ಮಂಗಳೂರು: ಶಾಲೆಯ ಮೇಲ್ಪಾವಣಿ ಕುಸಿದು ಎಲ್ಕೆಜಿ ಮಗುವಿಗೆ ಗಾಯ
(Mangaluru) ಮಂಗಳೂರು: ಅಧ್ಯಾಪಕಿ ಪಾಠ ಮಾಡುತ್ತಿದ್ದಂತೆ ಶಾಲೆಯ ಮೇಲ್ಬಾವಣಿ ಧರಾಶಾಯಿಯಾಗಿ ಮಗು ಗಾಯಗೊಂಡ ಘಟನೆ ಬಜಪೆಯ ಕೆಂಜಾರು ಜೋಕಟ್ಟೆ ವ್ಯಾಪ್ತಿಯ ಪೇಜಾವರ ಶ್ರೀ ಮುಖ್ಯಪ್ರಾಣ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಘಟಿಸಿದೆ.
ಈ ಶಾಲೆಯಲ್ಲಿ ಸುಮಾರು 25ರಿಂದ 27 ಎಲ್ಕೆಜಿಯಲ್ಲಿ ಮಕ್ಕಳು ಕಲಿಯುತ್ತಿದ್ದು, ಅದೃಷ್ಟವಶಾತ್ ಪಾರಾಗಿದ್ದಾರೆ.
ಆದರೆ ಒಂದು ಮಗುವಿಗೆ ಕೊಂಚ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಳಿದ ಎಲ್ಲಾ ಮಕ್ಕಳು ಯಾವುದೇ ಗಾಯ ಇಲ್ಲದೆ ಪಾರಾಗಿದ್ದಾರೆ.

