• Home  
  • ಮಂಗಳೂರಿನಲ್ಲಿ ಬೆಂಕಿ ಹಚ್ಚಿ ಕಾರ್ಮಿಕನನ್ನು ಕೊಂದ ಮಾಲೀಕ, ಬಳಿಕ ಕರೆಂಟ್​ ಶಾಕ್​ ನಾಟಕ
- ಅಪರಾಧ

ಮಂಗಳೂರಿನಲ್ಲಿ ಬೆಂಕಿ ಹಚ್ಚಿ ಕಾರ್ಮಿಕನನ್ನು ಕೊಂದ ಮಾಲೀಕ, ಬಳಿಕ ಕರೆಂಟ್​ ಶಾಕ್​ ನಾಟಕ

Share: ಮಂಗಳೂರು : ಪೆಟ್ರೋಲ್​ ಸುರಿದು ತಾನೇ ಬೆಂಕಿ ಹಚ್ಚಿ ಕಾರ್ಮಿಕನನ್ನು ಮಾಲೀಕನೇ ಕೊಂದು ಹಾಕಿದ ಘಟನೆ ಮಂಗಳೂರಿನ ಮುಳಿಹಿತ್ಲು ಜಂಕ್ಷನ್​ ಬಳಿಯಲ್ಲಿ ಸಂಭವಿಸಿದೆ. ಉತ್ತರ ಭಾರತ ಮೂಲದ ಗಜ್ಞಾನ್​ ಅಲಿಯಾಸ್​ ಜಗು ಕೊಲೆಯಾದ ಕಾರ್ಮಿಕ. ಮುಶುಪಾ ಜನರಲ್ ಸ್ಟೋರ್​ ಮಾಲೀಕನಾದ ತೌಸಿಫ್​ ಹುಸೈನ್​ ಎಂಬಾತ ಈ ದುಷ್ಕೃತ್ಯ ಎಸಗಿದ್ದಾನೆ. ಶನಿವಾರ ಬೆಳಗ್ಗೆ 7:30ರ ಸುಮಾರಿಗೆ ಜಗುಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಆತನನ್ನು ಕೊಂದಿದ್ದ ತೌಸಿಫ್​ ಹುಸೈನ್​ ಈ ಘಟನೆಯಿಂದ ತನ್ನನ್ನು ತಾನು ಬಚಾವ್​ ಮಾಡೋಕೆ […]

ಮಂಗಳೂರು : ಪೆಟ್ರೋಲ್​ ಸುರಿದು ತಾನೇ ಬೆಂಕಿ ಹಚ್ಚಿ ಕಾರ್ಮಿಕನನ್ನು ಮಾಲೀಕನೇ ಕೊಂದು ಹಾಕಿದ ಘಟನೆ ಮಂಗಳೂರಿನ ಮುಳಿಹಿತ್ಲು ಜಂಕ್ಷನ್​ ಬಳಿಯಲ್ಲಿ ಸಂಭವಿಸಿದೆ.

ಉತ್ತರ ಭಾರತ ಮೂಲದ ಗಜ್ಞಾನ್​ ಅಲಿಯಾಸ್​ ಜಗು ಕೊಲೆಯಾದ ಕಾರ್ಮಿಕ.

ಮುಶುಪಾ ಜನರಲ್ ಸ್ಟೋರ್​ ಮಾಲೀಕನಾದ ತೌಸಿಫ್​ ಹುಸೈನ್​ ಎಂಬಾತ ಈ ದುಷ್ಕೃತ್ಯ ಎಸಗಿದ್ದಾನೆ.

ಶನಿವಾರ ಬೆಳಗ್ಗೆ 7:30ರ ಸುಮಾರಿಗೆ ಜಗುಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಆತನನ್ನು ಕೊಂದಿದ್ದ ತೌಸಿಫ್​ ಹುಸೈನ್​ ಈ ಘಟನೆಯಿಂದ ತನ್ನನ್ನು ತಾನು ಬಚಾವ್​ ಮಾಡೋಕೆ ಹೊಸ ಕತೆಯನ್ನು ಹೆಣೆದಿದ್ದ. ಮಶುಪಾ ಜನರಲ್​ ಸ್ಟೋರ್ ಸಮೀಪವೇ ಈ ಕೃತ್ಯ ಎಸಗಿದ್ದ ಪಾಪಿ ಮಧ್ಯಾಹ್ನ 1:30ರ ಸುಮಾರಿಗೆ ವೆನ್ಲಾಕ್​ ಆಸ್ಪತ್ರೆಗೆ ಜಗು ಮೃತದೇಹವನ್ನು ರವಾನೆ ಮಾಡಿದ್ದ.

ಇಲ್ಲಿ ವಿದ್ಯುತ್​ ಶಾಕ್​ನಿಂದ ಜಗು ಮೃತಪಟ್ಟಿದ್ದಾನೆ ಎಂದು ಸುಳ್ಳು ಕಾರಣ ನೀಡಿದ್ದಾನೆ.

 ಆದರೆ ತೌಸಿಫ್​ ನಡವಳಿಕೆಯಿಂದ ಅನುಮಾನಗೊಂಡ ಪಾಂಡೇಶ್ವರ ಠಾಣಾ ಪೊಲೀಸರು ಸೂಕ್ತ ತನಿಖೆ ನಡೆಸಿದ್ದಾರೆ. ವಿಚಾರಣೆ ವೇಳೆ ತೌಸಿಫ್​ ತಾನೇ ಈ ಕೃತ್ಯ ಎಸಗಿದ್ದು ಪ್ರಕರಣವನ್ನು ತಿರುಚಲು ಈ ರೀತಿ ಸುಳ್ಳು ಹೇಳಿದ್ದಾಗಿ ಒಪ್ಪಿಕೊಂಡಿದ್ದಾನೆ.

ಈ ಸಂಬಂಧ ತೌಸಿಫ್​​ ಹುಸೈನ್​​ನನ್ನು ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.