• Home  
  • ಭಗವದ್ಗೀತೆ ಜೀವನದ ಗೈಡ್ ಇದ್ದಹಾಗೆ  : ಉಡುಪಿಯಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು (Bhagavad Geetha is like a guide: Puttige Sugunenedra Swamiji)
- ಶಾಲಾ ಕಾಲೇಜು

ಭಗವದ್ಗೀತೆ ಜೀವನದ ಗೈಡ್ ಇದ್ದಹಾಗೆ  : ಉಡುಪಿಯಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು (Bhagavad Geetha is like a guide: Puttige Sugunenedra Swamiji)

Share: ಭಗವದ್ಗೀತೆ ಜೀವನದ ಗೈಡ್ ಇದ್ದಹಾಗೆ  : ಉಡುಪಿಯಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು(Bhagavad Gita is like a guide of life : Puttige Sugunendra Swamiji) (Udupi) ಉಡುಪಿ :  ಜೀವನದಲ್ಲಿ ಭಗವದ್ಗೀತೆಯ ಸ್ಫೂರ್ತಿಯ ಅಧ್ಯಾಯಗಳನ್ನು ಅಳವಡಿಸಿಕೊಂಡಾಗ ಯಶಸ್ಸು ಖಂಡಿತ. ಭಗವದ್ಗೀತೆ ಜೀವನಕ್ಕೆ ಉತ್ತಮ ಮಾರ್ಗದರ್ಶಿ ಎಂದು 4 ನೇ ಬಾರಿ ಪರ್ಯಾಯ ಪೀಠರೋಹಣ ಮಾಡಲಿರುವ ಶ್ರೀ ಶ್ರೀ  ಸುಗುಣೇಂದ್ರ ತೀರ್ಥ ಶ್ರೀಪಾದರು  (Puttige Sugunendra Swamiji) ಅಮೃತಮಹೋತ್ಸವ ಸಂಭ್ರಮದಲ್ಲಿರುವ ಉಡುಪಿಯ ಎಂ […]

ಭಗವದ್ಗೀತೆ ಜೀವನದ ಗೈಡ್ ಇದ್ದಹಾಗೆ  : ಉಡುಪಿಯಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು(Bhagavad Gita is like a guide of life : Puttige Sugunendra Swamiji)

(Udupi) ಉಡುಪಿ :  ಜೀವನದಲ್ಲಿ ಭಗವದ್ಗೀತೆಯ ಸ್ಫೂರ್ತಿಯ ಅಧ್ಯಾಯಗಳನ್ನು ಅಳವಡಿಸಿಕೊಂಡಾಗ ಯಶಸ್ಸು ಖಂಡಿತ. ಭಗವದ್ಗೀತೆ ಜೀವನಕ್ಕೆ ಉತ್ತಮ ಮಾರ್ಗದರ್ಶಿ ಎಂದು 4 ನೇ ಬಾರಿ ಪರ್ಯಾಯ ಪೀಠರೋಹಣ ಮಾಡಲಿರುವ ಶ್ರೀ ಶ್ರೀ  ಸುಗುಣೇಂದ್ರ ತೀರ್ಥ ಶ್ರೀಪಾದರು  (Puttige Sugunendra Swamiji) ಅಮೃತಮಹೋತ್ಸವ ಸಂಭ್ರಮದಲ್ಲಿರುವ ಉಡುಪಿಯ ಎಂ ಜಿ ಎಂ ಕಾಲೇಜಿನ ನವೀಕೃತ ಮುದ್ದಣ ಮಂಟಪದ ಉದ್ಘಾಟನೆ ಸಮಾರಂಭದಲ್ಲಿ ಉದ್ಘಾಟಿಸಿ ನೆರೆದವರನ್ನು ಉದ್ದೇಶಿಸಿ ಮಾತನಾಡಿದರು.

  ಎಂಜಿಎಂ ಕಾಲೇಜು ದೇಶದ ಹೆಮ್ಮೆಯಾಗಿದೆ. ಭಾರತ ದೇಶ ಅಮೃತ ಮಹೋತ್ಸವವನ್ನು ಕಳೆದ ವರ್ಷ ಆಚರಿಸಿತು. ಎಂಜಿಎಂ ಕಾಲೇಜು ಈ ವರ್ಷ ಆಚರಿಸುತ್ತಿದೆ. ಮುಂದೆ ಇದು ಶತಮಾನ ವರ್ಷವನ್ನು ಆಚರಿಸಬೇಕು ಅದಕ್ಕೂ ನಾವು ಬರುವ ಹಾಗೆ ಆಗಬೇಕು.  ಉಡುಪಿಯ ಸಂಸ್ಕೃತಕ್ಕೆ ಸಂಸ್ಕೃತಿ ಬೆಳವಣಿಗೆಯಲ್ಲಿ ಎಂಜಿಎಂ ಪಾತ್ರವಹಿಸಿದೆ. ನಮ್ಮ ಪುತ್ತಿಗೆ ಮಠದ ಪರ್ಯಾಯವು ಮಣಿಪಾಲ್ ಸಮೂಹ ಮನೆಯಿಂದ ನಡೆಯುವ ಪರ್ಯಾಯ. ಹಾಗಾಗಿ ನಮ್ಮ ಪರ್ಯಾಯ ಎಂದು ಭಾವಿಸಿ, ತಾವೆಲ್ಲರೂ ನಮ್ಮ ಪರ್ಯಾಯಕ್ಕೆ ಬರಬೇಕೆಂದು ನಿಮಗೆ ಆಹ್ವಾನ ನೀಡುತ್ತೇನೆ. 

ನಾವು ಈ ವರ್ಷ ನಮ್ಮ ಪುತ್ತಿಗೆ ಮಠದ ಪರ್ಯಾಯವನ್ನು ಕೋಟಿ ಗೀತಾ  ಲೇಖನಯಜ್ಜ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಭಗವದ್ಗೀತೆ ಜೀವನದ ಗೈಡ್ ಇದ್ದ ಹಾಗೆ. ಅದು ನಮಗೆ ಜೀವನವನ್ನು ಹೇಗೆ ಸಾಧಿಸಬೇಕು ಎಂದು ಹೇಳಿಕೊಡುತ್ತದೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ಶಿಕ್ಷಣ ಶಿಕ್ಷಣದೊಂದಿಗೆ ಜೀವನವನ್ನು ಹೇಗೆ ಸಾಧಿಸುವ ವಿದ್ಯೆಯು ಬೇಕು. ವಿದ್ಯಾರ್ಥಿಗಳು ಅತಿ ಹೆಚ್ಚು ಮೊಬೈಲ್ ಬಳಕೆಯಲ್ಲಿ ತೊಡಗಿ ಇರುತ್ತೀರಿ. ಮೊಬೈಲ್ ದೆಸೆಯಿಂದ ನಮ್ಮ ಆಚಾರ ವಿಚಾರ ದೂರ ಹೋಗುತಿದೆ. ನೀವು ಮೊಬೈಲ್ ನೋಡುವುದನ್ನು ಸ್ವಲ್ಪ ಕಮ್ಮಿ ಮಾಡಿ, ದಿನಕ್ಕೆ ಒಂದು ಗೀತೆಯನ್ನು ಆದರೂ  ಓದಬೇಕು,  ಬರೆಯಬೇಕು.  ನಿಮಗೆ ಮುಂದಿನ ಭವಿಷ್ಯಕ್ಕೆ ಜೀವನ ಸಾಗಿಸಲು ಗೀತೆಯೂ ಅತ್ಯಂತ ಮುಖ್ಯವಾಗಿರುತ್ತದೆ. ಅದು ನಿಮ್ಮನ್ನು ಮೊಬೈಲ್ ಜಿಪಿಎಸ್ ನ ಹಾಗೆ ಜೀವನದ ದಾರಿಗೆ ಕೈಹಿಡಿದು ಕರೆದುಕೊಂಡು ಬರುತ್ತದೆ ಎಂದು ಸ್ವಾಮೀಜಿ ವಿದ್ಯಾರ್ಥಿಗಳಿಗೆ  ಕಿವಿಮಾತು ಹೇಳಿದರು.

 ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷರಾದ ಟಿ ಸತೀಶ್ ಯು (MGM College Trustee T Sathish Pai). ಪೈ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

  ಮಾಹೆ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್‌ ಸಹ ಕುಲಾಧಿಪತಿಗಳು ಹಾಗೂ ಅಧ್ಯಕ್ಷರಾದ ಡಾ. ಹೆಚ್.ಎಸ್. ಬಲ್ಲಾಳ್ (MAHE President DR HS Ballal),  ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್. ಎಸ್ ನಾಯ್ಕ್ (DR Devidas Naik)ಉಪಸ್ಥಿತರಿದ್ದರು.

 ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ್ (Collegge Principal Laxminarayana Karanth) ಸ್ವಾಗತಿಸಿದರು.  ಕಾಲೇಜಿನ ಉಪನ್ಯಾಸಕಿ ದೀಪಾಲಿ ನಿರೂಪಿಸಿದರು. ಪ. ಪೂ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಮಾಲತಿದೇವಿ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.