• Home  
  • ಉಡುಪಿ, ನವೆಂಬರ್ 29 : ಲೋಕಕಲ್ಯಾಣಕ್ಕಾಗಿ ಐತಿಹಾಸಿಕ ‘ಶ್ರೀ ಮಹಾಧನ್ವಂತರಿ ಯಾಗ’ (Udupi, November 29: Historic ‘Sri Mahadhanvantari Yaga’ for the welfare of the world)
- ಧಾರ್ಮಿಕ

ಉಡುಪಿ, ನವೆಂಬರ್ 29 : ಲೋಕಕಲ್ಯಾಣಕ್ಕಾಗಿ ಐತಿಹಾಸಿಕ ‘ಶ್ರೀ ಮಹಾಧನ್ವಂತರಿ ಯಾಗ’ (Udupi, November 29: Historic ‘Sri Mahadhanvantari Yaga’ for the welfare of the world)

Share: ಉಡುಪಿ, ನವೆಂಬರ್ 29 : ಲೋಕಕಲ್ಯಾಣಕ್ಕಾಗಿ ಐತಿಹಾಸಿಕ ‘ಶ್ರೀ ಮಹಾಧನ್ವಂತರಿ ಯಾಗ’ ಈಗಾಗಲೇ 9,000 ಕ್ಕೂ ಅಧಿಕ ಭಕ್ತರಿಂದ ನೋಂದಣಿ, 15,000 ಜನರ ಸಹಭಾಗಿತ್ವದ ನಿರೀಕ್ಷೆ (Udupi) ಉಡುಪಿ : ಸನಾತನ ಸಂಸ್ಥೆಯ ವತಿಯಿಂದ ಸಮಸ್ತ ಸಮಾಜದ ಆರೋಗ್ಯ, ಕ್ಷೇಮ, ರಾಷ್ಟ್ರದ ಸುರಕ್ಷತೆ ಹಾಗೂ ಲೋಕಕಲ್ಯಾಣದ ಸಂಕಲ್ಪದೊಂದಿಗೆ ನವೆಂಬರ್ 29 ರಂದು ಉಡುಪಿಯ ಕುಂಜಿಬೆಟ್ಟಿನ ಎಂ.ಜಿ.ಎಂ. ಕಾಲೇಜು ಮೈದಾನದಲ್ಲಿ ಬೃಹತ್ ‘ಶ್ರೀ ಮಹಾಧನ್ವಂತರಿ ಯಾಗ’ವನ್ನು ಆಯೋಜಿಸಲಾಗಿದೆ.   ಈ ಮಹಾಯಾಗದಲ್ಲಿ ಪಾಲ್ಗೊಳ್ಳಲು ಈಗಾಗಲೇ 9,000 ಕ್ಕೂ […]

(Udupi) ಉಡುಪಿ : ಸನಾತನ ಸಂಸ್ಥೆಯ ವತಿಯಿಂದ ಸಮಸ್ತ ಸಮಾಜದ ಆರೋಗ್ಯ, ಕ್ಷೇಮ, ರಾಷ್ಟ್ರದ ಸುರಕ್ಷತೆ ಹಾಗೂ ಲೋಕಕಲ್ಯಾಣದ ಸಂಕಲ್ಪದೊಂದಿಗೆ ನವೆಂಬರ್ 29 ರಂದು ಉಡುಪಿಯ ಕುಂಜಿಬೆಟ್ಟಿನ ಎಂ.ಜಿ.ಎಂ. ಕಾಲೇಜು ಮೈದಾನದಲ್ಲಿ ಬೃಹತ್ ‘ಶ್ರೀ ಮಹಾಧನ್ವಂತರಿ ಯಾಗ’ವನ್ನು ಆಯೋಜಿಸಲಾಗಿದೆ.

  ಈ ಮಹಾಯಾಗದಲ್ಲಿ ಪಾಲ್ಗೊಳ್ಳಲು ಈಗಾಗಲೇ 9,000 ಕ್ಕೂ ಅಧಿಕ ಭಕ್ತಾದಿಗಳು ಉಚಿತವಾಗಿ ನೋಂದಣಿ ಮಾಡಿಕೊಂಡಿದ್ದು, ಸುಮಾರು 15,000 ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಆಯೋಜಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

  ಯಾಗಕ್ಕೆ ಉಡುಪಿಯ ಎಲ್ಲಾ ಮಠಾಧೀಶರು, ಧಾರ್ಮಿಕ ಮುಖಂಡರು, ವಿವಿಧ ಸಂಘ-ಸಂಸ್ಥೆಗಳು, ಭಜನಾ ಹಾಗೂ ಮಹಿಳಾ ಮಂಡಳಿಗಳು, ವೈದ್ಯರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತು ಉದ್ಯಮಿಗಳಿಗೆ ಆಮಂತ್ರಣ ನೀಡಲಾಗಿದೆ. ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ, ಚಂದ್ರದೇವತೆಯಿಂದ ಸ್ಥಾಪಿತವಾಗಿ 1000 ವರ್ಷಗಳಿಂದ ಸುರಕ್ಷಿತವಾಗಿ ಸಂರಕ್ಷಿಸಲಾದ ‘ಸೋರಟಿ ಸೋಮನಾಥ ಜ್ಯೋತಿರ್ಲಿಂಗ’ ನ ದಿವ್ಯ ಅಂಶಗಳನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಸಮಸ್ತ ಭಕ್ತರು ಇದರ ಪೂರ್ಣ ಲಾಭ ಪಡೆಯಬೇಕು ಎಂದು ಆಯೋಜನಾ ಸಮಿತಿ  ಸಂಚಾಲಕ ಗುರುಪ್ರಸಾದ್ ಗೌಡ ಹೇಳಿದರು

 ಸ್ವಾಗತ ಸಮಿತಿ ಸಂಘಟನಾ ಕಾರ್ಯದರ್ಶಿ ವಿಜಯ್ ಕೊಡವೂರು ಮಾತನಾಡಿ, ಎಂ.ಜಿ.ಎಂ. ಕಾಲೇಜು ಮೈದಾನದಲ್ಲಿ ಬೃಹತ್ ಜರ್ಮನ್ ಹ್ಯಾಂಗರ್ ಮಾದರಿಯ ಪೆಂಡಾಲ್ ನಿರ್ಮಾಣ ಭರದಿಂದ ಸಾಗುತ್ತಿದೆ. ಯಾಗ ಮಂಟಪ, ವೇದಿಕೆ, ಧರ್ಮಪ್ರದರ್ಶನ ಮಳಿಗೆಗಳ ಜೊತೆಗೆ ಹೊರ ಜಿಲ್ಲೆಗಳಿಂದ ಆಗಮಿಸುವ ಭಕ್ತಾದಿಗಳಿಗೂ ಅನುಕೂಲವಾಗುವಂತೆ ವಾಹನ ಪಾರ್ಕಿಂಗ್, ಸುಗಮ ಸಂಚಾರ, ಪ್ರವೇಶ-ನಿರ್ಗಮನ ಮಾರ್ಗಗಳು, ಸ್ವಯಂಸೇವಕರ ನಿಯೋಜನೆ, ಆಸನ, ಕುಡಿಯುವ ನೀರು ಹಾಗೂ ಸ್ವಚ್ಛತೆಯ ಅಚ್ಚುಕಟ್ಟು ವ್ಯವಸ್ಥೆ ಮಾಡಲಾಗುತ್ತಿದೆ. ನವೆಂಬರ್ 26 ರ ವೇಳೆಗೆ ಮೈದಾನದ ಎಲ್ಲಾ ಸಿದ್ಧತೆಗಳು ಪೂರ್ಣಗೊಳ್ಳಲಿದ್ದು, ಈ ಮಹಾಯಾಗದ ಯಶಸ್ಸಿಗೆ ಉಡುಪಿಯ ನಾಗರಿಕರು, ಸಂಘ-ಸಂಸ್ಥೆಗಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕು,” ಎಂದು ಕೋರಿದರು.

  ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತ ರಮಾನಂದ ಗೌಡ, ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ರಮೇಶ ಶಿಂದೆ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.