• Home  
  • ಮೂಲ್ಕಿ: ಕೆಪಿಎಸ್‌ಕೆ ಫ್ರೌಢ ಶಾಲೆಯಲ್ಲಿ ಬೇಸಿಗೆ ಶಿಬಿರದ ಸಮಾರೋಪ (Moolki: KPSK School Summer camp closing ceremony)
- ಶಾಲಾ ಕಾಲೇಜು

ಮೂಲ್ಕಿ: ಕೆಪಿಎಸ್‌ಕೆ ಫ್ರೌಢ ಶಾಲೆಯಲ್ಲಿ ಬೇಸಿಗೆ ಶಿಬಿರದ ಸಮಾರೋಪ (Moolki: KPSK School Summer camp closing ceremony)

Share: ಮೂಲ್ಕಿ: ಕೆಪಿಎಸ್‌ಕೆ ಫ್ರೌಢ ಶಾಲೆಯಲ್ಲಿ ಬೇಸಿಗೆ ಶಿಬಿರದ ಸಮಾರೋಪ (Moolki) ಮೂಲ್ಕಿ,ಮೇ.14: ವಿದ್ಯಾರ್ಥಿಗಳು ಬಾಲ್ಯದಿಂದಲೇ ಸಂಸ್ಕಾರಯುತ ಬದುಕಿನ ಮೌಲ್ಯಗಳನ್ನು ಅರಿತು ಅವರ ನಿತ್ಯ ಬದುಕಿನಲ್ಲಿ ಶಿಕ್ಷಣದ ಜೊತೆಗೆ  ಗುರು ಹಿರಿಯರಲ್ಲಿ  ಭಕ್ತಿಯಿಂದ ವ್ಯವಹರಿಸಿ ದೇಶಕ್ಕೆ  ಸತ್ಪಪ್ರಜೆಗಳಾಗುವಲ್ಲಿ ಬೇಸಿಗೆ ಶಿಬಿರಗಳ ಕಾರ್ಯಕ್ರಮಗಳು ಮಹತ್ವ ಪಡೆದಿದೆ  ಎಂದು ಅನುದಾನಿತ ಪಂಜಿನಡ್ಕ ಕೆಪಿಎಸ್‌ಕೆ ಪ್ರೌಢ ಶಾಲೆಯ ಸಂಚಾಲಕ ಗಂಗಾಧರ ಶೆಟ್ಟಿ ಬರ್ಕೆ ಹೇಳಿದರು. ಅವರು ಕೆಪಿಎಸ್‌ಕೆ ಫ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. […]

ಮೂಲ್ಕಿ: ಕೆಪಿಎಸ್ಕೆ ಫ್ರೌಢ ಶಾಲೆಯಲ್ಲಿ ಬೇಸಿಗೆ ಶಿಬಿರದ ಸಮಾರೋಪ

(Moolki) ಮೂಲ್ಕಿ,ಮೇ.14: ವಿದ್ಯಾರ್ಥಿಗಳು ಬಾಲ್ಯದಿಂದಲೇ ಸಂಸ್ಕಾರಯುತ ಬದುಕಿನ ಮೌಲ್ಯಗಳನ್ನು ಅರಿತು ಅವರ ನಿತ್ಯ ಬದುಕಿನಲ್ಲಿ ಶಿಕ್ಷಣದ ಜೊತೆಗೆ  ಗುರು ಹಿರಿಯರಲ್ಲಿ  ಭಕ್ತಿಯಿಂದ ವ್ಯವಹರಿಸಿ ದೇಶಕ್ಕೆ  ಸತ್ಪಪ್ರಜೆಗಳಾಗುವಲ್ಲಿ ಬೇಸಿಗೆ ಶಿಬಿರಗಳ ಕಾರ್ಯಕ್ರಮಗಳು ಮಹತ್ವ ಪಡೆದಿದೆ  ಎಂದು ಅನುದಾನಿತ ಪಂಜಿನಡ್ಕ ಕೆಪಿಎಸ್‌ಕೆ ಪ್ರೌಢ ಶಾಲೆಯ ಸಂಚಾಲಕ ಗಂಗಾಧರ ಶೆಟ್ಟಿ ಬರ್ಕೆ ಹೇಳಿದರು.

ಅವರು ಕೆಪಿಎಸ್‌ಕೆ ಫ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ ಎಂಡ್ ಗೈಡ್ಸ್‌ನ ಮೂಲ್ಕಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷ  ಎಂ. ಸರ್ವೋತ್ತಮ ಅಂಚನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ದೇಶದ ಅಮೂಲ್ಯ ಸೊತ್ತಾಗುವ  ಎಲ್ಲಾ ಅವಕಾಶಗಳು  ತರಬೇತಿ ಬೇಸಿಗೆ ಶಿಬಿರದಿಂದ ಸಿಗುವ ಜೊತೆಗೆ ಮಕ್ಕಳ ಹವ್ಯಾಸದಲ್ಲಿ ಶಿಕ್ಷಣಕ್ಕೆ ಹೋಲಿಕೆ  ಇರುವ ಅಂಶಗಳು ಸಿಗುವುದು ಸಾಧ್ಯ ವಾಗುತ್ತದೆ ಎಂದು ಹೇಳಿದರು.

ಹೆತ್ತವರ ಪರವಾಗಿ ವೇದಿಕೆಯಲ್ಲಿ ಇದ್ದ ಉಪನ್ಯಾಸಕಿ ಶೈಲಜಾ ಅವರು ಮಾತನಾಡಿ, ಮಕ್ಕಳ ಬೆಳವಣಿಗೆಯಲ್ಲಿ ಬೇಸಿಗೆ ಶಿಬಿರ ಅವರಿಗೆ ಹಿತ ಕೊಡುವ ಜೊತೆಗೆ ಮಕ್ಕಳ ತುಂಟ ತನದಿಂದ ಹೆತ್ತವರ  ಕಷ್ಟ ಹಾಗು ಸಮಸ್ಯೆಗಳಿಗೆ ಉತ್ತಮ ಫಲಿತಾಂಶ ಕೊಟ್ಟಿದೆ ಎಂದು ಹೇಳಿದರು.

ವಿದ್ಯಾಪ್ರಚಾರಿಣಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ ಮಾತನಾಡಿ, ಶಾಲೆಯ ಆಡಳಿತೆಯ ಜೊತೆಗೆ ಪ್ರಚಾರಿಣಿ ಸಂಘ ವಿದ್ಯಾರ್ಥಿಗಳ ಏಳಿಗೆಗಾಗಿ ಹಲವು ಯೋಜನೆಗಳನ್ನು ಹೊರತರಲಿದೆ ಎಂದು ಹೇಳಿದರು.

ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ನಿತಿನ್ ಶೆಟ್ಟಿ ಮಾತನಾಡಿ, ಶಾಲೆಯ ವಿದ್ಯಾರ್ಥಿಗಳ ಬಗ್ಗೆ ಹಲವು ಕಾರ್ಯಕ್ರಮಗಳ ನಿಯೋಜನೆ ಯೋಚನೆ ನಮಗಿದೆ ಎಂದು ಹೇಳಿದರು.

 ಅತಿಕಾರಿಬೆಟ್ಟು ಗ್ರಾಮಪಂಚಾಯತ್ ಉಪಾಧ್ಯಕ್ಷ ಮನೋಹರ್ ಕೋಟ್ಯಾನ್, ನಿವೃತ್ತ ಮುಖ್ಯ ಶಿಕ್ಷಕ ನಾಗಭೂಷಣ ರಾವ್, ಶ್ರೀಮಂತ ಕಾಮತ್ ಅತಿಥಿಗಳಾಗಿದ್ದರು.

ಶಿಬಿರಾಧಿಕಾರಿ ವೆಂಕಟರಮಣ ಕಾಮತ್ (ವೆಂಕಿ ಫಲಿಮಾರ್), ಸಂಪನ್ಮೂಲ ವ್ಯಕ್ತಿಗಳಾದ ವರ್ಣಿತ್ ಕಾಮತ್, ಸ್ವಸ್ತಿಕ್ ಆಚಾರ್ಯ ವೇದಿಕೆಯಲ್ಲಿದ್ದರು. ದೀಪಿಕಾ ಶೆಟ್ಟಿ ಶಿಬಿರದ ವರದಿ ಮಂಡಿಸಿದರು.

ಕನ್ನಡ ಶಿಕ್ಷಕ  ಶಿವಪ್ರಸಾದ್ ಸ್ವಾಗತಿಸಿದರು. ದೈಹಿಕ ಶಿಕ್ಷಕ ಕರುಣಾಕರ್ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.