ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆ ನೀರು ಕೊಯ್ಲು ಮತ್ತು ಮಳೆ ನೀರು ಚರಂಡಿಯ ಭದ್ರತೆಯ ಬಗ್ಗೆ ನಗರ ಪಂಚಾಯತಿಗೆ ಮನವಿ
ಮೂಲ್ಕಿ: ಅಶೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ಮೂಲ್ಕಿ (Association of civil Engineers Moolki)ಇದರ ಪದಾಧಿಕಾರಿಗಳು ಮೂಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿಗಳಾದ ಶ್ರೀಮತಿ ಇಂಧೂ ಎಮ್ SMT Indu M). ಅವರನ್ನು ಭೇಟಿಯಾಗಿ ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆ ನೀರು ಕೊಯ್ಲು ಮತ್ತು ಮಳೆ ನೀರು ಚರಂಡಿಯ ಭದ್ರತೆಯ ಬಗ್ಗೆ ಮನವಿ ಮಾಡಿದರು.
ಮಳೆ ನೀರು ಚರಂಡಿ ಅಲ್ಲಲ್ಲಿ ಮುಚ್ಚದ ಹಾಗೆ ನೋಡಿಕೊಳ್ಳಬೇಕು. ಮಳೆ ನೀರು ಉತ್ತಮವಾಗಿ ಹೋಗುವ ವ್ಯವಸ್ಥೆ ಮಾಡಬೇಕು. ಕಟ್ಟಡ ಪರವಾನಿಗೆ ಮತ್ತು ಅಕ್ಯೂಪೆನ್ಸಿ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಬೇಕು. ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿ ಕೆಲಸಗಳಲ್ಲಿ ನಮ್ಮ ಸಹಕಾರವಿರುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿದ ಮೂಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಶ್ರೀಮತಿ ಇಂಧೂ ಎಮ್. ಅವರು ಸ್ಪಂಧಿಸಿದ್ದಾಗಿ ತಿಳಿದು ಬಂದಿದೆ.
ಅಶೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ಮೂಲ್ಕಿಯ ಸ್ಥಾಪಕಾಧ್ಯಕ್ಷರಾದ ಜೀವನ್ ಕೆ. ಶೆಟ್ಟಿ Jeevan K Shetty), ಕಾರ್ಯದರ್ಶಿ ಸುಜಿತ್ ಸಾಲ್ಯಾನ್, ಕೋಶಾಧಿಕಾರಿ ವರುಣ್ ಮತ್ತು ನಗರ ಪಂಚಾಯತ್ ಅಭಿಯಂತರರಾದ ಶ್ರೀಮತಿ ಅಶ್ವಿನಿಯವರು ಉಪಸ್ಥಿತರಿದ್ದರು.

