• Home  
  • ಭಾರತದ ಹೆಮ್ಮೆಗೆ ಕಾರಣವಾಗಿರುವ ಚಂದ್ರಯಾನ 3 ತನ್ನ ಪಯಣ ಆರಂಭ
- ದೇಶ-ವಿದೇಶ

ಭಾರತದ ಹೆಮ್ಮೆಗೆ ಕಾರಣವಾಗಿರುವ ಚಂದ್ರಯಾನ 3 ತನ್ನ ಪಯಣ ಆರಂಭ

Share: ಭಾರತದ ಹೆಮ್ಮೆಗೆ ಕಾರಣವಾಗಿರುವ ಚಂದ್ರಯಾನ 3 ತನ್ನ ಪಯಣ ಆರಂಭ ಸಂಪೂರ್ಣ ಭಾರತದ ಹೆಮ್ಮೆಗೆ ಕಾರಣವಾಗಿರುವ ಚಂದ್ರಯಾನ 3 ತನ್ನ ಪಯಣ ಆರಂಭಿಸಿದೆ. ಇಂದು ಮಧ್ಯಾಹ್ನ 2:35ಕ್ಕೆ ಸರಿಯಾಗಿ ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್​ 23ರಂದು ಈ ಬಾಹ್ಯಾಕಾಶ ನೌಕೆಯು ಚಂದ್ರನ ಅಂಗಳಕ್ಕೆ ಇಳಿಯಲಿದೆ.  ಈಗಾಗಲೇ ಮೂರು ರಾಷ್ಟ್ರಗಳು ಚಂದ್ರನ ಅಂಗಳಕ್ಕೆ ತಮ್ಮ ಬಾಹ್ಯಾಕಾಶ ನೌಕೆಯನ್ನು ಇಳಿಸಿವೆ. ಭಾರತವೂ ಈ ಪಟ್ಟಿಗೆ ಸೇರಲಿ ಎಂದು ಇಡೀ ದೇಶವೇ ಪ್ರಾರ್ಥಿಸುತ್ತಿದೆ. […]

ಭಾರತದ ಹೆಮ್ಮೆಗೆ ಕಾರಣವಾಗಿರುವ ಚಂದ್ರಯಾನ 3 ತನ್ನ ಪಯಣ ಆರಂಭ

ಸಂಪೂರ್ಣ ಭಾರತದ ಹೆಮ್ಮೆಗೆ ಕಾರಣವಾಗಿರುವ ಚಂದ್ರಯಾನ 3 ತನ್ನ ಪಯಣ ಆರಂಭಿಸಿದೆ.

ಇಂದು ಮಧ್ಯಾಹ್ನ 2:35ಕ್ಕೆ ಸರಿಯಾಗಿ ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್​ 23ರಂದು ಈ ಬಾಹ್ಯಾಕಾಶ ನೌಕೆಯು ಚಂದ್ರನ ಅಂಗಳಕ್ಕೆ ಇಳಿಯಲಿದೆ.

 ಈಗಾಗಲೇ ಮೂರು ರಾಷ್ಟ್ರಗಳು ಚಂದ್ರನ ಅಂಗಳಕ್ಕೆ ತಮ್ಮ ಬಾಹ್ಯಾಕಾಶ ನೌಕೆಯನ್ನು ಇಳಿಸಿವೆ. ಭಾರತವೂ ಈ ಪಟ್ಟಿಗೆ ಸೇರಲಿ ಎಂದು ಇಡೀ ದೇಶವೇ ಪ್ರಾರ್ಥಿಸುತ್ತಿದೆ. ಬಾಹುಬಲಿ ರಾಕೆಟ್ ಎಂದು ಕರೆಯಲ್ಪಡುವ ಜಿಎಸ್‌ಎಲ್‌ವಿ ಮಾರ್ಕ್ 3 ಹೆವಿ ಲಿಫ್ಟ್ ಉಡಾವಣಾ ವಾಹನದಲ್ಲಿ ಚಂದ್ರನ ಲ್ಯಾಂಡರ್ ವಿಕ್ರಮ್ ಅನ್ನು ಕೂರಿಸಲಾಗಿದೆ.

 ಚಂದ್ರಯಾನ 3 40 ದಿನಗಳ ಪ್ರಯಾಣವಾಗಿದ್ದು ಆಗಸ್ಟ್​ 23ರವರೆಗೆ ಕಾಯಬೇಕಿದೆ. ಚಂದ್ರಯಾನ 2 2019ರಲ್ಲಿ ಕೊನೆಯ ಕ್ಷಣದಲ್ಲಿ ವಿಫಲವಾಗಿತ್ತು. ಈ ಬಾರಿ ಈ ರೀತಿ ಆಗದೇ ಇರಲಿ ಎಂದು ಇಡೀ ದೇಶವೇ ಹಾರೈಸಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.