• Home  
  • ‘ಭಾಷಾ ವೈವಿಧ್ಯತೆ ಮತ್ತು ದಕ್ಷಿಣ ಭಾರತದ ಅಸ್ಮಿತೆ’ ಬಗ್ಗೆ  ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ (Two-day National Symposium on ‘Linguistic Diversity and South Indian Identity’)
- ಶಾಲಾ ಕಾಲೇಜು

‘ಭಾಷಾ ವೈವಿಧ್ಯತೆ ಮತ್ತು ದಕ್ಷಿಣ ಭಾರತದ ಅಸ್ಮಿತೆ’ ಬಗ್ಗೆ  ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ (Two-day National Symposium on ‘Linguistic Diversity and South Indian Identity’)

Share: ‘ಭಾಷಾ ವೈವಿಧ್ಯತೆ ಮತ್ತು ದಕ್ಷಿಣ ಭಾರತದ ಅಸ್ಮಿತೆ’ ಬಗ್ಗೆ  ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ದ್ರಾವಿಡ ಭಾಷೆಗಳ ಭವಿಷ್ಯ ಮತ್ತು ಭಾಷಾ ಅಸಮಾನತೆ ಕುರಿತ ಚಿಂತನೆಗಳಿಗೆ  ಸೂಕ್ತ ವೇದಿಕೆ: ಡಾ ಡಾ ಡಿ. ವಿ ಪರಮಶಿವಮೂರ್ತಿ ವಿಚಾರ ಸಂಕಿರಣ ಉದ್ಘಾಟಿಸಿದ ಕುಲಪತಿಗಳಾದ ಡಾ ಡಿ. ವಿ ಪರಮಶಿವಮೂರ್ತಿ(Moodabidri) ಮೂಡುಬಿದಿರೆ: ಮೂಡಬಿದ್ರಿಯ ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಕುವೆಂಪು ಸಭಾಂಗಣದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಆಳ್ವಾಸ್ […]

     ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಮಾತನಾಡಿ, ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ನಿರಂತರ ಪ್ರಯತ್ನಗಳ ಅಗತ್ಯವಿದೆ ಎಂದರು.
  ವಿಚಾರ ಸಂಕಿರಣದ ಸಂಚಾಲಕರು ಹಾಗೂ  ಹಂಪಿ ಕನ್ನಡ ವಿವಿಯ ಹಿರಿಯ ಪ್ರಾಧ್ಯಾಪಕ ಡಾ ಮಾಧವ ಪೆರಾಜೆ ವಿಚಾರ ಸಂಕಿರಣದ ಉದ್ದೇಶಗಳು ಹಾಗೂ ಸಮಕಾಲೀನ ಮಹತ್ವವನ್ನು ವಿವರಿಸಿದರು.
  ದಿಕ್ಸೂಚಿ ಭಾಷಣ ಮಾಡಿದ ಕನ್ನಡ ಭಾಷಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಪುರುಷೋತ್ತಮ ಬಿಳಿಮಲೆ,  ಭಾಷೆಗಳ ಕುರಿತು ನಡೆಯುವ ಚರ್ಚೆಗಳು ಇಂದಿಗೂ ಹಳೆಯ ಅಂಕಿ ಅಂಶಗಳ ಮೇಲೆ ಅವಲಂಬಿತವಾಗಿರುವುದು ದುರಾದೃಷ್ಟಕರ ಎಂದರು.

  ಭಾಷಾ ಆಡಳಿತ ವ್ಯವಸ್ಥೆಯಲ್ಲಿಯೂ ಅಸಮಾನತೆ ಇದ್ದು, ಹಿಂದಿ ಭಾಷೆ ಕೇಂದ್ರ ಗೃಹ ಇಲಾಖೆಯ ಅಧೀನದಲ್ಲಿದ್ದರೆ, ಇತರ ಭಾಷೆಗಳು ಭಾರತದ ಸರ್ಕಾರದ   ಮೊದಲ ದಿನದ ಪ್ರಥಮ ಗೋಷ್ಠಿಯಲ್ಲಿ ಕೇರಳದ ಖ್ಯಾತ ಬರಹಗಾರ ಹಾಗೂ ಭಾಷಾಂತಕಾರಾದ ಡಾ. ಸುಧಾಕರ್ ರಾಮಂತಳಿ ಬಹುಭಾಷೆಗಳು ಹಾಗೂ  ಮತ್ತು ದಕ್ಷಿಣ ಭಾರತದ ಸಾಂಸ್ಕೃತಿಕ ಅನನ್ಯತೆ ಕುರಿತು, ಡಾ ವಿ ಬಿ ತಾರಕೇಶ್ವರ, ದಕ್ಷಿಣ ಭಾರತದ ಭಾಷಾ ರಾಷ್ಟ್ರೀಯತೆಯ   ಪರಿಕಲ್ಪನೆ, ಡಾ ಡಿ. ಪಾಂಡುರಂಗ ಬಾಬು – ಜಾತಿ ವ್ಯವಸ್ಥೆ ಮತ್ತು ಭಾಷೆ: ಸಮಜೋ ಭಾಷಾ ವೈಜ್ಞಾನಿಕ ಚಿಂತನೆಗಳು, ಎರಡನೇ ಗೋಷ್ಠಿಯಲ್ಲಿ ಶ್ರೀಕೃಷ್ಣದೇವರಾಯ ವಿವಿ ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕ ಡಾ ರಾಬರ್ಟ ಜೋಶ್- ಜಾಗತಿಕ ಮತ್ತು ಗ್ಲೊಕಲ್ ರಾಜಕರಣದ ನೆಲೆಗಳು, ಡಾ ರೇಖಾ ದತ್ತ, ದಕ್ಷಿಣ ಭಾರತದ ಸ್ತ್ರೀ ವಾದಿ ಬರಹಗಳು ವಿಷಯದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಾಂಗಾಳ ಬಾಬು ಕೊರಗ, ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ. ಕುರಿಯನ್ ಇದ್ದರು.
 ಆಳ್ವಾಸ್ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಸ್ವಾಗತಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಸುಧಾರಾಣಿ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.