ಜಯಂಟ್ಸ್ ಗ್ರೂಪ್ ಪೂರ್ವಾಧ್ಯಕ್ಷರುಗಳ ರಾಜ್ಯ ಮಟ್ಟದ ಸಮಾವೇಶ
ಉಪ್ಪಿನ ಕೋಟೆ ಕುದ್ರು ರಿಲ್ಯಾಕ್ಸ್ ಪಾರ್ಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ
(Brahmavara) ಬ್ರಹ್ಮಾವರ: ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಇದರ ಆಶ್ರಯದಲ್ಲಿ ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಮುಂಬಯಿ ಪೂರ್ವ ಅಧ್ಯಕ್ಷರುಗಳ ರಾಜ್ಯ ಮಟ್ಟದ ಸಮಾವೇಶ ಕಾರ್ಯಕ್ರಮ ಉಪ್ಪಿನ ಕೋಟೆ ಬಳಿಯ ಕುದ್ರು ರಿಲ್ಯಾಕ್ಸ್ ಪಾರ್ಕ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಡೆಪ್ಯೂಟಿ ವಲ್ಡ್ ಚೇರ್ಮನ್ ನೂರುದ್ದೀನ್ ಸೇವಾಲಾ ಇವರು ಉದ್ಘಾಟಿಸಿದರು.
ಅವರು ಮಾತನಾಡಿ, ಭಾರತೀಯ ಮೂಲದ ಅಂತರಾಷ್ಟ್ರೀಯ ಸಂಸ್ಥೆ ಜಯಂಟ್ಸ್ ಸಂಸ್ಥೆಯು 50 ವರ್ಷಗಳಿಂದ ಬಹಳಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ನಿತ್ಯ ನಿರಂತರವಾಗಿ ಮಾಡುತ್ತಿದೆ ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಈ ಸಂಸ್ಥೆ ನಡೆಯುತ್ತಿರುವುದು ಗಮನಾಹ೯ ಸಂಸ್ಥೆಯ ಅಭಿವೃದ್ಧಿಯ ದೃಷ್ಟಿಯಲ್ಲಿ ಸದಸ್ಯತನ ಬೆಳವಣಿಯಾಗಬೇಕಾಗಿದೆ ಎಂದರು.
ಜಯಂಟ್ಸ್ ಪೂರ್ವ ಅಧ್ಯಕ್ಷರಾದ ಶಶಿಕಲಾ ನಾಯ್ಡು, ಸುಂದರ ಪೂಜಾರಿ ಮೂಡುಕುಕ್ಕುಡೆ, ಉದಯ್ ಬಿ, ದಿನಕರ್ ಕೆ. ಅಮೀನ್, ಮಧುಸೂದನ್ ಹೇರೂರು, ಮತ್ತು ನೂರುದ್ದೀನ್ ಸೇವಾಲಾ ಇವರನ್ನು ಸನ್ಮಾನಿಸಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ದೇವರು ಎಲ್ಲರಿಗೂ ಸೇವೆ ಮಾಡಲು ಅವಕಾಶ ನೀಡುವುದಿಲ್ಲ ಕೇವಲ ಕೆಲವು ಮಂದಿ ಮಾತ್ರ ಈ ಅವಕಾಶವನ್ನು ಪಡೆದುಕೊಂಡಿದ್ದಾರೆ ಈ ಸಾಲಿಗೆ ನಾವು ನೀವು ಸೇರಿರುವುದು ನಮ್ಮ ಪೂರ್ವಜನ್ಮದ ಪುಣ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಅಧ್ಯಕ್ಷ ಅಣ್ಣಯ್ಯದಾಸ್ ವಹಿಸಿ ಶುಭ ಹಾರೈಸಿದರು.
ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಸೆಂಟ್ರಲ್ ಕಮಿಟಿ ಸದಸ್ಯ ದಿನಕರ್ ಕೆ. ಅಮೀನ್, ಜಯಂಟ್ಸ್ ಫೌಂಡೇಶನ್ ಅಧ್ಯಕ್ಷ ತೇಜಶ್ವರ್ ರಾವ್, ಸ್ಪೆಷಲ್ ಕಮಿಟಿ ಸದಸ್ಯ ಮೋಹನ್ ಕರೆಕರ್, ಗಜಾನನ ನೀಲಕರಿ, ಯುನಿಟ್ ಡೈರೆಕ್ಟರ್ ಎಚ್ . ವೆಂಕಟೇಶ್ ಮುಂತಾದವರು ಕಾರ್ಯಕ್ರಮದ ಕುರಿತು ಮಾತನಾಡಿದರು.
ಮಧುಸೂದನ್ ಹೇರೂರು ಮತ್ತು ಜಯಂಟ್ಸ್ ಪೂರ್ವ ಅಧ್ಯಕ್ಷರುಗಳ ಸಮಿತಿಯ ಪ್ರಮುಖರಾದ ಪಾಂಡುರಂಗ ಟಿ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ಪೂರ್ವ ಅಧ್ಯಕ್ಷರುಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಬಳಿಕ ವಿವಿಧ ರೀತಿಯ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾಯ೯ಕ್ರಮ ನಡೆಯಿತು.
ಜಯಂಟ್ಸ್ ಕಾಯ೯ದಶಿ೯ ಮಿಲ್ಟನ್ ಒಲಿವರ್ ವಂದಿಸಿದರು. ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು.
ಈ ಸಂದರ್ಭದಲ್ಲಿ ಅನಾರೋಗ್ಯ ಪೀಡಿತರಿಗೆ 1 ಲಕ್ಷ ರೂ ಸಹಾಯಧನ ವಿತರಿಸಲಾಯಿತು.
ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸುಮಾರು 200 ಜನ ಪೂವಾ೯ಧ್ಯಕ್ಷರುಗಳು ಭಾಗವಹಿಸಿದ್ದರು.
ಶ್ರೀನಾಥ್ ಕೋಟ, ಪ್ರಸನ್ನ ಕಾರಂತ್, ಮಂಜುನಾಥ್ ಶೆಟ್ಟಿಗಾರ್, ಡೊರಿಸ್ , ಡೊನಾಲ್ಡ್, ರತ್ನಾ, ಪ್ರತಿಭಾ, ವಿವೇಕಾನಂದ ಕಾಮತ್, ಸುನೀತಾ ಮಧುಸೂಧನ್, ಉಷಾ ಎಸ್ ಪೂಜಾರಿ ವಿಲ್ಸನ್ , ಗಾಯತ್ರಿ, ಪ್ರದೀಪ್ ಶೆಟ್ಟಿ, ಅಕ್ಷತಾ ಶೆಟ್ಟಿ, ಡಾ. ಎನ್ ವಿ ಕಾಮತ್ ಮುಂತಾದವರು ಸಹಕರಿಸಿದರು.

