ಪ್ರತಿಭೆಗಳ ಅನಾವರಣಕ್ಕೆ ಅವಕಾಶ – ದಿವಾಕರ ಎಸ್ ಮರಕಾಲ
ವಾಯ್ಸ್ ಆಪ್ ಚಾಣಕ್ಯ ಸಂಗೀತ ಸ್ಪರ್ಧೆಯ ಆಯ್ಕೆ ಪ್ರಕ್ರಿಯೆ
ಹೆಬ್ರಿ : ಗ್ರಾಮೀಣ ಪ್ರದೇಶದಲ್ಲಿ ಇರುವ ಪ್ರತಿಭೆಗಳ ಅನಾವರಣಕ್ಕೆ ಹೆಬ್ರಿಯ ಚಾಣಕ್ಯ ಸಂಗೀತ ಸಂಸ್ಥೆ ಕಳೆದ 6 ವಷ೯ಗಳಿಂದ ಸಂಗೀತ ಸ್ಪರ್ಧೆಯನ್ನು ಆಯೋಜಿಸುವುದರ ಜತೆಗೆ ವೇದಿಕೆ ಕಲ್ಪಿಸಿರುವುದರಿಂದ ಇಂದು ನೂರಾರು ಗಾಯಕರು ನಮ್ಮ ಸುತ್ತ ಮುತ್ತಲಿನಲ್ಲಿ ಕಾಣುತ್ತಿರುವುದು ಸಂತಸದ ಸಂಗತಿ.
ಇಲ್ಲಿ ವೇದಿಕೆ ಪಡೆದವರು ಇಂದು ರಾಜ್ಯ ಮಟ್ಟದಲ್ಲಿ ಹಾಗೂ ಟಿವಿ ಮಾದ್ಯಮಗಳ ರಿಯಾಲಿಟಿ ಪ್ರದರ್ಶನಗಳಲ್ಲಿ ಮಿಂಚುತ್ತಿರುವುದು ಶ್ಲಾಘನೀಯ ಎಂದು ಹೆಬ್ರಿ ಸರಕಾರಿ ಪ. ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ದಿವಾಕರ ಎಸ್ ಮರಕಾಲ ಹೇಳಿದರು.
ಅವರು ಹೆಬ್ರಿ ಸರಕಾರಿ ಪ. ಪೂ.ಕಾಲೇಜಿನ ಸಭಾಂಗಣದಲ್ಲಿ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಹೆಬ್ರಿಯ ಚಾಣಕ್ಯ ಇನ್ಸ್ಟಿಟ್ಯೂಟ್ ಆಪ್ ಮ್ಯೂಸಿಕ್ (Chanakya Institute Of Music) ಇವರ ನೇತೃತ್ವದಲ್ಲಿ ಹೆಬ್ರಿ ಸರಕಾರಿ ಪ್ರೌಢಶಾಲೆಯ ಸಹಕಾರದೊಂದಿಗೆ ನಡೆದ ವಾಯ್ಸ್ ಆಪ್ ಚಾಣಕ್ಯ ಸಂಗೀತ ಸ್ಪರ್ಧೆಯ (Voice Of Chanakya Music competion) ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಯ೯ಕ್ರಮವನ್ನು ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಘರಾಮ ಶೆಟ್ಟಿ (Raghurama Shetty) ಉದ್ಘಾಟಿಸಿದರು.
ಅವರು ಮಾತನಾಡಿ, ಸಂಗೀತ ಮಾನಸಿಕ ಆರೋಗ್ಯದ ಮನರಂಜೆಯನ್ನು ನೀಡುತ್ತದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಮಾರಂಭದಲ್ಲಿ ಯಕ್ಷಲೋಕ ಹೆಬ್ಬೇರಿ ಇದರ ಅಧ್ಯಕ್ಷ ಸುಬ್ರಹ್ಮಣ್ಯ ಪ್ರಸಾದ್, ತೀಪು೯ಗಾರರಾದ ಸಂಗೀತ ನಿಧೇ೯ಶಕ ರಮೇಶ್ ಡಿ. ಚಾಂತಾರು, ಸಂಗೀತ ಗುರು ಸ್ಮಿತಾ ಭಟ್ ಉಡುಪಿ, ಮೂಡುಬಿದಿರೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು. ಶೆಟ್ಟಿ, ಜೇಸಿರೆಟ್ ಪೂವಾ೯ಧ್ಯಕ್ಷೆ ಸೋನಿ ಪಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಬಾಲಚಂದ್ರ ಮುದ್ರಾಡಿ, ಪ್ರಸನ್ನ ಮುನಿಯಾಲು, ವೇದಾ ಶಿವಪುರ, ಸುಬ್ರಹ್ಮಣ್ಯ ಕಂಗಿನಾಯ, ಅನ್ವಯ, ಅಭಯ, ಗಗನ್, ಪ್ರಣಮ್, ದೇವಿ ಪ್ರಸಾದ್ ಮೊದಲಾದವರು ಸಹಕರಿಸಿದರು.
ಚಾಣಕ್ಯ ಇನ್ಸ್ಟಿಟ್ಯೂಟ್ ಆಪ್ ಮ್ಯೂಸಿಕ್ ನ ಅಧ್ಯಕ್ಷ ಉದಯಕುಮಾರ್ ಸ್ವಾಗತಿಸಿ, ನಿತ್ಯಾನಂದ ಭಟ್ ವಂದಿಸಿದರು.
ಉಡುಪಿ, ದ.ಕ. ಹಾಗೂ ಶಿವಮೊಗ್ಗ ಜಿಲ್ಲೆಯ ಗಾಯಕರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

