ಮೂಲ್ಕಿ ತಾಲೂಕು ಸರಕಾರಿ ಆಸ್ಪತ್ರೆಗೆ ರಾಜ್ಯ ಆರೋಗ್ಯ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಬೇಟಿ ಪರೀಶಿಲನೆ
ಶೀಘ್ರದಲ್ಲಿ ಪೂರ್ಣ ಪ್ರಮಾಣದ ವೈದ್ಯರ ನೇಮಕ : ದಿನೇಶ್ ಗೂಂಡುರಾವ್
ಮೂಲ್ಕಿ: ಮುಲ್ಕಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೆಲವು ಸವಲತ್ತುಗಳ ಕೊರತೆ ಇದ್ದು, ಶೀಘ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ವೈದ್ಯರ ನೇಮಕ ಮಾಡಲಾಗುವುದು ಎಂದು ರಾಜ್ಯ ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗೂಂಡುರಾವ್ ಹೇಳಿದರು.
ಮೂಲ್ಕಿ ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿ ಮಾಧ್ಯಮ ಜೊತೆಗೆ ಮಾತನಾಡಿದರು.
ಯಾವಾಗ ಮೂಲ್ಕಿ ತಾಲೂಕು ಆಸ್ಪತ್ರೆ ಆಗುತ್ತೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿತುಂಬಾ ಹೊಸ ತಾಲೂಕು ರಚನೆ ಆಗಿವೆ. ಎಲ್ಲಾ ಕಡೆಗಳಲ್ಲಿ ವೈದ್ಯರ ನೇಮಕ ಹಾಗೂ ಇನ್ನಿತರ ಪರಿಕರಗಳು ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಮೂಲ್ಕಿ ಆಸ್ಪತ್ರೆಯಲ್ಲಿ ಹೊಸ ಡಯಾಲಿಸಿಸ್ ವ್ಯವಸ್ಥೆ ಮಾಡಲಾಗುವುದು. ಹೆರಿಗೆ ವೈದ್ಯರು ನೇಮಕ, ಲಾಬ್ ಗೆ , ಫಾರ್ಮಸಿಗೆ ಸಿಬ್ಬಂದಿ ನೇಮಕ ಮಾಡುವ ಪ್ರಕ್ರಿಯೆ ಸರಕಾರದ ಮುಂದೆ ಇದೆ ಎಂದರು.
ಈ ಸಂಧರ್ಬ ಶಾಸಕ ಉಮನಾಥ ಕೋಟ್ಯಾನ್ (MLA Umanatha Kotian) , ಜಿಲ್ಲಾ ವೈದ್ಯಾಧಿಕಾರಿ ಡಾ| ತಿಮ್ಮಯ್ಯ (DHO DR Timmayya), ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಆನಂದ , ಮೂಲ್ಕಿ ವೈದ್ಯಾಧಿಕಾರಿ ಡಾ| ಕೃಷ್ಣ, ಮೂಲ್ಕಿ ತಹಶಿಲ್ದಾರ್ ಪ್ರದೀಪ್ ಕುರ್ಡೆಕರ್ (Moolki Tahashildar Pradip Kurdekar) ಕಾಂಗ್ರೆಸ್ ಮುಖಂಡ ಮಿಥುನ್ ರೈ (Mithun RAI) ಮತ್ತಿತರರು ಉಪಸ್ಥಿರಿದ್ದರು.

