ಮಧ್ಯಪ್ರದೇಶ: ಗುಂಪು ಘರ್ಷಣೆಯಲ್ಲಿ ಐವರ ಹತ್ಯೆ
ಮಧ್ಯಪ್ರದೇಶ: ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ ಸಾಕು ಪ್ರಾಣಿಗಳನ್ನು ಮೇಯಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಪರಸ್ಪರ ಗುಂಡು ಹಾರಿಸಿದ ಪರಿಣಾಮ ಐವರು ಸಾವನ್ನಪ್ಪಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲದಿಂದ ತಿಳಿದು ಬಂದಿದೆ.
ಪ್ರಕಾಶ್ ಡಾಂಗಿ, ರಾಮ್ ನರೇಶ್ ಡಾಂಗಿ, ಸುರೇಂದ್ರ ಡಾಂಗಿ, ರಾಜೇಂದ್ರ ಪಾಲ್ ಹಾಗೂ ರಾಘವೇಂದ್ರ ಪಾಲ್ ಅವರು ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದರ ನಂತರ ಬುಧವಾರ ಬೆಳಗ್ಗೆ ಎರಡು ಸಮುದಾಯಗಳ ಸದಸ್ಯರು ಮತ್ತೊಮ್ಮೆ ಗಲಾಟೆ ನಡೆಸಿದ್ದು, ಈ ವೇಳೆ ಪರಸ್ಪರ ಗುಂಡಿನ ದಾಳಿ ನಡೆದು ಐವರು ಮೃತಪಟ್ಟು ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪೊಲೀಸರು ಘಟನಾ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

