• Home  
  • ಮೂಡಬಿದ್ರೆಯ ಖಡಕ್ ಪೊಲೀಸ್ ಅಧಿಕಾರಿ ವಿರುದ್ಧ ವೈಯಕ್ತಿಕ ದ್ವೇಷ.(Personal enmity against a police officer in Moodbidri)
- ಅಪರಾಧ

ಮೂಡಬಿದ್ರೆಯ ಖಡಕ್ ಪೊಲೀಸ್ ಅಧಿಕಾರಿ ವಿರುದ್ಧ ವೈಯಕ್ತಿಕ ದ್ವೇಷ.(Personal enmity against a police officer in Moodbidri)

Share: ಮೂಡಬಿದ್ರೆಯ ಖಡಕ್ ಪೊಲೀಸ್ ಅಧಿಕಾರಿ ವಿರುದ್ಧ ವೈಯಕ್ತಿಕ ದ್ವೇಷ. ಸುಳ್ಳು ಆರೋಪ ಮಾಡಿರುವ ಸುಮತಿ ನಾಯ್ಕ್,  ಅಸಲಿಯತ್ತು ಬಿಚ್ಚಿಟ್ಟ ಅಕ್ಕ ಪ್ರಫುಲ್ಲಾ ನಾಯ್ಕ್. (Mangaluru) ಮಂಗಳೂರು: ಮೂಡಬಿದ್ರೆಯ ದಕ್ಷ ಇನ್ಸ್‌ಪೆಕ್ಟರ್‌ ಸಂದೇಶ್‌ ಪಿ.ಜಿ. ಅವರ ಮೇಲೆ ವೈಯಕ್ತಿಕ ದ್ವೇಷವನ್ನು ಮುಂದಿಟ್ಟುಕೊಂಡು, ನನ್ನ ತಂಗಿ ಸುಮತಿ ನಾಯ್ಕ್ ತೇಜೋವಧೆ ಮಾಡುತ್ತಿದ್ದಾಳೆ ಎಂದು ಅಕ್ಕ ಬೆಳುವಾಯಿ ನಿವಾಸಿ ಪ್ರಫುಲ್ಲ ನಾಯ್ಕ್ ಈ ಹಿಂದೆಯೇ ಗಂಭೀರ ಆರೋಪ ಮಾಡಿದ್ದರು.   ಇನ್ ಸ್ಪೆಕ್ಟರ್‌ ಮೇಲಿನ ವೈಯಕ್ತಿಕ ದ್ವೇಷದಿಂದ ಸುಳ್ಳು ಆರೋಪ […]

(Mangaluru) ಮಂಗಳೂರು: ಮೂಡಬಿದ್ರೆಯ ದಕ್ಷ ಇನ್ಸ್‌ಪೆಕ್ಟರ್‌ ಸಂದೇಶ್‌ ಪಿ.ಜಿ. ಅವರ ಮೇಲೆ ವೈಯಕ್ತಿಕ ದ್ವೇಷವನ್ನು ಮುಂದಿಟ್ಟುಕೊಂಡು, ನನ್ನ ತಂಗಿ ಸುಮತಿ ನಾಯ್ಕ್ ತೇಜೋವಧೆ ಮಾಡುತ್ತಿದ್ದಾಳೆ ಎಂದು ಅಕ್ಕ ಬೆಳುವಾಯಿ ನಿವಾಸಿ ಪ್ರಫುಲ್ಲ ನಾಯ್ಕ್ ಈ ಹಿಂದೆಯೇ ಗಂಭೀರ ಆರೋಪ ಮಾಡಿದ್ದರು.

  ಇನ್ ಸ್ಪೆಕ್ಟರ್‌ ಮೇಲಿನ ವೈಯಕ್ತಿಕ ದ್ವೇಷದಿಂದ ಸುಳ್ಳು ಆರೋಪ ಮಾಡುತ್ತಿರುವುದಾಗಿ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು.  

  ಮಂಗಳೂರಿನ ಪತ್ರಕರ್ತರು ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದಾಗ ಸುಮತಿ ನಾಯ್ಕ್‌ ಸುಳ್ಳು ಆರೋಪ ಮಾಡಿರುವುದು ಬಯಲಾಗಿತ್ತು. ಇದರಿಂದ ಹತಾಶಳಾದ ಸುಮತಿ ನಾಯ್ಕ್‌ ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಮಲಗಿ ಪೊಲೀಸ್ ಅಧಿಕಾರಿ ಹಲ್ಲೆ ಮಾಡಿದ್ದಾರೆ ಎಂದು ಕಟ್ಟುಕಥೆ ಕಟ್ಟಿದಲ್ಲದೆ, ಅಲ್ಲಿಯೂ ಇನ್ಸ್‌ಪೆಕ್ಟರ್‌ ವಿರುದ್ಧ ಮಾಧ್ಯಮಗಳ ಮುಂದೆ ಸುಳ್ಳು ಆರೋಪ ಮಾಡಿದ್ದಳು.

   ಆದರೆ ಅಲ್ಲಿನ ಮಾಧ್ಯಮಗಳು ಇದೆಲ್ಲಾ ವೈಯಕ್ತಿಕ ದ್ವೇಷದಿಂದ ಮಾಡಿರುವ ಸುಳ್ಳಾರೋಪ ಎಂಬ ಸತ್ಯವನ್ನು ಅರಿಕೊಂಡು ಈ ಸುದ್ದಿಯನ್ನು ಪ್ರಕಟಿಸಲು ನಿರಾಕರಿಸಿದ್ದವು. ಆದರೂ ದ್ವೇಷ ಬಿಡದ ಸುಮತಿ ಇದೀಗ ಬೆಂಗಳೂರಿಗೆ ತೆರಳಿ, ಇನ್ಸ್‌ಪೆಕ್ಟರ್ ಸಂದೇಶ್‌‌ ಪಿ.ಜಿ. ಅವರು ಕುಟುಂಬಿಕರೊಂದಿಗೆ ಇದ್ದು, ಅಶ್ಲೀಲ ವಲ್ಲದ ಪರ್ಸನಲ್‌ ವಿಡಿಯೋ ಇಟ್ಟುಕೊಂಡು ಅಲ್ಲಿ ಮಾಧ್ಯಮಗಳ ಮುಂದೆ ಸುಳ್ಳಾರೋಪ ಮಾಡಿದ್ದಾಳೆ. ಈಕೆಯ ಅಸಲಿಯತ್‌ ತಿಳಿಯದೆ ಬೆಂಗಳೂರಿನ ಮಾಧ್ಯಮಗಳು ಈಕೆಯ ಆರೋಪವನ್ನು ಬಿತ್ತರಿಸಿದ್ದು, ಈ

ಮೂಲಕ ಸುಮತಿ ನಾಯ್ಕ್‌ ಸಂದೇಶ್‌ ಅವರ ಮೇಲಿನ ವೈಯಕ್ತಿಕ ದ್ವೇಷವನ್ನು ತೀರಿಸಿದ್ದಾಳೆ ಎಂದು  ಅಕ್ಕ ಪ್ರಫುಲ್ಲ ನಾಯ್ಕ್‌ ಗಂಭೀರ ಆರೋಪ ಮಾಡಿದ್ದಾರೆ.

   ನನ್ನ ತಂಗಿ ಸುಮತಿ ನಾಯ್ಕ್  ಸಮಾಜ ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು ಆಕೆಯ ಮೇಲೆ ಕಾರ್ಕಳ, ಬೆಳ್ತಂಗಡಿ, ತಮಿಳುನಾಡು ಮತ್ತಿತರ ಕಡೆ ವೇಶ್ಯಾವಾಟಿಕೆ ಪ್ರಕರಣಗಳು ಇವೆ. ತಮಿಳುನಾಡಿನಲ್ಲಿ ಜೈಲುವಾಸವನ್ನೂ ಅನುಭವಿಸಿದ್ದಾಳೆ. ನನ್ನ ಪಿತ್ರಾರ್ಜಿತ ಆಸ್ತಿಯನ್ನು ಲಪಟಾಯಿಸಲು ಅಮ್ಮನ ಪೋರ್ಜರಿ ಸಹಿ ಹಾಕಿಸಿದ್ದು ಈಗ ನನ್ನ ಗಂಡ ಮತ್ತು ಮಗನನ್ನು ನನ್ನಿಂದ ದೂರಮಾಡಿ ತನ್ನ ಜೊತೆಗೆ ಇರಿಸಿಕೊಂಡಿದ್ದಳು.

  ನಾನು ನನ್ನ ಗಂಡನ ಮೇಲೆ ದೂರು ನೀಡಲು ಮೂಡಬಿದ್ರೆ ಪೊಲೀಸ್ ಠಾಣೆಗೆ ಹೋದ ಸಂದರ್ಭದಲ್ಲಿ ನನಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಲ್ಲದೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾಳೆ. ಬಳಿಕ ಮೂಡಬಿದ್ರೆ ಪೊಲೀಸರು ಹಲ್ಲೆ ಮಾಡಿದ್ದರೆಂದು ಕಥೆ ಕಟ್ಟಿದ್ದಳು ಎಂದು ಪ್ರಫುಲ್ಲಾ ಆರೋಪಿಸಿದ್ದರು.

    ಬೆಳುವಾಯಿಯಲ್ಲಿ ನನ್ನ ಮಗ ಹಾಗೂ ಗಂಡನ ಜೊತೆ ವಾಸಿಸುತ್ತಿದ್ದ ಸಂದರ್ಭ   ನನ್ನ ಗಂಡ ಹಾಗೂ ಸುಮತಿ ಮನೆಗೆ ಹೋಗಿದ್ದರು. ಆದರೆ ಅವರು ವಾಪಸ್‌ ಬಾರದೆ ಇದ್ದಾಗ ಮೂಡಬಿದ್ರೆ ಠಾಣೆ‌ಗೆ ದೂರು ಕೊಡಲು ಹೋಗಿದ್ದೆ.  ದೂರು ಸ್ವೀಕರಿಸಿದ ಪೊಲೀಸರು ನನ್ನ ಗಂಡನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ, ನಿಮ್ಮ ಮೇಲೆ ನಿಮ್ಮ ಹೆಂಡತಿ ದೂರು ನೀಡಿದ್ದಾರೆ. ಕೂಡಲೇ ಠಾಣೆ‌ಗೆ ಬನ್ನಿ ಎಂದು ಕರೆದಿದ್ದರು. ಆಗ ಸುಮತಿ ಹಾಗೂ ಗಂಡ ಠಾಣೆಗೆ ಬಂದಿದ್ದು, ಪೊಲೀಸರ ಜೊತೆ ಏರುಧ್ವನಿಯಲ್ಲಿ ಮಾತಾಡಿ, ನನಗೆ ಚಪ್ಪಲಿಯಿಂದ ಹೊಡೆದಿದ್ದಳು. ಪೊಲೀಸರು ತಡೆಯಲು ಬಂದಾಗ ಸಾರ್ವಜನಿಕರ ಮುಂದೆಯೇ ಅವರ ಮೇಲೂ ಹಲ್ಲೆಗೆ ಯತ್ನಿಸಿದ್ದಳು. ಇದನ್ನು ಪೊಲೀಸರು ತಡೆದಾಗ  ಹತಾಶೆಯಿಂದ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಮಲಗಿ ಪೊಲೀಸ್ ಅಧಿಕಾರಿ ಹಲ್ಲೆ ಮಾಡಿದ್ದಾಗಿ ಪ್ರಫುಲ್ಲಾ ಆರೋಪಿಸಿದ್ದರು.

   ಈಕೆಯ ವಿರುದ್ಧ ಬೆಂಗಳೂರಿನ ಮಡಿವಾಳ ಪೊಲೀಸ್‌ ಸ್ಟೇಷನ್‌ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.  ಬಿಟಿಎಂ ಲೇಔಟ್‌ನ ಕೆ.ಎ.ಎಸ್ ಕಾಲೋನಿಯಲ್ಲಿ ಪೊಲೀಸರು ದಾಳಿ ನಡೆಸಿದಾಗ ಯುವತಿಯೊಬ್ಬಳನ್ನು ನಿಲ್ಲಿಸಿಕೊಂಡು, ಹಣದ ಆಮಿಷವೊಡ್ಡಿ ಸಾರ್ವಜನಿಕರನ್ನು ವೇಶ್ಯಾವಾಟಿಕೆಗೆ ಪ್ರಚೋದಿಸುತ್ತಿರುವುದು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಈಕೆ ಹಾಗೂ ಬೆಂಗಳೂರಿನ ಕಾರ್ತಿಕೇಯನ್‌ ಎಂಬಾತನನ್ನು ಬಂಧಿಸಿದ್ದರು.

  ಸಂದೇಶ್‌ ಪಿ.ಜಿ. ಅವರು ದಕ್ಷ ಪೊಲೀಸ್‌ ಅಧಿಕಾರಿಯಾಗಿದ್ದು, ಸುಮತಿ ನಾಯ್ಕ್‌ ಆರೋಪಿಸಿದಂತೆ ತೀರಾ ಕೆಳಮಟ್ಟಕ್ಕೆ ಇಳಿಯುವ ವ್ಯಕ್ತಿಯಲ್ಲ. ಮೂಡಬಿದ್ರೆಯ ದಕ್ಷ ಅಧಿಕಾರಿಯಾಗಿರುವ ಅವರು ತನ್ನ ವ್ಯಾಪ್ತಿಯಲ್ಲಿ ಶಾಂತಿ- ಸುವ್ಯವಸ್ಥೆಯನ್ನು ಕಾಪಾಡಿದ್ದಾರೆ. ಇವರು ಮೂಡಬಿದ್ರೆ ಠಾಣೆಗೆ ಬಂದ ಮೇಲೆ ಕ್ರಿಮಿನಲ್‌ ಚಟುವಟಿಕೆಗಳು ನಿಂತಿದ್ದು, ಹಲವರು ಗಂಭೀರ ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ. ಬಾಲಕಿ ಗ್ಯಾಂಗ್‌ ರೇಪ್‌ ಆಗುವುದನ್ನು ತಪ್ಪಿಸಿ ಆರೋಪಿಗಳನ್ನು ಹೆಡೆಮುರಿ ಕಟ್ಟುವ ಮೂಲಕ ಜನರಿಂದಲೇ ಶಹಾಬ್ಬಾಸ್ ಗಿರಿ ಪಡೆದುಕೊಂಡಿದ್ದರು.

   ಸುಳ್ಳು ಆರೋಪದ ವಿರುದ್ಧ ಕಾನೂನು ಕ್ರಮ: ಸಂದೇಶ್ ಪಿ.ಜಿ.

ಸುಮತಿ ತನ್ನ ಮೇಲೆ ವೈಯಕ್ತಿಕ ದ್ವೇಷದಿಂದ ಸುಳ್ಳಾರೋಪ ಮಾಡಿದ್ದು ಈ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಪೊಲೀಸ್‌ ಅಧಿಕಾರಿಯಾಗಿ ಕರ್ತವ್ಯದಿಂದ ಜನ ಸೇವೆ ಮಾಡುತ್ತಿದ್ದು, ಇದುವರೆಗೂ ಪೊಲೀಸ್‌ ಗಿರಿ ಮಾಡಿಲ್ಲ. ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಸಂದರ್ಭ ಇಂಥದೆಲ್ಲಾ ಆರೋಪಗಳು ಬರುವುದು ಸಹಜವಾಗಿದ್ದು, ಸಾರ್ವಜನಿಕರು ತನ್ನ ಮೇಲೆ ಅನುಮಾನ ಪಡುವುದಿಲ್ಲ ಎಂಬ ನಂಬಿಕೆ ಇದೆ. ಆದರೆ ತನ್ನ ಮೇಲೆ ಸುಳ್ಳಾರೋಪ ಮಾಡಿದ ಆರೋಪಿಯ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಸಂದೇಶ್‌ ಪಿ.ಜಿ. ಹೇಳಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.