಸೆ, ಸಮಸ್ಯೆ, ಸವಾಲು ಮತ್ತು ಸಂಶಯಗಳಿಗೆ ಶ್ರೀ ಆಚಾರ್ಯ ಮಧ್ವರು ರಚಿಸಿದ ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥವು ಪರಿಹಾರ ಸೂಚಿಸುತ್ತದೆ ಎಂದು ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.   ಶ್ರೀವಿದ್ಯಾಮಾನ್ಯತೀರ್ಥರ ಪೀಠಾರೋಹಣ ಶತಮಾನೋತ್ಸವದ ಸಂಭ್ರಮಾಚರಣೆಯ […]

(Udupi) ಉಡುಪಿ ಬಾರ್ಕೂರು:  ತತ್ವಜ್ಞಾನ ಲೋಕದಲ್ಲಿ ಮಾತ್ರವಲ್ಲ, ಬದುಕಿನ ಪ್ರತಿಯೊಂದು ಸಂದರ್ಭದಲ್ಲೂ ಎದುರಾಗುವ ಜಿಜ್ಞಾಸೆ, ಸಮಸ್ಯೆ, ಸವಾಲು ಮತ್ತು ಸಂಶಯಗಳಿಗೆ ಶ್ರೀ ಆಚಾರ್ಯ ಮಧ್ವರು ರಚಿಸಿದ ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥವು ಪರಿಹಾರ ಸೂಚಿಸುತ್ತದೆ ಎಂದು ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.

  ಶ್ರೀವಿದ್ಯಾಮಾನ್ಯತೀರ್ಥರ ಪೀಠಾರೋಹಣ ಶತಮಾನೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ನಡೆಯುತ್ತಿರುವ ವಿದ್ವಾಂಸರ ಐದನೇ ಹಂತದ ಸನ್ಮಾನ, ಬಿರುದು ಪ್ರದಾನ ಸಮಾರಂಭದಲ್ಲಿ 18 ವಿದ್ವಾಂಸರಿಗೆ  ಸ್ಮರಣಿಕೆ, ಸಂಭಾವನೆಗಳನ್ನು ನೀಡುವ ಮೂಲಕ ಗೌರವ ಸಮರ್ಪಿಸಿ ಅನುಗ್ರಹ ಸಂದೇಶ ನೀಡಿದರು.

  ಮಹಾಭಾರತವನ್ನು ಐದನೆಯ ವೇದವೆಂದು ಪ್ರಾಚೀನರು ಕರೆದಿದ್ದಾರೆ. ಅದಕ್ಕೆ ಆಚಾರ್ಯ ಮಧ್ವರು ಸಮರ್ಥವಾಗಿ ತಾತ್ಪರ್ಯ ನಿರ್ಣಯ ರಚನೆ ಮಾಡಿ ವಿದ್ವತ್ ಲೋಕಕ್ಕೆ ಮಹೋನ್ನತ ಕೊಡುಗೆ ನೀಡಿದ್ದಾರೆ.

  ಈ ಗ್ರಂಥದ ಪಾರಾಯಣವನ್ನು 18 ವಿದ್ವಾಂಸರು ಈ ಮಠದಲ್ಲಿ ಮಾಡಿರುವುದು ಧಾರ್ಮಿಕ ಸಂಚಲನ ಮೂಡಿಸಿದೆ. ಇಂಥ ಚಟುವಟಿಕೆ ಸಮಾಜದಲ್ಲಿ ಸೌಹಾರ್ದ ಮೂಡಿಸಿ ದೇಶದ ಅಖಂಡತೆಗೆ ಬೆಂಬಲಿಸುತ್ತದೆ ಎಂದರು.

  ಮಾತೆಗೆ ಶಿಕ್ಷಣ ನೀಡಿದ ತಾಣ:

 ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ  ಆನುವಂಶಿಕ ಮೊಕ್ತೇಸರ ವಿದ್ವಾನ್‌ ಹರಿನಾರಾಯಣ ಅಸ್ರಣ್ಣ ಮಾತನಾಡಿ, ಭಂಡಾರಕೇರಿ ಮಠವು ನನ್ನ ತಾಯಿಗೆ ಅಂದಿನ ಕಾಲದಲ್ಲೇ ಶಿಕ್ಷಣ ನೀಡಿದ ತಾಣ ಎಂದು ಧನ್ಯತೆಯಿಂದ ಎಂದು ಸ್ಮರಿಸಿದರು.

  ಹಿರಿಯ ವಿದ್ವಾಂಸ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ಪಾರಾಯಣ:

ದೇಶದ ವಿವಿಧ ಭಾಗದ 18 ವಿದ್ವಾಂಸರು ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥವನ್ನು 8 ದಿನಗಳ ಕಾಲ 3 ಬಾರಿ ಪಾರಾಯಣ ಮಾಡಿದ್ದು ವಿಶೇಷವಾಗಿ ಗಮನ ಸೆಳೆಯಿತು.

 ಪ್ರಶಸ್ತಿ ಪ್ರದಾನ:

ಕಾರ್ಯಕ್ರಮದಲ್ಲಿ, ಮೈಸೂರಿನ ವಿದ್ವಾಂಸರಾದ ಬಾದರಾಯಣಾಚಾರ್ಯರಿಗೆ ‘ಜಯಶ್ರೀ ಕಂಬುಕಂಠ’  ಎಂಬ ಪ್ರಶಸ್ತಿಯನ್ನು ನೀಡಿ ವಿಶೇಷವಾಗಿ ಸನ್ಮಾನಿಸಲಾಯಿತು.

  ಸನ್ಮಾನಿತರು:

ಸಮಾರಂಭದಲ್ಲಿ ದೇಶದ ವಿವಿಧ ಭಾಗದ ವಿದ್ವಾಂಸರಾದ ಪುರಂದರಾಚಾರ್ಯ ಹಯಗ್ರೀವ (ಬೆಂಗಳೂರು),  ಶ್ರೀಕಾಂತಾಚಾರ್ಯ ಪುರೋಹಿತ (ಆದಿಚುಂಚನ ಗಿರಿ), ಗುರುಪ್ರಸಾದಾಚಾರ್ಯ ಹನಸೋಗೆ ಬೆಂಗಳೂರು,  ರಘತ್ತಮಾ ಚಾರ್ಯ ನಾಗಸಂಪಿಗೆ, ಬಾಗಲಕೋಟೆ, ವಾಗೀಶಾ ಚಾರ್ಯ ಮಂತ್ರಾಲಯ, ಪವನಾಚಾರ್ಯ ಕುರುಡಿ ರಾಯಚೂರು, ವೇಣು ಗೋಪಾಲಾಚಾರ್ಯ ಪುರೋ ಹಿತ (ಮಂತ್ರಾಲಯ), ಹೃಷಿಕೇಶಾಚಾರ್ಯ ಮಠದ ಬೆಂಗಳೂರು, ಸಿ. ಜೆ. ವಿಕ್ರಮಸಿಂಹಾ ಚಾರ್ಯ ಬೆಂಗಳೂರು,  ಶ್ರೀಹರಿ ಆಚಾರ್ಯ ಪೂಜಾರ ಬೆಂಗಳೂರು,  ನರಸಿಂಹಾಚಾರ್ಯ ಕೊರ್ಲ ಹಳ್ಳಿ ಹುಬ್ಬಳ್ಳಿ,  ಪ್ರತೋಷಾಚಾರ್ಯ ಬೆಂಗಳೂರು, ಆದಿ ಶೇಷಾ ಚಾರ್ಯ ಬಾಗಲಕೋಟೆ, ಉಡುಪಿ ಕೃಷ್ಣಾ ಚಾರ್ಯ ಬಾಗಲ ಕೋಟೆ, ಅಜಯಾ ಚಾರ್ಯ ಜೋಷಿವಿಜಯಪುರ, ವೇದೇಶಾಚಾರ್ಯ ನಾಗಸಂಪಿಗೆ ಬೆಂಗಳೂರು, ಐತರೇಯಾಚಾರ್ಯ ಭಾರದ್ವಾಜ ಬೆಂಗಳೂರು.

Leave a comment

Your email address will not be published. Required fields are marked *

eMedia Kannada  @2025. All Rights Reserved.