ಮೂಳೂರು: ಬೈಕಿಗೆ ಟೆಂಪೋ ಡಿಕ್ಕಿ, ಬೈಕ್ ಸವಾರನಿಗೆ ಗಾಯ
ಫಕೀರಣಕಟ್ಟೆಯ ಮಂಜು ಗಾಯಗೊಂಡವರು
(Mooluru) ಮೂಳೂರು : ಮೂಳೂರು ರಾ.ಹೆ.66 ರ ವೆಸ್ಟ್ ಕೋಸ್ಟ್ ನರ್ಸರಿ ಬಳಿ ಉಚ್ಚಿಲ ಬಡಾ ಗ್ರಾಮದ ಸ್ವಚ್ಛವಾಹಿನಿ ಟೆಂಪೋವೊಂದು ಬೈಕಿಗೆ ಗುದ್ದಿದ ಪರಿಣಾಮ, ಬೈಕ್ ಸವಾರ ಗಾಯಗೊಂಡ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ಗಾಯಗೊಂಡ ಬೈಕ್ ಸವಾರನನ್ನುಫಕೀರಣಕಟ್ಟೆಯ ಮಂಜು(30) ಎಂದು ಗುರುತಿಸಲಾಗಿದೆ.
ಉಚ್ಚಿಲ ಬಡಾ ಗ್ರಾಮದ ಸ್ವಚ್ಛವಾಹಿನಿ ಟೆಂಪೋ ಅಲ್ ಇಹಸಾನ್ ಶಾಲೆಯ ಮಾರ್ಗದಿಂದ ಹೆದ್ದಾರಿಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.
ಗಾಯಗೊಂಡ ಮಂಜುರವರನ್ನು ಉಚ್ಚಿಲ ಸಮಾಜ ಸೇವಕ ಜಲಾಲುದ್ದೀನ್ ರವರು ಸ್ಥಳೀಯ ಎಸ್ಡಿಪಿಐ ಅಂಬುಲೆನ್ಸ್ ಚಾಲಕ ಕೆಎಂ ಸಿರಾಜ್, ಎನ್ಎಚ್ ರಫೀಕ್, ಕಲಂದರ್ ಅವರ ಸಹಕಾರದಲ್ಲಿ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.
ಕಾಪು ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

