ಉತ್ತರ ಪ್ರದೇಶ: ಮದುವೆಯಾದ ಮೊದಲ ರಾತ್ರಿ ಬೆಳಗಾಗುವುದರಲ್ಲಿ ದಂಪತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ದಾರುಣ ಘಟನೆ ಉತ್ತರ ಪ್ರದೇಶದ ಬಹ್ಮಚ್ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಪ್ರತಾಪ್ ಯಾದವ್ (22), ಪುಷ್ಪಾ (20) ಎಂದು ತಿಳಿದು ಬಂದಿದೆ.
ಇವರಿಗೆ ಮೇ 30ರಂದು ವಿವಾಹವಾಗಿದ್ದರು. ಮದುವೆ © ಮೊದಲ ರಾತ್ರಿ ಮನೆಯವರು ದಂಪತಿಯನ್ನು ಕೋಣೆಗೆ ಬಿಟ್ಟು
ಬಂದಿದ್ದರು. ಆದರೆ, ಬೆಳಗ್ಗೆ ಕೋಣೆಯ ಬಾಗಿಲು ತೆರೆಯದಿದ್ದ ಹಿನ್ನೆಲೆಯಲ್ಲಿ ಮನೆಯವರು ಬಾಗಿಲು ಮುರಿದು ನೋಡಿದಾಗ ದಂಪತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಮನೆಯವರು ಶಂಕೆ ವ್ಯಕ್ತಪಡಿಸಿದ್ದರು. ಬಳಿಕ ಸ್ಥಳ ಬಂದ ಪೊಲೀಸರು ಶವಗಳನ್ನು ಮಹಜರು ಪಡಿಸಿ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ.

