ಮುಂಡ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ
ಪ್ರೋತ್ಸಾಹ ಧನ ವಿತರಿಸಿದ ನಮ್ಮ ಫ್ರೆಂಡ್ಸ್ ಸಂಚಾಲಕ ಅರುಣ್ ರಾವ್
(Mundkuru) ಮುಂಡ್ಕೂರು: ಸಾಮಾಜಿಕ ಕಳಕಳಿಯ ಸಂಸ್ಥೆ ನಮ್ಮ ಫ್ರೆಂಡ್ಸ್ ರಿ. ಮುಂಡ್ಕೂರು ಇದರ ಸೇವಾ ಚಟುವಟಿಕೆಯ 50 ಹೆಜ್ಜೆಯ ಅಂಗವಾಗಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂಡ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ನಮ್ಮ ಫ್ರೆಂಡ್ಸಿನ ಸಂಚಾಲಕರಾದ ಅರುಣ್ ರಾವ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಿದರು.
ಈ ಸಂದರ್ಭದಲ್ಲಿ ನಮ್ಮ ಫ್ರೆಂಡ್ಸ್ ನ ಅಧ್ಯಕ್ಷ ನವನೀತ ಅಮೀನ್, ಗೌರವ ಸಲಹೆಗಾರ ಪ್ರಭಾಕರ ಶೆಟ್ಟಿ, ಸ್ಥಾಪಕ ಆನಂದ ಕುಲಾಲ್, ಗೌರವ ಸಲಹೆಗಾರ ಅವಿಲ್ ಡಿಸೋಜಾ, ಉದಯ ಮುಂಡ್ಕೂರು, ಶಾಲೆಯ ಮುಖ್ಯ ಶಿಕ್ಷಕ ರಂಗಸ್ವಾಮಿ, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

