• Home  
  •  ಎಸ್ಕೆಪಿಎ ಕಾಪು ವಲಯದ ಸದಸ್ಯರಿಗಾಗಿ ಕಾಪುವಿನಲ್ಲಿ ನಿಕಾನ್‌ ಕಾರ್ಯಗಾರ, ಸರ್ವೀಸ್‌(Nikon workshop, service in Kapu for SKPA Kapu zone members)
- science - Technology

 ಎಸ್ಕೆಪಿಎ ಕಾಪು ವಲಯದ ಸದಸ್ಯರಿಗಾಗಿ ಕಾಪುವಿನಲ್ಲಿ ನಿಕಾನ್‌ ಕಾರ್ಯಗಾರ, ಸರ್ವೀಸ್‌(Nikon workshop, service in Kapu for SKPA Kapu zone members)

Share: ಎಸ್ಕೆಪಿಎ ಕಾಪು ವಲಯದ ಸದಸ್ಯರಿಗಾಗಿ ಕಾಪುವಿನಲ್ಲಿ ನಿಕಾನ್‌ ಕಾರ್ಯಗಾರ, ಸರ್ವೀಸ್ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ ಎಸ್ಕೆಪಿಎ ಕಾಪು ಅಧ್ಯಕ್ಷ ಸಂತೋಷ್ (Kaup) ಕಾಪು :  ಸೌತ್‌ ಕೆನರಾ ಫೊಟೋಗ್ರಾಫರ್ಸ್‌ ಅಸೋಸಿಯೇಶನ್‌ ಇದರ ಕಾಪುವಲಯದ ಸದಸ್ಯರಿಗಾಗಿ ಮಂಗಳವಾರ ಕಾಪುವಿನ ಕೆ ೧ ಸಭಾಭವನದಲ್ಲಿಖ್ಯಾತ ಛಾಯಾಗ್ರಹಣ ಪರಿಕರಗಳ ಸಂಸ್ಥೆ “ನಿಕಾನ್‌” ಕಾರ್ಯಗಾರ ಮತ್ತು ಸರ್ವೀಸ್‌ ಆಯೋಜಿಸಿತ್ತು.   ಎಸ್ಕೆಪಿಎ ಕಾಪು ವಲಯದ ಗೌರವಾದ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲರವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕಾಪು ವಲಯದ ಅಧ್ಯಕ್ಷ ಸಂತೋಷ್ ಕಾಪು […]

(Kaup) ಕಾಪು :  ಸೌತ್‌ ಕೆನರಾ ಫೊಟೋಗ್ರಾಫರ್ಸ್‌ ಅಸೋಸಿಯೇಶನ್‌ ಇದರ ಕಾಪುವಲಯದ ಸದಸ್ಯರಿಗಾಗಿ ಮಂಗಳವಾರ ಕಾಪುವಿನ ಕೆ ೧ ಸಭಾಭವನದಲ್ಲಿಖ್ಯಾತ ಛಾಯಾಗ್ರಹಣ ಪರಿಕರಗಳ ಸಂಸ್ಥೆ “ನಿಕಾನ್‌” ಕಾರ್ಯಗಾರ ಮತ್ತು ಸರ್ವೀಸ್‌ ಆಯೋಜಿಸಿತ್ತು.

  ಎಸ್ಕೆಪಿಎ ಕಾಪು ವಲಯದ ಗೌರವಾದ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲರವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಕಾಪು ವಲಯದ ಅಧ್ಯಕ್ಷ ಸಂತೋಷ್ ಕಾಪು ಅಧ್ಯಕ್ಷತೆ ವಹಿಸಿದ್ದರು.

 ನಿಕಾನ್‌ ಸಂಸ್ಥೆಯ ಸರ್ವಿಸ್ ಇಂಜಿನಿಯರ್ ಕೇಶವ್, ತರಬೇತುದಾರ ಸ್ಪೆರಿನ್, ರೋಷನ್, ಶ್ರೀನಿವಾಸ್, ಎಸ್ಕೆಪಿಎ ಜಿಲ್ಲಾ ಛಾಯಾ ಕಾರ್ಯದರ್ಶಿ ರಾಜೇಶ್ ಶಂಕರಪುರ, ಉಪಾಧ್ಯಕ್ಷ ಸಂತೋಷ್ ಕಟಪಾಡಿ, ಕೋಶಾಧಿಕಾರಿ ಕಿರಣ್ ಕಾಪು, ವಲಯ ಛಾಯಾ ಕಾರ್ಯದರ್ಶಿ ಸಂತೋಷ್ ಅಲೆವೂರು ವೇದಿಕೆಯಲ್ಲಿದ್ದರು.

ಕಾರ್ಯಾಗಾರದಲ್ಲಿ ನೂರಕ್ಕೂ ಅಧಿಕ ಸದಸ್ಯರು ಭಾಗವಹಿಸಿ, ಕಾರ್ಯಕ್ರಮದ ಲಾಭ ಪಡೆದರು.

    ಕಾಪು ವಲಯದ ಅಧ್ಯಕ್ಷ ಸಂತೋಷ್ ಕಾಪು ಸ್ವಾಗತಿಸಿದರು. ಶ್ರೀನಿವಾಸ್ ಐತಾಳ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.