• Home  
  • ಭಾವೀ ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನ ತೀರ್ಥ ಸ್ವಾಮಿಜಿ ಧರ್ಮಸ್ಥಳ ಖಾವಂದರ ಭೇಟಿ (Future Paryaya Peethadhish Sri Vedavardhana Theertha Swamiji visits Dharmasthala Khavanda)
- ಧಾರ್ಮಿಕ

ಭಾವೀ ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನ ತೀರ್ಥ ಸ್ವಾಮಿಜಿ ಧರ್ಮಸ್ಥಳ ಖಾವಂದರ ಭೇಟಿ (Future Paryaya Peethadhish Sri Vedavardhana Theertha Swamiji visits Dharmasthala Khavanda)

Share: ಭಾವೀ ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನ ತೀರ್ಥ ಸ್ವಾಮಿಜಿ ಧರ್ಮಸ್ಥಳ ಖಾವಂದರ ಭೇಟಿ ಶೀರೂರು ಶ್ರೀಗಳನ್ನು ಸರ್ವ ಗೌರವಗಳೊಂದಿಗೆ  ಸ್ವಾಗತಿಸಿದ ಧರ್ಮಾಧಿಕಾರಿ ಹೆಗ್ಗಡೆ (Dharmasthala) ಧರ್ಮಸ್ಥಳ : ಜನವರಿ 18 ರಂದು ಪ್ರಥಮ ಬಾರಿಗೆ ಸರ್ವಜ್ಞ ಪೀಠವನ್ನು ಅಲಂಕರಿಸಲಿರುವ ಭಾವೀ ಪರ್ಯಾಯ ಪೀಠಾಧೀಶ, ಪರ್ಯಾಯ ಪೂರ್ವಭಾವಿ ಸಂಚಾರದಲ್ಲಿರುವ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶಿಷ್ಯರೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.    ಧರ್ಮಸ್ಥಳದಲ್ಲಿ ಭಾವೀ ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರನ್ನು ಸರ್ವ […]

ಶೀರೂರು ಶ್ರೀಗಳನ್ನು ಸರ್ವ ಗೌರವಗಳೊಂದಿಗೆ  ಸ್ವಾಗತಿಸಿದ ಧರ್ಮಾಧಿಕಾರಿ ಹೆಗ್ಗಡೆ

(Dharmasthala) ಧರ್ಮಸ್ಥಳ : ಜನವರಿ 18 ರಂದು ಪ್ರಥಮ ಬಾರಿಗೆ ಸರ್ವಜ್ಞ ಪೀಠವನ್ನು ಅಲಂಕರಿಸಲಿರುವ ಭಾವೀ ಪರ್ಯಾಯ ಪೀಠಾಧೀಶ, ಪರ್ಯಾಯ ಪೂರ್ವಭಾವಿ ಸಂಚಾರದಲ್ಲಿರುವ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶಿಷ್ಯರೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.

   ಧರ್ಮಸ್ಥಳದಲ್ಲಿ ಭಾವೀ ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರನ್ನು ಸರ್ವ ಗೌರವಗಳೊಂದಿಗೆ ವಿಜ್ರಂಭಣೆಯಿಂದ ಸ್ವಾಗತಿಸಲಾಯಿತು.

ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮೀಜಿ ದೇವರ ದರ್ಶನ ಪಡೆದರು.

  ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆ ಮತ್ತು ಮಾತೃ ಶ್ರೀ ಹೇಮಾವತಿ ಹೆಗ್ಗಡೆಯವರನ್ನು ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಅವರ ಅಧಿಕೃತ ನಿವಾಸ (ಬೀಡು) ದಲ್ಲಿ ಭೇಟಿ ಮಾಡಿ ಉಡುಪಿ ಪರ್ಯಾಯೋತ್ಸವಕ್ಕೆ ಆಹ್ವಾನಿಸಿದರು.  

  ಈ ಸಂದರ್ಭದಲ್ಲಿ ಶೀರೂರು ಮಠದ ದಿವಾನರಾದ ಡಾ. ಉದಯ ಕುಮಾರ್ ಸರಳತ್ತಾಯ, ಶ್ರೀ ಕ್ಷೇತ್ರ ಧರ್ಮಸ್ಥಳದ  ಅರ್ಚಕ ವರ್ಗ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.