• Home  
  • ಮಲ್ಪೆ ಸಮುದ್ರ ತೀರದಲ್ಲಿ ಇಬ್ಬರು ಹುಡುಗಿಯರು ನೀರುಪಾಲು : ಒಬ್ಬಾಕೆ ಮೃತ್ಯು : ಮತ್ತೋರ್ವಳ ರಕ್ಷಣೆ.
- ಅಪರಾಧ

ಮಲ್ಪೆ ಸಮುದ್ರ ತೀರದಲ್ಲಿ ಇಬ್ಬರು ಹುಡುಗಿಯರು ನೀರುಪಾಲು : ಒಬ್ಬಾಕೆ ಮೃತ್ಯು : ಮತ್ತೋರ್ವಳ ರಕ್ಷಣೆ.

Share: ಉಡುಪಿ: ಮಡಿಕೇರಿಯಿಂದ ನಾಪತ್ತೆಯಾಗಿದ್ದ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರು ಮಲ್ಪೆ ಸಮುದ್ರ ತೀರದಲ್ಲಿ ನೀರುಪಾಲಾಗಿದ್ದು, ಅವರಲ್ಲಿ ಒಬ್ಬಾಕೆ ಮೃತಪಟ್ಟು ಇನ್ನೊಬ್ಬಾಕೆ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲುಗೊಂಡಿರುವ ಘಟನೆ ಘಟಿಸಿದೆ. ಮಡಿಕೇರಿಯ ಖಾಸಗಿ ಕಾಲೇಜೊಂದರಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿರುವ ಮಾನ್ಯ ಮತ್ತು ಯಶಸ್ವಿನಿ ಎಂಬಿಬ್ಬರು ವಿದ್ಯಾರ್ಥಿನಿಯರು ಕಳೆದ ಮೂರು ದಿನಗಳ ಹಿಂದೆ ಇದ್ದಕ್ಕಿದಂತೆ ನಾಪತ್ತೆಯಾಗಿದ್ದರು. ಇತ್ತಕಡೆ ಶನಿವಾರ ಮಧ್ಯರಾತ್ರಿ ಮಲ್ಪೆ ತೀರದಲ್ಲಿ ಇಬ್ಬರು ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗುತ್ತಿದ್ದಾರೆ ಎಂಬ ಸುದ್ದಿ ತಿಳಿದು ಮುಳುಗುತಜ್ಞ ಈಶ್ವರ್ ಮಲ್ಪೆ ಘಟನಾ […]

ಉಡುಪಿ: ಮಡಿಕೇರಿಯಿಂದ ನಾಪತ್ತೆಯಾಗಿದ್ದ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರು ಮಲ್ಪೆ ಸಮುದ್ರ ತೀರದಲ್ಲಿ ನೀರುಪಾಲಾಗಿದ್ದು, ಅವರಲ್ಲಿ ಒಬ್ಬಾಕೆ ಮೃತಪಟ್ಟು ಇನ್ನೊಬ್ಬಾಕೆ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲುಗೊಂಡಿರುವ ಘಟನೆ ಘಟಿಸಿದೆ.

ಮಡಿಕೇರಿಯ ಖಾಸಗಿ ಕಾಲೇಜೊಂದರಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿರುವ ಮಾನ್ಯ ಮತ್ತು ಯಶಸ್ವಿನಿ ಎಂಬಿಬ್ಬರು ವಿದ್ಯಾರ್ಥಿನಿಯರು ಕಳೆದ ಮೂರು ದಿನಗಳ ಹಿಂದೆ ಇದ್ದಕ್ಕಿದಂತೆ ನಾಪತ್ತೆಯಾಗಿದ್ದರು.

ಇತ್ತಕಡೆ ಶನಿವಾರ ಮಧ್ಯರಾತ್ರಿ ಮಲ್ಪೆ ತೀರದಲ್ಲಿ ಇಬ್ಬರು ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗುತ್ತಿದ್ದಾರೆ ಎಂಬ ಸುದ್ದಿ ತಿಳಿದು ಮುಳುಗುತಜ್ಞ ಈಶ್ವರ್ ಮಲ್ಪೆ ಘಟನಾ ಸ್ಥಳಕ್ಕಾಗಮಿಸಿ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಬಾಲಕಿಯರನ್ನು ಮೇಲಕ್ಕೆತ್ತಿದ್ದರು.

ಆದರೆ ಅಷ್ಟೊತ್ತಿಗಾಗಲೇ ಮಾನ್ಯ ಎಂಬಾಕೆ ಸಾವಿಗೀಡಾಗಿದ್ದರೆ, ಯಶಸ್ವಿನಿಯ ಜೀವ ಉಳಿಸುವಲ್ಲಿ ಈಶ್ವರ್ ಮಲ್ಪೆ ಯಶಸ್ವಿಯಾಗಿದ್ದರು. ಅದಾಗಲೇ ಅಸ್ವಸ್ಥಗೊಂಡಿದ್ದ ಯಶಸ್ವಿನಿ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ.

ಯಶಸ್ವಿನಿ ನೀಡಿರುವ ಮಾಹಿತಿ ಪ್ರಕಾರ, ಪ್ರಥಮ ಪಿಯು ಸೈನ್ಸ್ ವಿಭಾಗದಲ್ಲಿ ಕಲಿಯುತ್ತಿರುವ ಇವರಿಬ್ಬರೂ ಕಳೆದ ಮೂರು ದಿನಗಳ ಹಿಂದೆ ಮಡಿಕೇರಿಯಿಂದ ತಮ್ಮ ಮನೆ ಬಿಟ್ಟು ಬಂದು ಮಂಗಳೂರಿಗೆ ಬಂದು ತಲುಪಿದ್ದಾರೆ. ಅಲ್ಲಿಂದ ಮುಂದೆ ಏನು ಮಾಡುವುದೆಂದು ತೋಚದೆ ನೇರವಾಗಿ ಉಡುಪಿಗೆ ಬಂದವರೇ ಮಲ್ಪೆ ಬೀಚಿಗೆ ಬಂದಿದ್ದರು. ಇಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಇವರಿಬ್ಬರೂ ಕಡಲ ಅಲೆಗಳ ಹೊಡೆತಕ್ಕೆ ಸಿಲುಕಿದ್ದಾರೆ.

ಇವರಿಬ್ಬರೂ ಮಡಿಕೇರಿಯಿಂದ ನಾಪತ್ತೆಯಾಗಿರುವ ಕುರಿತು ಅಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿಯೂ ಇದೀಗ ಲಭ್ಯವಾಗಿದೆ. ಅಪ್ರಾಪ್ತೆಯಾಗಿರುವ ಈ ಇಬ್ಬರು ಗೆಳತಿಯರು ಯಾಕೆ ಮನೆ ಬಿಟ್ಟು ಬಂದಿದ್ದರು ಎಂಬ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಮಲ್ಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.