ಮುಕುಂದಕೃಪಾ ಶಾಲೆಯಲ್ಲಿ : ಶಿಕ್ಷಕರ ದಿನಾಚರಣೆ
ವಿದ್ಯಾರ್ಥಿಗಳ ಸಾಮೂಹಿಕ ಗಾಯನ ಹಾಗೂ ನೃತ್ಯ ವೈವಿಧ್ಯ ಮನರಂಜಿಸಿತು.
(Udupi) ಉಡುಪಿ : ಉಡುಪಿಯ ಮುಕುಂದಕೃಪಾ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರವನ್ನು ಮೆರವಣಿಗೆಯ ಮೂಲಕ ಶಾಲಾ ಬ್ಯಾಂಡ್ ನೊಂದಿಗೆ ಸಭೆಗೆ ತಂದು ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.
ಮುಖ್ಯ ಅತಿಥಿಯಾಗಿ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಸೆಲಿನ್ ಕರ್ಕಡ ರವರು ಆಗಮಿಸಿ ತಾವು ಶಾಲೆಯಲ್ಲಿ ಕಳೆದ ಗತದಿನಗಳನ್ನು ಮೆಲುಕು ಹಾಕಿ, ಮಕ್ಕಳಿಗೆ ಉತ್ತಮ ಪ್ರಜೆಗಳಾಗಿ ಬಾಳಿ ಬದುಕಿ ಎಂದು ಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ವಿನುತಾ ಎಸ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಅವರು ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ಪ್ರತಿನಿತ್ಯವೂ ಶಿಕ್ಷಕರಿಗೆ ಗೌರವ ತೋರಿಸುವುದರ ಮೂಲಕ ನಿತ್ಯವೂ ಶಿಕ್ಷಕರ ದಿನವನ್ನಾಗಿಸಬೇಕು ಎಂದು ಕಿವಿ ಮಾತು ಹೇಳಿದರು.
ಶಾಲಾ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ಸುರೇಂದ್ರ ಮೆಂಡನ್ ಶುಭ ಹಾರೈಸಿದರು.
ಶಾಲಾ ವತಿಯಿಂದ ಹಾಗೂ ಶಿಕ್ಷಕ – ರಕ್ಷಕ ಸಂಘದ ವತಿಯಿಂದ ಮುಖ್ಯ ಅತಿಥಿಗಳನ್ನು ಗೌರವಿಸಲಾಯಿತು.
ಶಿಕ್ಷಕರ ದಿನದ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕಿ ವಿದ್ಯಾಲಕ್ಷ್ಮಿ ತಿಳಿಸಿದರು.
ಅತಿಥಿಗಳನ್ನು ಶ್ರೀಮತಿ ಗೀತಾ ಪರಿಚಯಿಸಿದರು. ವಿದ್ಯಾ ಹಾಗೂ ಶ್ರೀಮತಿ ರೇಷ್ಮಾಂಜಲಿ ನಿರ್ವಹಿಸಿದರು. ನಂದಾ ಸ್ವಾಗತಿಸಿದರು. ವೀಣಾ ವಂದನಾರ್ಪಣೆಗೈದರು.
ವಿದ್ಯಾರ್ಥಿಗಳು ಸಾಮೂಹಿಕ ಗಾಯನ ಹಾಗೂ ನೃತ್ಯ ವೈವಿಧ್ಯಗಳ ಮೂಲಕ ಮನರಂಜಿಸಿದರು.
ಶಾಲಾ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.

