• Home  
  • ಮಸ್ಕತ್ :  ಚಾರಿತ್ರಿಕ  ಶ್ರೀ ಸತ್ಯ ನಾರಾಯಣ ಪೂಜೆ ಸಂಪನ್ನ(Satyanarayana pooja at Mascat)
- ದೇಶ-ವಿದೇಶ

ಮಸ್ಕತ್ :  ಚಾರಿತ್ರಿಕ  ಶ್ರೀ ಸತ್ಯ ನಾರಾಯಣ ಪೂಜೆ ಸಂಪನ್ನ(Satyanarayana pooja at Mascat)

Share: (Mascat) ಮಸ್ಕತ್ :  ಚಾರಿತ್ರಿಕ  ಶ್ರೀ ಸತ್ಯ ನಾರಾಯಣ ಪೂಜೆ ಸಂಪನ್ನ ಮಸ್ಕತ್:‌ ಮಸ್ಕತ್ ನ “ಬಿರುವ ಜವನೆರ್”  ಸಂಘಟನೆಯ ಆಶ್ರಯದಲ್ಲಿ ಮಸ್ಕತ್‌ನ ದಾರಸೈಟ್  ಶ್ರೀ ಕೃಷ್ಣ ದೇವಸ್ಥಾನದಲ್ಲಿ ಪೂಜಾ ಸಹಿತ ಚಾರಿತ್ರಿಕ “ಶ್ರೀ ಸತ್ಯ ನಾರಾಯಣ ವೃತ ಮಹಾತ್ಮೆ” ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಜರಗಿತು.  ಹೊರ ರಾಷ್ಟ್ರದಲ್ಲಿ ಮೊದಲ ಬಾರಿ ಶನೀಶ್ವರ ಯಕ್ಷಗಾನ ಪ್ರದರ್ಶನ ಮಾಡಿದ ಕೀರ್ತಿ ಪಡೆದ ಮಂಗಳೂರು ಪಕ್ಷಿಕೆರೆಯ ಪದ್ಮನಾಭ ಶೆಟ್ಟಿಗಾರ್ ಸಂಚಾಲಕತ್ವದ ಶ್ರೀ ಶನೀಶ್ವರ ಭಕ್ತ ವೃಂದ ದವರಿಂದ ಸತ್ಯನಾರಾಯಣ ಪೂಜಾ […]

(Mascat) ಮಸ್ಕತ್ :  ಚಾರಿತ್ರಿಕ  ಶ್ರೀ ಸತ್ಯ ನಾರಾಯಣ ಪೂಜೆ ಸಂಪನ್ನ

ಮಸ್ಕತ್:‌ ಮಸ್ಕತ್ ನ “ಬಿರುವ ಜವನೆರ್”  ಸಂಘಟನೆಯ ಆಶ್ರಯದಲ್ಲಿ ಮಸ್ಕತ್‌ನ ದಾರಸೈಟ್  ಶ್ರೀ ಕೃಷ್ಣ ದೇವಸ್ಥಾನದಲ್ಲಿ ಪೂಜಾ ಸಹಿತ ಚಾರಿತ್ರಿಕ “ಶ್ರೀ ಸತ್ಯ ನಾರಾಯಣ ವೃತ ಮಹಾತ್ಮೆ” ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಜರಗಿತು.

 ಹೊರ ರಾಷ್ಟ್ರದಲ್ಲಿ ಮೊದಲ ಬಾರಿ ಶನೀಶ್ವರ ಯಕ್ಷಗಾನ ಪ್ರದರ್ಶನ ಮಾಡಿದ ಕೀರ್ತಿ ಪಡೆದ ಮಂಗಳೂರು ಪಕ್ಷಿಕೆರೆಯ ಪದ್ಮನಾಭ ಶೆಟ್ಟಿಗಾರ್ ಸಂಚಾಲಕತ್ವದ ಶ್ರೀ ಶನೀಶ್ವರ ಭಕ್ತ ವೃಂದ ದವರಿಂದ ಸತ್ಯನಾರಾಯಣ ಪೂಜಾ ಸಹಿತ ತಾಳಮದ್ದಳೆ ಸಂಪನ್ನ ಗೊಂಡಿತು.

 ಕಳೆದ ಮೂರು ದಶಕಗಳಿಂದ ತಾಳಮದ್ದಳೆ ಕಾರ್ಯಕ್ರಮಗಳನ್ನು ದೇಶ ವಿದೇಶ ಗಳಲ್ಲಿ ನೀಡಿರುವ ತುಳುನಾಡಿನ ಈ ಖ್ಯಾತ ತಂಡವು ಕರ್ನಾಟಕ, ಕೇರಳ, ಮಹಾರಾಷ್ಟ್ರ ರಾಜ್ಯ ಗಲ್ಲಿ ಹಾಗೂ ದುಬೈ, ಅಬುದಾಬಿ, ಮಸ್ಕತ್ ರಾಷ್ಟ್ರ ಗಳಲ್ಲಿ ಪೂಜಾ ಸಹಿತ ಶನೀಶ್ವರ ತಾಳಮದ್ದಳೆ ನಡೆಸಿ ಜನಪ್ರಿಯ ತೆ ಗಳಿಸಿವೆ.

 ಈ ಪೂರ್ವದಲ್ಲಿ “ಬಿರುವ ಜವನೆರ್” ಇದೇ ತಂಡ ದಿಂದ ಎರಡು ಬಾರಿ ಶನಿ ಪೂಜೆ ಯನ್ನು ಮಸ್ಕತ್ ನಲ್ಲಿ ಆಯೋಜಿಸಿ ಯಶಸ್ವಿ ಆಗಿದ್ದರು.

ಈ ಸಂಘಟನೆಯು ಧಾರ್ಮಿಕ ಮತ್ತು ಸಮಾಜ ಸೇವಾ ಚಟುವಟಿಕೆಯನ್ನು  ಕಳೆದ ಒಂದು ದಶಕ ದಿಂದ ನಡೆಸುತ್ತಿದೆ.

 ಮಸ್ಕತ್ ನಲ್ಲಿ ನೆಲೆಸಿರುವ ತುಳುನಾಡಿನ ಎಲ್ಲಾ ಸಮುದಾಯದವರು, ಕನ್ನಡ ಸಂಘದವರು ನಾಲ್ಕು ಘಂಟೆ ಗಳ ಕಾಲ ಚಾಪೆ ಯಲ್ಲಿ ಕುಳಿತು ಕಥೆಯನ್ನು ಆಲಿಸಿದರು.ಸುಮಾರು ಒಂದೂವರೆ ಸಾವಿರ ಭಕ್ತರು ಪೂಜೆ ಯಲ್ಲಿ ಭಾಗವಹಿಸಿ ಪ್ರಸಾದ ಭೋಜನ ಸ್ವೀಕರಿಸಿ ದರು.

 ಹಿಮ್ಮೇಳದಲ್ಲಿ ಡಾ. ಪ್ರಖ್ಯಾತ್ ಶೆಟ್ಟಿ, ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ, ದಯಾನಂದ ಕೋಡಿಕಲ್ ಹಾಗೂ ಅರ್ಥ ಧಾರಿಗಳಾಗಿ ಕದ್ರಿ ನವನೀತ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ ಮೊಯ್ಲೊಟ್ಟು, ಸದಾಶಿವ ಆಳ್ವ ತಲಪಾಡಿ, ಶಶಿಕಾಂತ್ ಶೆಟ್ಟಿ ಕಾರ್ಲ, ಪ್ರಸನ್ನ ಶೆಟ್ಟಿ ಅತ್ತೂರ್ ಗುತ್ತು, ಮನೋಹರ ಕುಂದರ್ ಎರ್ಮಾಳ್, ಪ್ರಜ್ವಲ್ ಶೆಟ್ಟಿ ಗುರುವಾಯನಕೆರೆ, ನಿತಿನ್ ಹುಣಸೆಕಟ್ಟೆ ಮತ್ತು ರವಿ ಭಟ್ ಪಡುಬಿದ್ರಿ ಅವರು ಪೂಜಾ ವ್ಯವಸ್ಥೆ ಯಲ್ಲಿ ಸಹಕರಿಸಿದ್ದರು.

 ಉಮೇಶ್ ಬಂಟ್ವಾಳ್, ಪ್ರೇಮ ಹಾಗೂ ವಾಸು ಅಣ್ಣಯ್ಯ ಪೂಜಾರಿ, ಯಶೋಧ ದಂಪತಿಗಳು ಸತ್ಯ ನಾರಾಯಣ ಪೂಜಾ ಸಂಕಲ್ಪ ದೀಕ್ಷಿತ ರಾಗಿದ್ದರು.

ಮುಖ್ಯ ಅತಿಥಿಗಳಾಗಿ ಅಲ್ ಅನ್ಸಾರಿ ಟ್ರೇಡಿಂಗ್ ನ ಕಿರಣ್ ಆಶರ್ ದಂಪತಿಗಳು, ಮಸ್ಕತ್ ಫಾರ್ಮಸಿ ಯ ರವಿಕುಮಾರ್ ದಂಪತಿಗಳು ಪಾಲ್ಗೊಂಡಿದ್ದರು.

 ಗುರುಪ್ರಸಾದ್ ನಾನಿಲ್ ಸ್ವಾಗತಿಸಿ ದರು.

 ನಿತಿನ್ ಹುಣಸೆಕಟ್ಟೆ ವಂದಿಸಿದರು. ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು.

 ಎಲ್ಲಾ ಕಲಾವಿದರನ್ನು ಒಮಾನ್ ಲಾಂಛನದ ಪ್ರತಿಕೃತಿ ನೀಡಿ ಗೌರವಿಸಲಾಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.