ಮಾರ್ಚ್ 24ರ ಮಂಗಳವಾರ ಮತ್ತು 25 ರ ಬುಧವಾರ ಕಾಪುವಿನಲ್ಲಿ “ಸುಗ್ಗಿ ಮಾರಿ ಪೂಜೆ”
ಕಾಪುವಿನ ಹಳೆ ಮಾರಿಯಮ್ಮ, ಹೊಸ ಮಾರಿಯಮ್ಮ ಮತ್ತು ಕಲ್ಯ ಮಾರಿಯಮ್ಮನ ಮಾರಿಗುಡಿಗಳಲ್ಲಿ ಮಾರಿ ಪೂಜೆ
(Kaup) ಕಾಪು: ತುಳುನಾಡಿನ ಸಪ್ತಜಾತ್ರೆಗಳಲ್ಲಿ ಒಂದಾದ ಕಾಪುವಿನ ಇತಿಹಾಸ ಪ್ರಸಿದ್ಧ ಸುಗ್ಗಿ ಮಾರಿಪೂಜೆ ಮಾರ್ಚ್ 24ರ ಮಂಗಳವಾರ ಮತ್ತು 25 ರ ಬುಧವಾರ ನಡೆಯಲಿದೆ.
ಕಾಪುವಿನಲ್ಲಿ ಹಳೆ ಮಾರಿಯಮ್ಮ, ಹೊಸ ಮಾರಿಯಮ್ಮ ಮತ್ತು ಕಲ್ಯ ಮಾರಿಯಮ್ಮನ ಮಾರಿಗುಡಿಗಳಿದ್ದು, ಮೂರು ಮಾರಿಗುಡಿಗಳಲ್ಲಿ ಏಕ ಕಾಲಕ್ಕೆ ಮಾರಿ ಪೂಜೆ ನಡೆಯುವುದು ವಿಷೇಶ.
ಕಾಪುವಿನ ಮೂರು ಮಾರಿಗುಡಿಗಳಲ್ಲಿ ತುಳುವರ ಆಟಿ, ಜಾರ್ದೆ ಮತ್ತು ಸುಗ್ಗಿ ಮಾರಿ ಪೂಜೆ ಏಕ ಕಾಲಕ್ಕೆ ಸಂಪನ್ನಗೊಳ್ಳುತ್ತದೆ.
ಹೊಸ ಮಾರಿಗುಡಿಗೆ ಬರುವ ಭಕ್ತಾದಿಗಳಿಗೆ ದೇವಿಯ ದರುಶನಕ್ಕೆ ಸರತಿ ಸಾಲಿನ ವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ, ಹಣ್ಣುಕಾಯಿ, ಕುರಿ – ಕೋಳಿ ಹರಕೆ ಸಮರ್ಪಣೆಗೆ ವ್ಯವಸ್ಥೆ ಮತ್ತು ಸೂಕ್ತ ಪೋಲಿಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಕಾರ್ಯನಿರ್ವಹಣಾಧಿಕಾರಿ ಮತ್ತು ಅಭಿವೃದ್ಧಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

