• Home  
  • ಮಲ್ಪೆ: ದಕ್ಕೆಯಲ್ಲಿ ನಿಲ್ಲಿಸಲಾಗಿದ್ದ ಬೋಟಿಗೆ ಬೆಂಕಿ: ಲಕ್ಷಾಂತರ ರೂ. ನಷ್ಠ (Malpe: Fire breaks out in boat parked in dock: Losses worth lakhs of rupees)
- Uncategorised - ಅಪಘಾತ

ಮಲ್ಪೆ: ದಕ್ಕೆಯಲ್ಲಿ ನಿಲ್ಲಿಸಲಾಗಿದ್ದ ಬೋಟಿಗೆ ಬೆಂಕಿ: ಲಕ್ಷಾಂತರ ರೂ. ನಷ್ಠ (Malpe: Fire breaks out in boat parked in dock: Losses worth lakhs of rupees)

Share: ಮಲ್ಪೆ: ದಕ್ಕೆಯಲ್ಲಿ ನಿಲ್ಲಿಸಲಾಗಿದ್ದ ಬೋಟಿಗೆ ಬೆಂಕಿ: ಲಕ್ಷಾಂತರ ರೂ. ನಷ್ಠ ಮಲ್ಪೆ: ಮಲ್ಪೆ ಬಾಪುತೋಟ ಬಳಿಯ ಮೀನುಗಾರಿಕಾ ಬಂದರಿನ ಸೇತುವೆ ಪಕ್ಕದಲ್ಲಿ ಲಂಗರು ಹಾಕಿ ನಿಲ್ಲಿಸಿದ್ದ ಬೋಟಿಗೆ ಬೆಂಕಿ ತಗಲಿ ಸರಿ ಸುಮಾರು 15 ಲಕ್ಷ ರೂ. ಗಳಷ್ಟು ಹಾನಿ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಗುರುವಾರ ತಡರಾತ್ರಿ ಬೋಟಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯಿಂದ ಅಪಾರ ನಷ್ಠ ಉಂಟಾಗಿದೆ. ಮಲ್ಪೆಯ ಜನಾರ್ದನ ಟಿ. ಕಾಂಚನ್ ಎಂಬವರಿಗೆ ಸೇರಿದ “ರವಿಪ್ರಕಾಶ್” ಬೋಟು ಇದಾಗಿದ್ದು, ಗುರುವಾರ ಮೀನುಗಾರಿಕೆ ಮುಗಿಸಿ ದಡದಲ್ಲಿ […]

ಮಲ್ಪೆ: ದಕ್ಕೆಯಲ್ಲಿ ನಿಲ್ಲಿಸಲಾಗಿದ್ದ ಬೋಟಿಗೆ ಬೆಂಕಿ: ಲಕ್ಷಾಂತರ ರೂ. ನಷ್ಠ

ಮಲ್ಪೆ: ಮಲ್ಪೆ ಬಾಪುತೋಟ ಬಳಿಯ ಮೀನುಗಾರಿಕಾ ಬಂದರಿನ ಸೇತುವೆ ಪಕ್ಕದಲ್ಲಿ ಲಂಗರು ಹಾಕಿ ನಿಲ್ಲಿಸಿದ್ದ ಬೋಟಿಗೆ ಬೆಂಕಿ ತಗಲಿ ಸರಿ ಸುಮಾರು 15 ಲಕ್ಷ ರೂ. ಗಳಷ್ಟು ಹಾನಿ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಗುರುವಾರ ತಡರಾತ್ರಿ ಬೋಟಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯಿಂದ ಅಪಾರ ನಷ್ಠ ಉಂಟಾಗಿದೆ.

ಮಲ್ಪೆಯ ಜನಾರ್ದನ ಟಿ. ಕಾಂಚನ್ ಎಂಬವರಿಗೆ ಸೇರಿದ “ರವಿಪ್ರಕಾಶ್” ಬೋಟು ಇದಾಗಿದ್ದು, ಗುರುವಾರ ಮೀನುಗಾರಿಕೆ ಮುಗಿಸಿ ದಡದಲ್ಲಿ ಲಂಗರು ಹಾಕಿದ್ದರು. ತಡ ರಾತ್ರಿ ಏಕಾಏಕಿ ಬೆಂಕಿ ಹತ್ತಿಕೊಂಡಿದ್ದು, ಬೋಟಿನಲ್ಲಿ ಬಲೆ, 200 ಲೀ. ಡಿಸೇಲ್, ಜಿಪಿಎಸ್, ಫಿಶ್ ಫೈಂಡರ್, ಲೈಫ್ ಜಾಕೆಟ್, ವಾಟರ್ ಟ್ಯಾಂಕರ್, ಬಾಕ್ಸ್ ಸಂಪೂರ್ಣ ಭಸ್ಮವಾಗಿದೆ.

ಸಕಾಲದಲ್ಲಿ ಮಾಹಿತಿ ದೊರಕಿದ್ದರಿಂದ ತಪ್ಪಿದ ದೊಡ್ಡ ದುರಂತ

ಬೆಂಕಿ ಕಾಣಿಸಿಕೊಂಡ ಬೋಟಿನ ಸುತ್ತ ಸುಮಾರು 25ರಿಂದ 30 ಬೋಟುಗಳನ್ನು ಲಂಗರು ಹಾಕಿ ನಿಲ್ಲಿಸಲಾಗಿತ್ತು. ಸ್ಥಳೀಯ ದೋಣಿಯವರು ಗಮನಿಸಿ ಸಕಾಲದಲ್ಲಿ ಮಾಹಿತಿ ನೀಡಿದ ಕಾರಣ ಬೆಂಕಿಯನ್ನು ತಹಬದಿಗೆ ತರಲಾಯಿತು. ಸಮುದ್ರದ ನೀರಿನ ಉಬ್ಬರ ಇದ್ದ ಕಾರಣ ಬೆಂಕಿ ಬೇರೆ ಬೋಟುಗಳಿಗೆ ವ್ಯಾಪಿಸಿಲ್ಲ.

ಸ್ಥಳೀಯರು ಮತ್ತು ಉಡುಪಿ ಜಿಲ್ಲಾ ಅಗ್ನಿ ಶಾಮಕ ದಳ ಘಟನಾ ಸ್ಥಳಕ್ಕೆ ಆಗಮಿಸಿ, ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.