• Home  
  • ಮಂಗಳೂರು : ಭೀಕರ ಅಪಘಾತ, ಆರುಮಂದಿ ಧಾರುಣ ಸಾವು
- ಅಪಘಾತ

ಮಂಗಳೂರು : ಭೀಕರ ಅಪಘಾತ, ಆರುಮಂದಿ ಧಾರುಣ ಸಾವು

Share: ಮಂಗಳೂರು : ಭೀಕರ ಅಪಘಾತ, ಆರು ಮಂದಿ ಧಾರುಣ ಸಾವು ತಲಪಾಡಿ ಟೋಲ್‌ ಗೇಟ್‌ ಬಳಿ ಗುರುವಾರ ಮದ್ಯಾಹ್ನ ಘಟಿಸಿದ ಘಟನೆ (Mangaluru) ಮಂಗಳೂರು : ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿ, ಹಲವಾರು ಜನರು ಗಾಯಗೊಂಡ ಘಟನೆ ತಲಪಾಡಿ ಟೋಲ್‌ ಗೇಟ್‌ ಬಳಿ ಗುರುವಾರ ಮದ್ಯಾಹ್ನ ಸಂಭವಿಸಿದೆ.  ಟೋಲ್‌ ಗೇಟ್‌ ಬಳಿ ಸರಕಾರಿ ಕೆಎಸ್‌ ಆರ್‌ಟಿಸಿ ಬಸ್ಸೊಂದು ಅತಿವೇಗದಲ್ಲಿ ಏಕಾಏಕಿ ರಿವರ್ಸ್‌ ಚಲಿಸಿದ ಕಾರಣ ನಿಲ್ಲಿಸಿದ ರಿಕ್ಷಾ ಮತ್ತು ಕಾರಿಗೆ […]

(Mangaluru) ಮಂಗಳೂರು : ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿ, ಹಲವಾರು ಜನರು ಗಾಯಗೊಂಡ ಘಟನೆ ತಲಪಾಡಿ ಟೋಲ್‌ ಗೇಟ್‌ ಬಳಿ ಗುರುವಾರ ಮದ್ಯಾಹ್ನ ಸಂಭವಿಸಿದೆ.

 ಟೋಲ್‌ ಗೇಟ್‌ ಬಳಿ ಸರಕಾರಿ ಕೆಎಸ್‌ ಆರ್‌ಟಿಸಿ ಬಸ್ಸೊಂದು ಅತಿವೇಗದಲ್ಲಿ ಏಕಾಏಕಿ ರಿವರ್ಸ್‌ ಚಲಿಸಿದ ಕಾರಣ ನಿಲ್ಲಿಸಿದ ರಿಕ್ಷಾ ಮತ್ತು ಕಾರಿಗೆ ಹೊಡೆದಿದೆ.

 ಕೆಸಿ ರೋಡ್ ಮೂಲದವರೆನ್ನಲಾದ ೬ ಮಂದಿ ಒಂದೇ ಕುಟುಂಬವವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮೃತಪಟ್ಟವರಲ್ಲಿ ಅಟೋ ಚಾಲಕ ಹೈದರ್(47), ಫರಂಗಿಪೇಟೆ ನಿವಾಸಿ ಅಬ್ದುಲ್ ಖಾದರ್ ರವರ ಪತ್ನಿಅವ್ವಮ್ಮ (72), ಅಜ್ಜಿನಡ್ಕ ಕೋಟೆಕಾರ್ ಮೊಯ್ದೀನ್ ಕುಂಞಿ ಯವರ ಪತ್ನಿ ಖದೀಜಾ, ಅಜ್ಜಿನಡ್ಕ ಕೋಟೆಕಾರ್ ನಿವಾಸಿ ಮೊಯ್ದೀನ್ ಕುಂಞಿಯವರ ಮಗಳು ಹಸ್ನಾ (11), ಅಜ್ಜುನಡ್ಕ ಕೋಟೆಕಾರ್ ಮೊಹಮ್ಮದ್ರವರ ಪತ್ನಿ ನಫೀಸಾ (52), ಅವರ ಮಗಳು ಆಯಿಷಾ ಫಿದಾ (19) ಮೃತ ಪಟ್ಟಿದ್ದಾರೆ.

ಪೆರುಂಬಳ ಕಾಸರಗೋಡು ನಿವಾಸಿ ಲಕ್ಷ್ಮೀ ಮತ್ತು ಸುರೇಂದ್ರ ಗಾಯಗೊಂಡವರು ಎಂದು ತಿಳಿದು ಬಂದಿದೆ.

ಮಂಜೇಶ್ವರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.