• Home  
  • ಬಾರ್ಕೂರು ಸಮೀಪ ಗುಂಡಿಕ್ಕಿ ವ್ಯಕ್ತಿಯ ಭೀಕರ ಕೊಲೆ
- ಅಪರಾಧ

ಬಾರ್ಕೂರು ಸಮೀಪ ಗುಂಡಿಕ್ಕಿ ವ್ಯಕ್ತಿಯ ಭೀಕರ ಕೊಲೆ

Share: ಬಾರ್ಕೂರು ಸಮೀಪ ಗುಂಡಿಕ್ಕಿ ವ್ಯಕ್ತಿಯ ಭೀಕರ ಕೊಲೆ (Barkuru murder)  ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರು  ಸಮೀಪದ ಹನೆಹಳ್ಳಿಯಲ್ಲಿ  ವ್ಯಕ್ತಿಯೋರ್ವನನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಭಾನುವಾರ ಸಂಭವಿಸಿದೆ.  ಕೊಲೆಯಾದ ವ್ಯಕ್ತಿ ಕೃಷ್ಣ(38) ಎಂದು ತಿಳಿದು ಬಂದಿದೆ. ಇವರು ಗಾರೆ ಕೆಲಸ ಮಾಡಿಕೊಂಡಿದ್ದರು. ವಿವಾಹಿತರಾಗಿದ್ದರೂ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು ಎಂದು ತಿಳಿದು ಬಂದಿದೆ. ಇವನನ್ನು ಯಾರೋ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. […]

ಬಾರ್ಕೂರು ಸಮೀಪ ಗುಂಡಿಕ್ಕಿ ವ್ಯಕ್ತಿಯ ಭೀಕರ ಕೊಲೆ (Barkuru murder)

 ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರು  ಸಮೀಪದ ಹನೆಹಳ್ಳಿಯಲ್ಲಿ  ವ್ಯಕ್ತಿಯೋರ್ವನನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಭಾನುವಾರ ಸಂಭವಿಸಿದೆ.

 ಕೊಲೆಯಾದ ವ್ಯಕ್ತಿ ಕೃಷ್ಣ(38) ಎಂದು ತಿಳಿದು ಬಂದಿದೆ. ಇವರು ಗಾರೆ ಕೆಲಸ ಮಾಡಿಕೊಂಡಿದ್ದರು. ವಿವಾಹಿತರಾಗಿದ್ದರೂ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು ಎಂದು ತಿಳಿದು ಬಂದಿದೆ.

ಇವನನ್ನು ಯಾರೋ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್, ಬ್ರಹ್ಮಾವರ ವೃತ್ತ ನಿರೀಕ್ಷಕರಾದ  ದಿವಾಕರ್ ಪಿ. ಎಂ. ಹಾಗೂ ಠಾಣಾಧಿಕಾರಿ ಮಧು ಬಿ.ಇ. ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಟ್ಟು ನಾಲ್ಕು ಸುತ್ತು ಗುಂಡು ಹಾರಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.