• Home  
  • ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಕಡಲ ತೀರದ ಚಾರಣದ ಸಮಾರೋಪ (India Scouts & Guides concludes the beach trek)
- social service

ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಕಡಲ ತೀರದ ಚಾರಣದ ಸಮಾರೋಪ (India Scouts & Guides concludes the beach trek)

Share: ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಕಡಲ ತೀರದ ಚಾರಣದ ಸಮಾರೋಪ (Udupi) ಉಡುಪಿ: ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಉಡುಪಿ ಜಿಲ್ಲಾ ಸಂಸ್ಥೆ ಆಯೋಜಿಸಿರುವ ರಾಜ್ಯಮಟ್ಟದ ಕಡಲ ತೀರದ ಚಾರಣ ಹಾಗೂ ಪ್ರಕೃತಿ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭವು  ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಉಪಾಧ್ಯಕ್ಷರಾದ ಶ್ರೀಮತಿ  ಗುಣರತ್ನ (Smt Gunarathna) ರವರ ಅಧ್ಯಕ್ಷತೆಯಲ್ಲಿ ನಡೆಯಿತು.  ಈ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಸುಗುಣೆಂದ್ರ ತೀರ್ಥ ಸ್ವಾಮೀಜಿಯವರ (Sri Puttige Sugunendra Swamji)ಆಶೀರ್ವಚನದೊಂದಿಗೆ ಮಾನ್ಯ ರಾಜ್ಯ […]

ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಕಡಲ ತೀರದ ಚಾರಣದ ಸಮಾರೋಪ

(Udupi) ಉಡುಪಿ: ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಉಡುಪಿ ಜಿಲ್ಲಾ ಸಂಸ್ಥೆ ಆಯೋಜಿಸಿರುವ ರಾಜ್ಯಮಟ್ಟದ ಕಡಲ ತೀರದ ಚಾರಣ ಹಾಗೂ ಪ್ರಕೃತಿ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭವು  ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಉಪಾಧ್ಯಕ್ಷರಾದ ಶ್ರೀಮತಿ  ಗುಣರತ್ನ (Smt Gunarathna) ರವರ ಅಧ್ಯಕ್ಷತೆಯಲ್ಲಿ ನಡೆಯಿತು.

 ಈ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಸುಗುಣೆಂದ್ರ ತೀರ್ಥ ಸ್ವಾಮೀಜಿಯವರ (Sri Puttige Sugunendra Swamji)ಆಶೀರ್ವಚನದೊಂದಿಗೆ ಮಾನ್ಯ ರಾಜ್ಯ ಮುಖ್ಯ ಆಯುಕ್ತರಾಗಿರುವ ಪಿ.ಜಿ.ಆರ್. ಸಿಂಧ್ಯಾ ಇವರನ್ನು ಗೌರವಿಸುವ  ಮೂಲಕ ಎಲ್ಲಾ ಶಿಬಿರಾರ್ಥಿಗಳಿಗೆ ಆಶೀರ್ವಧಿಸಿ ಶುಭ ಹಾರೈಸಿದರು.

ಮುಖ್ಯ ಆಯುಕ್ತರಾಗಿರುವ ಪಿ.ಜಿ. ಆರ್. ಸಿಂಧ್ಯಾರವರು (PGR Sindhya) ತಮ್ಮ ಸಮಾರೋಪದ ಮಾತಿನಲ್ಲಿ, ಶ್ರೀ ಕೃಷ್ಣ ಮುಖ್ಯಪ್ರಾಣರ ಕೃಪೆ ಹಾಗೂ ಶ್ರೀ ಶ್ರೀ ಸ್ವಾಮೀಜಿಯವರ ಆಶೀರ್ವಾದವು  ಭಾಗವಹಿಸಿರುವ  ಎಲ್ಲಾ ಶಿಬಿರಾರ್ಥಿಗಳಿಗೆ ದೊರೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ನೀವೆಲ್ಲರೂ  ಭಾಗ್ಯವಂತರು  ಎಂದು ಹೇಳಿ ಶುಭ ಹಾರೈಸಿದರು.

  ಕಾರ್ಯಕ್ರಮದಲ್ಲಿ ಪದವಿಪೂರ್ವ ಕಾಲೇಜಿ ಉಪನಿರ್ದೇಶಕರಾದ  ಶ್ರೀ ಮಾರುತಿ, ಉಡುಪಿ  ಕ್ಷೇತ್ರ ಶಿಕ್ಷಣಾಧಿಕಾರಿಡಾ. ಎಲ್ಲಮ್ಮ, ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರ್ ಭಟ್, ರಾಜ್ಯ ಪ್ರತಿನಿಧಿ ಪ್ರತಿಮ್ ಕುಮಾರ್  ರೋವರ್ ಲೀಡರ್ ಟ್ರೈನರ್, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಆರ್ಟಿ ಭಟ್, ಜಿಲ್ಲಾ ಗೈಡ್ ಆಯುಕ್ತೆ ಶ್ರೀಮತಿ ಜ್ಯೋತಿ ಜೆ ಪೈ, ಜಿಲ್ಲಾ ಕಾರ್ಯದರ್ಶಿ ಆನಂದ್ ಬಿ ಅಡಿಗ, ಶಿಬಿರ ನಾಯಕರಾದ ಡಾ. ರಾಮಚಂದ್ರ ಪಾಟ್ಕರ್, ಶಿಬಿರ ನಾಯಕಿ ಶ್ರೀಮತಿ ಸವಿತಾ, ಆರ್ ಎಸ್ ಎಲ್ ಹರೀಶ್, ವಿತೇಶ್  ಕಾಂಚನ್ ಆರ್ ಎಸ್ ಎಲ್, ಶರತ್ ರಾಜ್, ಆರ್ ಎಸ್ ಎಲ್, ವಂದನ ಆರ್ ಎಲ್,  ಹಾಗೂ 170 ಶಿಬಿರಾರ್ಥಿಗಳು, ಹಾಗೂ ರೋವರ್ ಲೀಡರ್ ಹಾಗೂ ರೆಂಜರ್ಸ್  ಲೀಡರ್ಸ್, ಕ್ಯಾಂಪ್ ಇನ್ ಚಾರ್ಜ್ ಸಹ  ನಾಯಕ ನಾಯಕಿಯರು, ಸೀನಿಯರ್ ರೋವರ್ಸ್  ರೆಂಜರ್ಸ್, ಉಪಸ್ಥಿತರಿದ್ದರು.

 ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀಮತಿ ಸುಮನ್ ಶೇಖರ್ ಕಾರ್ಯಕ್ರಮ ಸಂಘಟಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.