• Home  
  • ಮುಲ್ಕಿ: ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ವಿಜೃಂಭಣೆಯ ಪಲ್ಲಕಿ ಉತ್ಸವ, ಮಹಾ ರಥೋತ್ಸವ (Mulki: A grand pallakki festival, Maha Rathotsava at Punarur Shri Vishwanath Temple)
- ಧಾರ್ಮಿಕ

ಮುಲ್ಕಿ: ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ವಿಜೃಂಭಣೆಯ ಪಲ್ಲಕಿ ಉತ್ಸವ, ಮಹಾ ರಥೋತ್ಸವ (Mulki: A grand pallakki festival, Maha Rathotsava at Punarur Shri Vishwanath Temple)

Share: ಮುಲ್ಕಿ: ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ವಿಜೃಂಭಣೆಯ ಪಲ್ಲಕಿ ಉತ್ಸವ, ಮಹಾರಥೋತ್ಸವ (Mulki) ಮುಲ್ಕಿ: ಇತಿಹಾಸ ಪ್ರಸಿದ್ಧ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ, ಮಹಾರಥೋತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.   ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಪ್ರಾತಃಕಾಲ  ಕ್ಷೇತ್ರದ ತಂತ್ರಿಗಳಾದ ಕಳತ್ತೂರು ಕರುಣಾಕರ ತಂತ್ರಿ ಹಾಗೂ ಅರ್ಚಕ ಶಶಾಂಕ್ ಮುಚ್ಚಿಂತಾಯ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ, ಕವಾಟೋದ್ಘಾಟನೆ, ತುಲಾಭಾರ ಸೇವೆ ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ  ನಡೆಯಿತು ರಾತ್ರಿ ಶ್ರೀ ದೇವರ ಪಲ್ಲಕ್ಕಿ ಉತ್ಸವ, ಪೇಟೆ ಸವಾರಿ, […]

ಮುಲ್ಕಿ: ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ವಿಜೃಂಭಣೆಯ ಪಲ್ಲಕಿ ಉತ್ಸವ, ಮಹಾರಥೋತ್ಸವ

(Mulki) ಮುಲ್ಕಿ: ಇತಿಹಾಸ ಪ್ರಸಿದ್ಧ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ, ಮಹಾರಥೋತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.

  ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಪ್ರಾತಃಕಾಲ  ಕ್ಷೇತ್ರದ ತಂತ್ರಿಗಳಾದ ಕಳತ್ತೂರು ಕರುಣಾಕರ ತಂತ್ರಿ ಹಾಗೂ ಅರ್ಚಕ ಶಶಾಂಕ್ ಮುಚ್ಚಿಂತಾಯ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ, ಕವಾಟೋದ್ಘಾಟನೆ, ತುಲಾಭಾರ ಸೇವೆ ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ  ನಡೆಯಿತು

ರಾತ್ರಿ ಶ್ರೀ ದೇವರ ಪಲ್ಲಕ್ಕಿ ಉತ್ಸವ, ಪೇಟೆ ಸವಾರಿ, ಕಟ್ಟೆ ಪೂಜೆ , ಮಹಾ ರಥೋತ್ಸವ, ಅವಭೃತ, ಧ್ವಜಾವರೋಹಣ ನಡೆಯಿತು.

 ಈ ಸಂದರ್ಭ  ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ,  ಉದ್ಯಮಿ ರಾಮ ಮೂರ್ತಿ ರಾವ್, ಭುವನಾಭಿರಾಮ ಉಡುಪ, ಉದ್ಯಮಿ ಪೃಥ್ವಿರಾಜ ಆಚಾರ್ಯ ಕಿನ್ನಿಗೋಳಿ, ಕ್ಷೇತ್ರದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್, ವಿಷ್ಣು ಮೂರ್ತಿ ಆಚಾರ್ಯ, ವಿಪ್ರ ಸಂಪದದ ಅಧ್ಯಕ್ಷ ಸುಧಾಕರ್ ರಾವ್, ದೇವಪ್ರಸಾದ್ ಪುನರೂರು, ಪಟೇಲ್ ವಿಶ್ವನಾಥ ರಾವ್, ಗೋಪಿನಾಥ ರಾವ್, ಸುರೇಶ ರಾವ್ ನೀರಳಿಕೆ, ರಾಘವೇಂದ್ರ ರಾವ್ ಕೆರೆಕಾಡು, ಪುರಂದರ ಶೆಟ್ಟಿಗಾರ್, ರವಿ ಶೆಟ್ಟಿ ಪುನರೂರುಗುತ್ತು, ರಮೇಶ್ ರಾವ್ ಮೂಡುಮನೆ, ಚಂದ್ರಶೇಖರರಾವ್ ಎಸ್. ಕೋಡಿ ಮತ್ತಿತರರು ಉಪಸ್ಥಿತರಿದ್ದರು.

ಫೆಬ್ರವರಿ 22ರಂದು ಕ್ಷೇತ್ರಕ್ಕೆ ಸಂಬಂಧಪಟ್ಟ ಕುಜಿಂಗಿರಿ ಶ್ರೀ ರಕ್ತೇಶ್ವರೀ ಹಾಗೂ ಪರಿವಾರದೈವಗಳ ನೇಮೋತ್ಸವ ನಡೆಯಲಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.