• Home  
  • ಮೇ. 31 : ನಾಗಸ್ವರ ವಾದಕ ಸೈಯದ್ ನಾಸಿರ್ ಎರ್ಮಾಳುರವರಿಗೆ ತುಳು ಅಕಾಡೆಮಿ ಚಾವಡಿ ಗೌರವ (May 31: Tulu Academy Chavadi honors Nagaswara artist Syed Nasir yermal)
- ಸನ್ಮಾನ, ಅಭಿನಂದನೆ

ಮೇ. 31 : ನಾಗಸ್ವರ ವಾದಕ ಸೈಯದ್ ನಾಸಿರ್ ಎರ್ಮಾಳುರವರಿಗೆ ತುಳು ಅಕಾಡೆಮಿ ಚಾವಡಿ ಗೌರವ (May 31: Tulu Academy Chavadi honors Nagaswara artist Syed Nasir yermal)

Share: ಮೇ. 31 : ನಾಗಸ್ವರ ವಾದಕ ಸೈಯದ್ ನಾಸಿರ್ ಎರ್ಮಾಳುರವರಿಗೆ ತುಳು ಅಕಾಡೆಮಿ ಚಾವಡಿ ಗೌರವ  (Mangaluru)ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಹಿರಿಯ ನಾಗಸ್ವರ ವಾದಕ  ಸೈಯದ್ ನಾಸಿರ್ ಎರ್ಮಾಳುರವರಿಗೆ ಚಾವಡಿ ತಮ್ಮನದ ಗೌರವ ಸಮರ್ಪಣೆಯ ಕಾರ್ಯಕ್ರಮ ಮೇ 31ರಂದು ಸಂಜೆ  4.30 ಗಂಟೆಗೆ ಪಡುಬಿದ್ರಿ ಕನ್ನಂಗಾರು ಶ್ರೀ  ಬ್ರಹ್ಮಬೈದರ್ಕಳ ಗರಡಿಯಲ್ಲಿ ನಡೆಯಲಿದೆ.  ಈ ಚಾವಡಿ ತಮ್ಮನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳು ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ  ಕಾಪಿಕಾಡ್ ವಹಿಸುವರು. ಪಡುಬಿದ್ರಿ […]

(Mangaluru)ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಹಿರಿಯ ನಾಗಸ್ವರ ವಾದಕ  ಸೈಯದ್ ನಾಸಿರ್ ಎರ್ಮಾಳುರವರಿಗೆ ಚಾವಡಿ ತಮ್ಮನದ ಗೌರವ ಸಮರ್ಪಣೆಯ ಕಾರ್ಯಕ್ರಮ ಮೇ 31ರಂದು ಸಂಜೆ  4.30 ಗಂಟೆಗೆ ಪಡುಬಿದ್ರಿ ಕನ್ನಂಗಾರು ಶ್ರೀ  ಬ್ರಹ್ಮಬೈದರ್ಕಳ ಗರಡಿಯಲ್ಲಿ ನಡೆಯಲಿದೆ.

 ಈ ಚಾವಡಿ ತಮ್ಮನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳು ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ  ಕಾಪಿಕಾಡ್ ವಹಿಸುವರು.

ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ ವೈ, ಜಾನಪದ ವಿದ್ವಾಂಸರು ಹಾಗೂ ತುಳು ಅಕಾಡೆಮಿ ಮಾಜಿ ಸದಸ್ಯರಾದ ಡಾ.ವೈ. ಎನ್. ಶೆಟ್ಟಿ, ಕನ್ನಂಗಾರು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷ ಶೀನ ಪೂಜಾರಿ, ಪಡುಬಿದ್ರಿ ಗ್ರಾಮ ಪಂಚಾಯತ್  ಸದಸ್ಯ ರಮೀಝ್ ಹುಸೇನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.

 ತುಳು ಸಂಸ್ಕ್ರತಿ ಸಂಶೋಧಕ ನಿತೇಶ್ ಅಂಚನ್  ಅಭಿನಂದನಾ ಭಾಷಣ ಮಾಡಲಿರುವರು.

  ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಹಾಗೂ ಸದಸ್ಯ ಸಂಚಾಲಕ  ಉದ್ಯಾವರ  ನಾಗೇಶ್ ಕುಮಾರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ತುಳು ಅಕಾಡೆಮಿ ಪ್ರಕಟಣೆ ತಿಳಿಸಿದೆ.

 60ನೇ ವರ್ಷಕ್ಕೆ ಪಾದಾರ್ಪಣೆ ಮಾಡಲಿರುವ ಸೈಯದ್ ನಾಸಿರ್ ಎರ್ಮಾಳ್ ಅವರು  ತನ್ನ ಎಂಟನೇ ವರ್ಷ ಪ್ರಾಯದಿಂದ ನಾಗಸ್ವರ ವಾದನದಲ್ಲಿ ತೊಡಗಿಸಿಕೊಂಡು ಕಳೆದ 51 ವರ್ಷಗಳಿಂದ ಕಾಪು, ಮುದರಂಗಡಿ  ಎರ್ಮಾಳು, ಎಲ್ಲೂರು ಪರಿಸರದ ದೇವಸ್ಥಾನ, ದೈವಸ್ಥಾನಗಳಲ್ಲಿ ವಾದ್ಯ ಸೇವೆ ನಡೆಸಿಕೊಂಡು ಬರುತ್ತಿದ್ದಾರೆ.

ಇನ್ನೂರು ವರ್ಷಗಳ ನಾಗಸ್ವರ ವಾದನ ಪರಂಪರೆ ಇರುವ ‘ವಾದ್ಯದ ಸಾಯಿಬೇರ್’ ಎಂಬ ಖ್ಯಾತಿಯ ಮನೆತನದ ಕೊಂಡಿಯಾಗಿರುವ ಸೈಯದ್ ನಾಸಿರ್ ಅವರು ತನ್ನ ತಂದೆ ಅನ್ವರ್ ಹುಸೇನ್ ಎರ್ಮಾಳು ಅವರಿಂದ ನಾಗಸ್ವರ ವಾದನ  ಕಲಿತ್ತಿದ್ದರು. ನಾಸೀರ್‌ರವರ ಅಜ್ಜ, ಮುತ್ತಜ್ಜಂದಿರು ಕೂಡ ನಾಗಸ್ವರ ವಾದಕರಾಗಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.