ಮಾಜಿ ಶಾಸಕ ಮೊಯಿದೀನ್ ಬಾವಾ ಸೋದರ ನಾಪತ್ತೆ ಕುಳೂರು ಬ್ರಿಡ್ಜ್ ನಲ್ಲಿ ಕಾರು ಪತ್ತೆ, ಮುಂದುವರಿದ ಶೋಧ

(Mangaluru) ಮಂಗಳೂರು: ಮಾಜಿ ಶಾಸಕ ಮೊಯಿದೀನ್ ಬಾವಾ ಸೋದರ ಮುಮ್ತಾಜ್ ಅಲಿ ನಿನ್ನೆ ರಾತ್ರಿಯಿಂದ ನಾಪತ್ತೆಯಾಗಿ̧ದ್ದು ಅವರ ಕಾರ್ ಕುಳೂರು ಸೇತುವೆ ಮೇಲೆ ಪತ್ತೆಯಾಗಿದೆ. ಪೊಲೀಸರು ಅಗ್ನಿಶಾಮಕ ದಳದ ಸಹಾಯದೊಂದಿಗೆ ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮಲ್ಪೆಯಿಂದ ಈಶ್ವರ ಮಲ್ಪೆ ತಂಡ ಆಗಮಿಸಿದ್ದು, ನೀರಿನಾಳದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಅವರು ಚಲಾಯಿಸುತ್ತಿದ್ದ ಬಿಎಂಡಬ್ಲ್ಯೂ ಕಾರಿನ ಮುಂಭಾಗ ಗುದ್ದಿದ ಸ್ಥಿತಿಯಲ್ಲಿ ಸೇತುವೆ ಮೇಲೆ ಪತ್ತೆಯಾಗಿದ್ದು, ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ.
ಮುಮ್ತಾಜ್ ಅಲಿ ಹೆಸರಾಂತ ಮಿಸ್ಬಾ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು, ಉದ್ಯಮಿಯಾಗಿದ್ದಾರೆ. ಅವರ ನಾಪತ್ತೆ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

