• Home  
  •  ಅಷ್ಟ ಮಠದ ವಿದ್ವಾಂಸರಾಗಿದ್ದ ಪಿ. ಲಕ್ಷ್ಮೀ ನಾರಾಯಣ ಶರ್ಮ ನಿಧನ (Ashta Math scholar P. Lakshmi Narayan Sharma passes away)
- ನಿಧನ

 ಅಷ್ಟ ಮಠದ ವಿದ್ವಾಂಸರಾಗಿದ್ದ ಪಿ. ಲಕ್ಷ್ಮೀ ನಾರಾಯಣ ಶರ್ಮ ನಿಧನ (Ashta Math scholar P. Lakshmi Narayan Sharma passes away)

Share: ಅಷ್ಟ ಮಠದ ವಿದ್ವಾಂಸರಾಗಿದ್ದ ಪಿ. ಲಕ್ಷ್ಮೀ ನಾರಾಯಣ ಶರ್ಮ ನಿಧನ (Padubidri) ಪಡುಬಿದ್ರಿ : ನಡ್ಸಾಲು ತೋಡಬಳಿ ನಿವಾಸಿ ಪಡುಬಿದ್ರಿ ಲಕ್ಷ್ಮೀ ನಾರಾಯಣ ಶರ್ಮ(81) ವೃದ್ಧಾಪ್ಯದ ದೆಸೆಯಿಂದ ಶುಕ್ರವಾರ ಪಡುಬಿದ್ರಿಯ ಸ್ವಗೃಹದಲ್ಲಿ ನಿಧನ ಹೊಂದಿದರು.  ಮೃತರು ಮೂವರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ. ದ್ವೈತ ಸಿದ್ಧಾಂತದ ಪ್ರಕಾಂಡ ಪಂಡಿತರಾಗಿದ್ದ ಲಕ್ಷ್ಮೀ ನಾರಾಯಣ ಶರ್ಮರವರು ಉಡುಪಿ ಅಷ್ಟಮಠದ ಹಿರಿಯ ಆಸ್ಥಾನ ವಿದ್ವಾಂಸರಲ್ಲಿ ಓರ್ವರಾಗಿದ್ದರು. ಅದಮಾರು ಮಠದ ಕಡೆಕೊಪ್ಲ ಗುರುಕುಲದಲ್ಲಿ ವೇದ ವಿದ್ಯಾಭ್ಯಾಸ ಮಾಡಿದ್ದ ಇವರು, ಸಂಸ್ಕೃತದಲ್ಲಿ ಅಲಂಕಾರ […]

(Padubidri) ಪಡುಬಿದ್ರಿ : ನಡ್ಸಾಲು ತೋಡಬಳಿ ನಿವಾಸಿ ಪಡುಬಿದ್ರಿ ಲಕ್ಷ್ಮೀ ನಾರಾಯಣ ಶರ್ಮ(81) ವೃದ್ಧಾಪ್ಯದ ದೆಸೆಯಿಂದ ಶುಕ್ರವಾರ ಪಡುಬಿದ್ರಿಯ ಸ್ವಗೃಹದಲ್ಲಿ ನಿಧನ ಹೊಂದಿದರು.

 ಮೃತರು ಮೂವರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ದ್ವೈತ ಸಿದ್ಧಾಂತದ ಪ್ರಕಾಂಡ ಪಂಡಿತರಾಗಿದ್ದ ಲಕ್ಷ್ಮೀ ನಾರಾಯಣ ಶರ್ಮರವರು ಉಡುಪಿ ಅಷ್ಟಮಠದ ಹಿರಿಯ ಆಸ್ಥಾನ ವಿದ್ವಾಂಸರಲ್ಲಿ ಓರ್ವರಾಗಿದ್ದರು.

ಅದಮಾರು ಮಠದ ಕಡೆಕೊಪ್ಲ ಗುರುಕುಲದಲ್ಲಿ ವೇದ ವಿದ್ಯಾಭ್ಯಾಸ ಮಾಡಿದ್ದ ಇವರು, ಸಂಸ್ಕೃತದಲ್ಲಿ ಅಲಂಕಾರ ಶಾಸ್ತ್ರ ದ್ವೈತ ವೇದಾಂತ ಮತ್ತು ವ್ಯಾಕರಣ ಶಾಸ್ತ್ರ ವಿದ್ವತ್ ಪದವಿ ಹಾಗೂ ಬೆಂಗಳೂರು ವಿವಿಯ ಎಂಎ ಪದವಿಯಲ್ಲಿ ಸುವರ್ಣ ಪದಕವನ್ನು ಪಡೆದ ವಿದ್ಯಾರ್ಥಿಯಾಗಿದ್ದರು.

ಎಳವೆಯಲ್ಲೇ ಶ್ರೀ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಪೂರ್ಣಪ್ರಜ್ಞ ವಿದ್ಯಾಪೀಠದ ಗುರುಗಳಾಗಿ ಸೇವೆ ಸಲ್ಲಿಸಿದ್ದರು. ಮುಂದೆ 1975ಲ್ಲಿ ಉಡುಪಿಯ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಅಲಂಕಾರ ಶಾಸ್ತ್ರ ಪಾದ್ಯಾಪಕರಾಗಿ ಸೇರಿ ವೃತ್ತಿ ನಿರತರಾಗಿ 1983ರಿಂದ ಸತತ 20ವರ್ಷಗಳ ಕಾಲ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ಅಸಂಖ್ಯಾತ ಶಿಷ್ಯರನ್ನು ಹೊಂದಿ 2004ರಲ್ಲಿ ನಿವೃತ್ತರಾಗಿದ್ದರು.

ಅದಮಾರು ಶ್ರೀ ಮಠದ ಯತಿದ್ವಯರಾದ ಶ್ರೀ ವಿಶ್ವಪ್ರಿಯ ಹಾಗೂ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಪಲಿಮಾರು ಶ್ರೀ ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹಾಗೂ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಭಂಡಾರಿಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರಿಗೆಲ್ಲಾ ಪಾಠವನ್ನೂ ಗೈದವರಾಗಿದ್ದರು. ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಪಲಿಮಾರು, ಭಂಡಾರಿಕೇರಿ ಉಭಯ ಮಠಾಧೀಶರಾಗಿದ್ದ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರು, ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಅಚ್ಚುಮೆಚ್ಚಿನ ಶಿಷ್ಯರೂ ಇವರಾಗಿದ್ದರು.

  ಗ್ರಂಥಾಲಯದ ಮೂಲಕ ಪ್ರಕಟಗೊಳ್ಳುತ್ತಿದ್ದ ಅನೇಕ ಕೃತಿಗಳ ಪರಿಶೋಧಕರಾಗಿದ್ದರು. ಕಳೆದ 20ವರ್ಷಗಳಿಂದ ಅಪರಿಗ್ರಹ ವೃತಾಚರಣೆಯನ್ನು ಗೈಯ್ಯುತ್ತಾ ಅನ್ನವನ್ನು ತ್ಯಜಿಸಿ ಸದಾ ಜಪ, ತಪಾನುಷ್ಟಾನ ನಿರತರಾಗಿದ್ದರು.

ಅನೇಕ ಕನ್ನಡ ಸಾಹಿತಿಗಳು, ವಿದ್ವಾಂಸರೂ ಸಂಸ್ಕೃತ ಭಾಷಾ ಅಧ್ಯಯನಕ್ಕಾಗಿ ಇವರ ಶಿಷ್ಯತ್ವವನ್ನು ಪರಿಗ್ರಹಿಸಿದ್ದರು. ವಿವಿಧ ಮಠಾಧೀಶರ ಪರ್ಯಾಯ ದರ್ಬಾರ್ ಸಹಿತ ನಾನಾ ಕಡೆಗಳಲ್ಲಿ ಲಕ್ಷ್ಮೀನಾರಾಯಣ  ಶರ್ಮರು ಸಮ್ಮಾನಿತರಾಗಿದ್ದರು.

ಲಕ್ಷ್ಮೀನಾರಾಯಣ  ಶರ್ಮರ ಅವರ ನಿಧನಕ್ಕೆ ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು, ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹಾಗೂ ಶಿಷ್ಯ ವರ್ಗ, ಆಪ್ತರು ತೀವ್ರ ಸಂತಾಪ ಸೂಚಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.