• Home  
  • ಮೂಳೂರಿನಲ್ಲಿ ಎಸ್‌ಟಿಪಿ ನಿರ್ಮಾಣಕ್ಕೆ ವಿರೋಧ:  ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ (Opposition to the construction of STP in Mulur: Appeal to officials and public representatives)
- PROBLEMS

ಮೂಳೂರಿನಲ್ಲಿ ಎಸ್‌ಟಿಪಿ ನಿರ್ಮಾಣಕ್ಕೆ ವಿರೋಧ:  ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ (Opposition to the construction of STP in Mulur: Appeal to officials and public representatives)

Share: ಮೂಳೂರಿನಲ್ಲಿ ಎಸ್‌ಟಿಪಿ ನಿರ್ಮಾಣಕ್ಕೆ ವಿರೋಧ:  ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ (Kaup) ಕಾಪು : ಕಾಪು ಪುರಸಭೆಯ ಕೊಳಚೆನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಮೂಳೂರಿನ ಜನವಸತಿ ಪ್ರದೇಶದಲ್ಲಿ ನಿರ್ಮಿಸಲುದ್ದೇಶಿಸಿರುವ ಕ್ರಮವನ್ನು ವಿರೋಧಿಸಿ  ಗ್ರಾಮಸ್ಥರು ತಹಸೀಲ್ದಾರ್ ಪ್ರತಿಭಾ ಆರ್ ಅವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು. ಮೂಳೂರು ಬಬ್ಬರ್ಯ ಕೊಡಮಣಿತ್ತಾಯ ದೈವಸ್ಥಾನದ ಬಳಿ ಜಮಾಯಿಸಿದ ಮೂಳೂರು ಗ್ರಾಮಸ್ಥರು, ವಾಹನದ ಮೂಲಕ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಕಾಪು ತಹಶೀಲ್ದಾರ್ ಪ್ರತಿಭಾ ಆರ್, ಪುರಸಭೆಯ ಮುಖ್ಯಾಧಿಕಾರಿ ನಾಗರಾಜ್, ‌ಕಾಪು ಶಾಸಕ ಗುರ್ಮೆ […]

(Kaup) ಕಾಪು : ಕಾಪು ಪುರಸಭೆಯ ಕೊಳಚೆನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಮೂಳೂರಿನ ಜನವಸತಿ ಪ್ರದೇಶದಲ್ಲಿ ನಿರ್ಮಿಸಲುದ್ದೇಶಿಸಿರುವ ಕ್ರಮವನ್ನು ವಿರೋಧಿಸಿ  ಗ್ರಾಮಸ್ಥರು ತಹಸೀಲ್ದಾರ್ ಪ್ರತಿಭಾ ಆರ್ ಅವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು.

ಮೂಳೂರು ಬಬ್ಬರ್ಯ ಕೊಡಮಣಿತ್ತಾಯ ದೈವಸ್ಥಾನದ ಬಳಿ ಜಮಾಯಿಸಿದ ಮೂಳೂರು ಗ್ರಾಮಸ್ಥರು, ವಾಹನದ ಮೂಲಕ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಕಾಪು ತಹಶೀಲ್ದಾರ್ ಪ್ರತಿಭಾ ಆರ್, ಪುರಸಭೆಯ ಮುಖ್ಯಾಧಿಕಾರಿ ನಾಗರಾಜ್, ‌ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಹಾಗೂ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರಿಗೆ ಮನವಿ ಸಲ್ಲಿಸಿದರು.

ಕಾಪು ಪೇಟೆಯ ಕೊಳಚೆ ನೀರು ನಿರ್ವಹಣ ಘಟಕ ನಿರ್ಮಿಸಲು ಸುಮಾರು 1.78 ಎಕರೆ ಕೃಷಿ ಜಮೀನು ಕಾಪು ಪುರಸಭೆಗೆ ತಹಶೀಲ್ದಾರ್ ಮೂಳೂರಿನ ಜಾಗವನ್ನು ಗುರುತಿಸಿದ್ದಾರೆ. ಈ ಜಮೀನು ಸುತ್ತ ಮುತ್ತ ಮನೆ, ಕೃಷಿ ಭೂಮಿ ತೋಟ, ನಾಗಬನ, ದೈವಾರಾಧನೆ ಸ್ಥಳಗಳಿದ್ದು, ಒಂದು ವೇಳೆ ಈ ಘಟಕ ನಿರ್ಮಾಣವಾದರೆ ಇಡೀ ಗ್ರಾಮದ ಕುಡಿಯುವ ನೀರಿನ ಬಾವಿ ಕಲುಷಿತಗೊಳ್ಖುವ ಸಾಧ್ಯತೆ ಇದೆ. ಅಲ್ಲದೆ ಇದರಿಂದ ಹೊರ ಸೂಸುವ ದುರ್ನಾತ ಹಾಗೂ ರಾಸಾಯನಿಕ ಮಿಶ್ರಿತ ತ್ಯಾಜ್ಯ ಇಡೀ ಪರಿಸರವನ್ನು ಕಲುಷಿತ ಆಗುವುದರ ಜತೆಗೆ ಮಾರಕ ರೋಗ ಕ್ಯಾನ್ಸರ್, ಮಲೇರಿಯಾದಂತಹ ಮಾರಕ ಸಾಂಕ್ರಾಮಿಕ ರೋಗ ಹರಡುವ ಭೀತಿ ಇರುತ್ತದೆ ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್, ದಂಡಾಧಿಕಾರಿಯಾಗಿ ಕಾಪು ತಾಲೂಕಿನ ನೆಲ, ಜಲವನ್ನು ರಕ್ಷಿಸುವ ಜವಾಬ್ದಾರಿಯಿದೆ. ಪುರಸಭೆ ಅಭಿಯಾಚನೆ ಮೇರೆಗೆ ಎಸ್‌ಟಿಪಿ ರಚನೆಗೆ ಮೂಳೂರು ಗ್ರಾಮದ 1.78 ಎಕರೆ ಜಮೀನನ್ನು ಗೊತ್ತು ಮಾಡಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಪುರಸಭೆಗೆ ನಿರ್ದೇಶನ ನೀಡಲಾಗಿದೆ.

ಗ್ರಾಮಸ್ಥರ ವಿರೋಧವಿರುವುದನ್ನು ಪರಿಗಣಿಸಿ ಪುರಸಭೆ ವ್ಯಾಪ್ತಿಯ ನಾಲ್ಕು ಗ್ರಾಮಗಳಲ್ಲಿ ಸೂಕ್ತ ಜಾಗವೆಂದು ಅವರು ಕೋರಿಕೆ ಸಲ್ಲಿಸಿದಲ್ಲಿ ಮೂಳೂರು ಜಾಗವನ್ನು ರದ್ದುಗೊಳಿಸಿ ಹೊಸ ಜಾಗವನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದರು.

ಪುರಸಭೆ, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಗ್ರಾಮಸ್ಥರಾದ ಎಂ.ಎ.ಗಪೂರ್, ಮನೋಹರ ಅಡ್ಯಂತಾಯ, ಪುರಸಭೆ ಸದಸ್ಯರಾದ ಸತೀಶ್ಚಂದ್ರ ಮೂಳೂರು, ಮೊಹಮ್ಮದ್ ಆಸೀಫ್, ವಹೀದಾ ಶರೀಫ್, ಚಂದ್ರಕಾಂತ್ ಮೆಂಡನ್, ಪುರುಷೋತ್ತಮ ಸಾಲ್ಯಾನ್, ಪ್ರಭಾತ್‌ ಶೆಟ್ಟಿ ಸಹಿತ ನೂರಾರು ಮೂಳೂರು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.