ಮಂಡ್ಯ: ಜಿಲ್ಲೆಯಲ್ಲಿ ಜನರು ಬೆಚ್ಚಿ ಬೀಳುವಂತೆ ಭಯಾನಕ ಮರ್ಡರ್ ಒಂದು ನಡೆದಿದೆ.
ರೌಡಿಶೀಟರ್ ಒಬ್ಬನನ್ನು ಸ್ನೇಹಿತರೇ ಕತ್ತು ಕತ್ತರಿಸಿ ಕೊಲೆ ಮಾಡಿರುವಂತ ಭೀಕರ ಘಟನೆ ಮಂಡ್ಯದ ಶ್ರೀರಂಗಪಟ್ಟಣದ ಬಳಿ ನಡೆದಿದೆ. ಈ ಮೂಲಕ ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹುಲಿಕೆರೆಯಲ್ಲಿ ಕೆ ಆರ್ ಎಸ್ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದಂತ ಸುಧೀರ್ (35) ಎಂಬಾತನನ್ನು ಭಯಾನಕವಾಗಿ ಹತ್ಯೆ ಮಾಡಲಾಗಿದೆ.
ರೌಡಿ ಶೀಟರ್ ಸುಧೀರ್ ಹಾಗೂ ಸ್ನೇಹಿತರೊಂದಿಗೆ ಇಂದು ಕುಡಿತದ ಪಾರ್ಟಿ ಮಾಡಿದ್ದಾರೆ. ಸ್ನೇಹಿತ ಪೂರ್ಣಚಂದ್ರ ಹಾಗೂ ಇತರೆ ಸ್ನೇಹಿತರು ಪಾರ್ಟಿ ಮಾಡುವ ವೇಳೆಯಲ್ಲಿ ಗಲಾಟೆ ಶುರುವಾಗಿದೆ.
ಪಾರ್ಟಿಯ ಮಧ್ಯೆ ಹೊತ್ತಿಕೊಂಡಂತ ಜಗಳ ತಾರಕ್ಕೇರಿದೆ. ಇದರಿಂದಾಗಿ ಪಾರ್ಟಿಯಿಂದ ಅರ್ಧಕ್ಕೆ ಹುಲಿಕೆರೆಯ ರಸ್ತೆ ಬಳಿಗೆ ರೌಡಿ ಶೀಟರ್ ಸುಧೀರ್ ಎದ್ದು ಬಂದಿದ್ದಾರೆ. ಆದ್ರೇ ಆತನನ್ನು ಹಿಂಬಾಲಿಸಿಕೊಂಡು ಬಂದಂತ ಪೂರ್ಣಚಂದ್ರ ಹಾಗೂ ಸ್ನೇಹಿತರು ಸುಧೀರ್ ಕುತ್ತಿಗೆ ಕತ್ತರಿಸಿದ್ದಾರೆ.
ಸುಧೀರ್ ತಲೆಯನ್ನು ಕತ್ತರಿಸಿದಂತ ಪೂರ್ಣಚಂದ್ರ ಹಾಗೂ ಸ್ನೇಹಿತರು ಅಲ್ಲಿಂದ ಪರಾರಿಯಾಗಿದ್ದಾರೆ. ಹುಲಿಕೆರೆಯ ರಸ್ತೆಯ ಬಳಿಯಲ್ಲಿ ಭಯಾನಕ ಮರ್ಡರ್ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಈ ಬಗ್ಗೆ ಕೆ ಆರ್ ಎಸ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಕೊಲೆಯಾದ ರೌಡಿ ಶೀಟರ್ ಸುಧೀರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ರೌಡಿ ಶೀಟರ್ ಸುಧೀರ್ ನನ್ನು ಸ್ನೇಹಿತರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಕ್ಕೆ ಕಾರಣ ಹಳೆ ದ್ವೇಷ ಎನ್ನಲಾಗುತ್ತಿದೆ.

