• Home  
  • ಮಾ.23-28: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲದ  ಶ್ರೀಮನ್ಮಹಾರಥೋತ್ಸವ
- ಧಾರ್ಮಿಕ

ಮಾ.23-28: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲದ  ಶ್ರೀಮನ್ಮಹಾರಥೋತ್ಸವ

Share: ಮಾ.23-28: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲದ  ಶ್ರೀಮನ್ಮಹಾರಥೋತ್ಸವ (ಚಿತ್ರ ಕೃಪೆ: ಸಚಿನ್‌ ಉಚ್ಚಿಲ) (Uchila) ಉಚ್ಚಿಲ: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೆ ಒಳಪಟ್ಟ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಶ್ರೀಮನ್ಮಹಾರಥೋತ್ಸವವು ಮಾರ್ಚ್ 23-28ರವರೆಗೆ ವಿವಿಧ ಪೂಜಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿದ್ಯುಕ್ತವಾಗಿ ಶ್ರೀ ಸನ್ನಿದಿಯಲ್ಲಿ ಸಂಪನ್ನಗೊಳ್ಳಲಿದೆ. ಮಾರ್ಚ್ 26 ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಶ್ರೀ ಮಹಾಲಕ್ಷ್ಮೀ ರಥಾರೋಹಣ, ಮಧ್ಯಾಹ್ನ 12-30ರಿಂದ 4 ಗಂಟೆವರೆಗೆ ಮಹಾ ಅನ್ನ ಸಂತರ್ಪಣೆ, ರಾತ್ರಿ 8 ಗಂಟೆಗೆ […]

ಮಾ.23-28: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲದ  ಶ್ರೀಮನ್ಮಹಾರಥೋತ್ಸವ

(ಚಿತ್ರ ಕೃಪೆ: ಸಚಿನ್‌ ಉಚ್ಚಿಲ)

(Uchila) ಉಚ್ಚಿಲ: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೆ ಒಳಪಟ್ಟ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಶ್ರೀಮನ್ಮಹಾರಥೋತ್ಸವವು ಮಾರ್ಚ್ 23-28ರವರೆಗೆ ವಿವಿಧ ಪೂಜಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿದ್ಯುಕ್ತವಾಗಿ ಶ್ರೀ ಸನ್ನಿದಿಯಲ್ಲಿ ಸಂಪನ್ನಗೊಳ್ಳಲಿದೆ.

ಮಾರ್ಚ್ 26 ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಶ್ರೀ ಮಹಾಲಕ್ಷ್ಮೀ ರಥಾರೋಹಣ, ಮಧ್ಯಾಹ್ನ 12-30ರಿಂದ 4 ಗಂಟೆವರೆಗೆ ಮಹಾ ಅನ್ನ ಸಂತರ್ಪಣೆ, ರಾತ್ರಿ 8 ಗಂಟೆಗೆ ಶ್ರೀ ಮನ್ಮಹಾರಥೋತ್ಸವವು ಸಂಪನ್ನಗೊಳ್ಳಲಿದೆ.

 ಕಾರ್ಯಕ್ರಮಗಳು: ಮಾ.23 ಶನಿವಾರ ಬೆಳಿಗ್ಗೆ 6ಗಂಟೆಯಿಂದ ಪೂಜೆಗಳು, ತೋರಣ ಮುಹೂರ್ತ, ಗಣಯಾಗ, ಬೆಳಿಗ್ಗೆ 10 ಗಂಟೆಗೆ ಉಗ್ರಾಣ ಮುಹೂರ್ತ, ಸಂಜೆ 4 ಗಂಟೆಯಿಂದ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಿಂದ ಸಾಮೂಹಿಕ ಹೊರೆ ಕಾಣಿಕೆ ಮೆರವಣಿಗೆ, ರಾತ್ರಿ 6 ಗಂಟೆಗೆ ನಿತ್ಯ ಪೂಜೆಗಳು, ಮುಹೂರ್ತ ಬಲಿ, ಅಂಕುರಾರೋಹಣ, ರಾತ್ರಿ ಪೂಜೆ, ಏಕಾಂತ ಸೇವೆ, ಸಪ್ತ ಶುದ್ಧಿ, ಪ್ರಾಸಾದ ಶುದ್ಧಿ, ವಸ್ತು ಹೋಮಾದಿಗಳು ನಡೆಯಲಿದೆ.

ಮಾ.24 ಭಾನುವಾರ ಬೆಳಿಗ್ಗೆ 5 ಗಂಟೆಯಿಂದ ಪೂಜೆಗಳು, ನವಗ್ರಹ ಹೋಮ, ಸಾಮೂಹಿಕ ಪ್ರಾರ್ಥನೆ, ಸಂಕಲ್ಪ ಬಲಿ, ಬೆಳಿಗ್ಗೆ 6-45 ಗಂಟೆಗೆ ಧ್ವಜಾರೋಹಣ, ಪುಣ್ಯಾಹ, ಅಗ್ನಿ ಜನನ, ಪ್ರಧಾನ ಯಾಗ, ನವಕ ಪ್ರಧಾನ ಕಲಶಾಭಿಷೇಕ, ಮಧ್ಯಾಹ್ನ 12 ಗಂಟೆಯಿಂದ ಅಲಂಕಾರ ಪೂಜೆ, ಮಹಾಪೂಜೆ, ಸಂಜೆ 7 ಗಂಟೆಯಿಂದ ಆರಾಧನಾ ಪೂಜೆ, ಆರಾಧನಾ ಬಲಿ, ರಜತ ಪಾಲಕಿ ಉತ್ಸವ, ವಿಮಾನೋತ್ಸವ, ರಾತ್ರಿ 8 ಗಂಟೆಗೆ ರಾತ್ರಿ ಪೂಜೆ, ನಿತ್ಯ ಬಲಿ, ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 11-30 ಗಂಟೆಗೆ ಮಹಾರಂಗ ಪೂಜೆ, ಭೂತ ಬಲಿ, ಆಯನೋತ್ಸವ, ಏಕಾಂತ ಸೇವೆ ನಡೆಯಲಿದೆ.

ಮಾ. 25 ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಉದಯ ಪೂಜೆ, ಬಲಿ, ಬೆಳಿಗ್ಗೆ 9-30ರಿಂದ ನಾಗಾಲಯದಲ್ಲಿ ನವಕ ಪ್ರಧಾನ ಹೋಮ, ಕಲಶಾಭಿಷೇಕ, ಆಶ್ಲೇಷ ಬಲಿ, ಮಧಯಾಹ್ನ 12-30 ರಿಂದ ಶ್ರೀ ಮಹಾಲಕ್ಷ್ಮೀ ಸನ್ನಿಯಲ್ಲಿ ಪ್ರಧಾನ ಯಾಗ, ಮಹಾ ಪೂಜೆ, ರಾತ್ರಿ 7-30 ರಿಂದ ಆರಾಧನಾ ಪೂಜೆ, ಅನ್ನಸಂತರ್ಪಣಾ ಪ್ರಾರ್ಥನೆ, ಆರಾಧನಾ ಬಲಿ, ರಾತ್ರಿ 11 ಗಂಟೆಯಿಂದ ನಿತ್ಯ ಬಲಿ, ಕೆರೆಕಟ್ಟೆ ಪೂಜೆ,  ಏಕಾಂತ ಸೇವೆ ನಡೆಯಲಿದೆ.

 ಮಾ. 26 ಮಂಗಳವಾರ ಬೆಳಿಗ್ಗೆ 5 ಗಂಟೆಯಿಂದ ಪ್ರಾತಃಕಾಲ ಪೂಜೆಗಳು, ನವಕ ಪ್ರಧಾನ ಹೋಮ, ಕಲಶಾಭಿಷೇಕ, ರಥಾವಾಸ ಹೋಮ, ಅಲಂಕಾರ ಪೂಜೆ, ಸಹಸ್ರ ನಾಮಾರ್ಚನೆ, ಮಹಾಪೂಜೆ, ರಥ ಸಂಪ್ರೋಕ್ಷಣೆ, ಪಲ್ಲ ಪೂಜೆ, ಸಾಮೂಹಿಕ ಪ್ರಾರ್ಥನೆ, ರಥಾರೋಹಣ ಬಲಿ, ರಥಾರೋಹಣ ನೃತ್ಯ ದರ್ಶನ, ಮಧ್ಯಾಹ್ನ 12 ಗಂಟೆಗೆ ಮಹಾ ರಥಾರೋಹಣ, ಭಜನೆ, ಮಧ್ಯಾಹ್ನ  1-4 ಗಂಟೆವರೆಗೆ ಮಹಾ ಅನ್ನ ಸಂತರ್ಪಣೆ, ಸಂಜೆ 3-30ಕ್ಕೆ ತಾಳಮದ್ದಳೆ, ಸಂಜೆ 5-30ಕ್ಕೆ ಶ್ರೀ ಭದ್ರಕಾಳಿ ಅಮ್ಮನವರ ದರ್ಶನ, ರಾತ್ರಿ 8 ಗಂಟೆಯಿಂದ ಸಾಮೂಹಿಕ ಪ್ರಾರ್ಥನೆ, ರಥಕ್ಕೆ ಅಜಕಾಯಿ ಸಮರ್ಪಣೆ, ಶ್ರೀ ಮನ್ಮಹಾರಥೋತ್ಸವ, ಸಿಡಿಮದ್ದು ಪ್ರದರ್ಶನ, ಉತ್ಸವ ಬಲಿ, ಚೆಂಡೆ ಬಲಿ, ನಾಗಸ್ವರ ಬಲಿ, ರಾತ್ರಿ 9-30ರಿಂದ ರಜತ ಪಾಲಕಿ ಉತ್ಸವ ಬಲಿ, ಶ್ರೀ ಮಹಾಲಕ್ಷ್ಮೀ ಓಲಗ, ಅಷ್ಠಾವಧಾನ ಸೇವೆ, ರಾತ್ರಿ ಪೂಜೆ, ಶ್ರೀ ಭೂತ ಬಲಿ, ಏಕಾಂತ ಸೇವೆ, ಶಯನೊತ್ಸವ, ಕವಾಟ ಪೂರಣ ನಡೆಯಲಿದೆ.

ಮಾ. 27 ಬುಧವಾರ ಬೆಳಿಗ್ಗೆ 6-30ರಿಂದ ಪುಣ್ಯಾಹ, ಕವಾಟೋದ್ಘಾಟನೆ, ಉದಯ ಪೂಜೆ, ಪ್ರಧಾನ ಹೋಮ, ಕಲಶಾಭಿಷೇಕ, ಚೂರ್ಣೋತ್ಸವ, ಬೆಳಿಗ್ಗೆ 9-30ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12-30 ಗಂಟೆಗೆ ಮಹಾಪೂಜೆ, ರಾತ್ರಿ 7-30ರಿಂದ ಆರಾಧನಾ ಪೂಜೆ, ಯಾತ್ರಾಹೋಮ, ಓಕುಳಿ, ವಿಮಾನ ಬಲಿ, ಕೆರೆ ದೀಪೋತ್ಸವ, ವರುಣ ಹೋಮ, ಅವಭ್ರತ ಸ್ನಾನ, ಅಗ್ನಿಕೇಳಿ(ತೂಟೆದರ), ಸರ್ವವಾದ್ಯ ಬಲಿ, ಪೂರ್ಣಾಹುತಿ, ಧ್ವಜಾವರೋಹಣ, ಪುಣ್ಯಾಹ, ರಾತ್ರಿ ಪೂಜೆ, ಏಕಾಂತ ಸೇವೆ ನಡೆಯಲಿದೆ.

ಮಾ.28 ಗುರುವಾರ ಬೆಳಿಗ್ಗೆ 6-30ರಿಂದ ಉದಯ ಪೂಜೆ, ಮಹಸಂಪ್ರೋಕ್ಷಣೆ, ಮಹಾಕಲಶಾಭಿಷೇಕ, ಕಾಳಿ ಸಹ್ರಸನಾಮ ಹೊಮ, ಮಧ್ಯಾಹ್ನ 12-30ಕ್ಕೆ  ಮಹಾಪೂಜೆ, ಸಂಜೆ 3-30ಕ್ಕೆ ಮಹಾ ಮಂತ್ರಾಕ್ಷತೆ, ಪ್ರಸಾದ ವಿತರಣೆ, ರಾತ್ರಿ ಆರಾಧನಾ ಪೂಜೆ, ರಾತ್ರಿ ಪೂಜೆ, ಶ್ರೀ ಭದ್ರಕಾಳಿ ಕುರುಜಿ ತರ್ಪಣ, ಏಕಾಂತ ಸೇವೆ ಸಹಿತ ವಿವಿಧ ಧಾರ್ಮಿಕ ವಿಧಿಗಳು ಸಂಪನ್ನಗೊಳ್ಳಲಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.