• Home  
  •   ಉಡುಪಿ : ಕಾಂಗ್ರೆಸ್ ನಾಯಕ ಎಂ.ಜಿ. ಹೆಗಡೆ ಭಾವಚಿತ್ರಕ್ಕೆ ಉಗಿದು ಪ್ರತಿಭಟನೆ (Protest at Udupi)
- ರಾಜಕೀಯ

  ಉಡುಪಿ : ಕಾಂಗ್ರೆಸ್ ನಾಯಕ ಎಂ.ಜಿ. ಹೆಗಡೆ ಭಾವಚಿತ್ರಕ್ಕೆ ಉಗಿದು ಪ್ರತಿಭಟನೆ (Protest at Udupi)

Share:   ಉಡುಪಿ : ಕಾಂಗ್ರೆಸ್ ನಾಯಕ ಎಂ.ಜಿ. ಹೆಗಡೆ ಭಾವಚಿತ್ರಕ್ಕೆ ಉಗಿದು ಪ್ರತಿಭಟನೆ  (Udupi) ಉಡುಪಿ: ಉಡುಪಿಯಲ್ಲಿ ಭಯೋತ್ಪಾಧನಾ ವಿರೋಧಿ ವೇದಿಕೆ ವತಿಯಿಂದ ವಿಶಿಷ್ಟ ರೀತಿಯ ಪ್ರತಿಭಟನೆ ನಡೆದಿದ್ದು, ಕಾಂಗ್ರೆಸ್ ನಾಯಕ ಎಂ.ಜಿ. ಹೆಗಡೆ (MG Hegde) ಭಾವಚಿತ್ರಕ್ಕೆ ಉಗಿದು ಪ್ರತಿಭಟನೆ ದಾಖಲಿಸಲಾಯಿತು.  ನಗರದ ಅಜ್ಜರ ಕಾಡಿನ ಹುತಾತ್ಮ ಸ್ಮಾರಕದ ಮುಂಭಾಗ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಆಯೋಜಿಸಿದ್ದವು.  ಕಾಂಗ್ರೆಸ್ ನಾಯಕ ಎಂ.ಜಿ. ಹೆಗಡೆ ಕರ್ನಾಟಕದ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದಕ್ಕೆ ಪ್ರತಿಯಾಗಿ ಈ ಪ್ರತಿಭಟನೆ ನಡೆಯಿತು. ಮಾಧ್ಯಮಗಳಲ್ಲಿ  ದೇಶದ್ರೋಹ […]

  ಉಡುಪಿ : ಕಾಂಗ್ರೆಸ್ ನಾಯಕ ಎಂ.ಜಿ. ಹೆಗಡೆ ಭಾವಚಿತ್ರಕ್ಕೆ ಉಗಿದು ಪ್ರತಿಭಟನೆ

 (Udupi) ಉಡುಪಿ: ಉಡುಪಿಯಲ್ಲಿ ಭಯೋತ್ಪಾಧನಾ ವಿರೋಧಿ ವೇದಿಕೆ ವತಿಯಿಂದ ವಿಶಿಷ್ಟ ರೀತಿಯ ಪ್ರತಿಭಟನೆ ನಡೆದಿದ್ದು, ಕಾಂಗ್ರೆಸ್ ನಾಯಕ ಎಂ.ಜಿ. ಹೆಗಡೆ (MG Hegde) ಭಾವಚಿತ್ರಕ್ಕೆ ಉಗಿದು ಪ್ರತಿಭಟನೆ ದಾಖಲಿಸಲಾಯಿತು.

 ನಗರದ ಅಜ್ಜರ ಕಾಡಿನ ಹುತಾತ್ಮ ಸ್ಮಾರಕದ ಮುಂಭಾಗ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಆಯೋಜಿಸಿದ್ದವು.

 ಕಾಂಗ್ರೆಸ್ ನಾಯಕ ಎಂ.ಜಿ. ಹೆಗಡೆ ಕರ್ನಾಟಕದ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದಕ್ಕೆ ಪ್ರತಿಯಾಗಿ ಈ ಪ್ರತಿಭಟನೆ ನಡೆಯಿತು. ಮಾಧ್ಯಮಗಳಲ್ಲಿ  ದೇಶದ್ರೋಹ ಘೋಷಣೆಯ ಸುಳ್ಳು ಸುದ್ದಿಗಳು ಬರುತ್ತಿವೆ. ಇದನ್ನು ಸಾಬೀತುಪಡಿಸಲಿ ಎಂದು ಎಂ.ಜಿ. ಹೆಗಡೆ ಸವಾಲು ಹಾಕಿದ್ದರು.

 ಟಿವಿಗಳಲ್ಲಿ ಸುಳ್ಳು ಸುದ್ದಿ ಬಿತ್ತರಿಸುತ್ತಿದ್ದಾರೆ, ಒಂದು ವೇಳೆ ಎಫ್ ಎಸ್ ಎಲ್ ವರದಿಯಲ್ಲಿ ಘೋಷಣೆ ಕೂಗಿದ್ದು ಸಾಬೀತಾಗದಿದ್ದರೆ ಮಾಧ್ಯಮದವರ ಮುಖಕ್ಕೆ ಉಗಿಯಿರಿ ಎಂದು ಎಂ.ಜಿ. ಹೆಗಡೆ ಹೇಳಿಕೆ ನೀಡಿದ್ದರು. ಇದರಿಂದ ಕುಪಿತಗೊಂಡ ಹಿಂದೂಪರ ಸಂಘಟನೆ ಕಾರ್ಯಕರ್ತರು

ಪ್ರತಿಭಟನಾ ಸಭೆ ನಡೆಸಿ ಕೊನೆಯಲ್ಲಿ ಎಂಜಿ ಹೆಗಡೆ ಭಾವಚಿತ್ರಕ್ಕೆ ಎಲೆಅಡಿಕೆ ತಿಂದು ಉಗುಳಿದರು.

   ಭಾವಚಿತ್ರಕ್ಕೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ (Udupi MLA Yashpal Suvarna) ಕೂಡ ಉಗುಳಿ ಗಮನ ಸೆಳೆದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.