• Home  
  •  ರಕ್ತದಾನ ನೀಡುವುದು ಪುಣ್ಯದ ಕೆಲಸ : ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ
- ಪ್ರಚಲಿತ

 ರಕ್ತದಾನ ನೀಡುವುದು ಪುಣ್ಯದ ಕೆಲಸ : ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ

Share:  ರಕ್ತದಾನ ನೀಡುವುದು ಪುಣ್ಯದ ಕೆಲಸ : ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಉಡುಪಿ: ಇನ್ನೊಬ್ಬರ ಪ್ರಾಣ ಉಳಿಸುವ ರಕ್ತದಾನ ನೀಡುವುದು ಪುಣ್ಯದ ಕೆಲಸ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಭಾರತ ಸರ್ಕಾರ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಉಡುಪಿ ನೆಹರು ಯುವ ಕೇಂದ್ರ ಮತ್ತು ಹೆಜಮಾಡಿ ಕರಾವಳಿ ಯುವಕ-ಯುವತಿ ವೃಂದದ ಆಶ್ರಯದಲ್ಲಿ ಮಂಗಳೂರು ಕೆಎಮ್‌ಸಿ ಅಸ್ಪತ್ರೆಯ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ಭಾನುವಾರ ಹೆಜಮಾಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ […]

 ರಕ್ತದಾನ ನೀಡುವುದು ಪುಣ್ಯದ ಕೆಲಸ : ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ

ಉಡುಪಿ: ಇನ್ನೊಬ್ಬರ ಪ್ರಾಣ ಉಳಿಸುವ ರಕ್ತದಾನ ನೀಡುವುದು ಪುಣ್ಯದ ಕೆಲಸ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಭಾರತ ಸರ್ಕಾರ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಉಡುಪಿ ನೆಹರು ಯುವ ಕೇಂದ್ರ ಮತ್ತು ಹೆಜಮಾಡಿ ಕರಾವಳಿ ಯುವಕ-ಯುವತಿ ವೃಂದದ ಆಶ್ರಯದಲ್ಲಿ ಮಂಗಳೂರು ಕೆಎಮ್‌ಸಿ ಅಸ್ಪತ್ರೆಯ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ಭಾನುವಾರ ಹೆಜಮಾಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೇಷ್ಠ ದಾನಗಳಲ್ಲಿ ದಾನಗಳಲ್ಲಿ ಒಂದು ರಕ್ತದಾನ. ರಕ್ತಕ್ಕೆ ಕುಲ, ಗೋತ್ರ, ಜಾತಿ, ಮತಗಳೆಂಬ ಭೇದ ಭಾವವಿಲ್ಲ.   ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಹೆಜಮಾಡಿ ಕರಾವಳಿ ಯುವಕ ಯುವತಿ ವೃಂದದವರಿಗೆ ಅಭಿನಂದನೆ ಸಲ್ಲಿಸಿದ ಶಾಸಕರು, ಈ ಕಾರ್ಯ ಇತರ ಸಂಘ-ಸಂಸ್ಥೆಗಳಿಗೂ ಪ್ರೇರಣೆಯಾಗಲಿ ಎಂದರು.

ಹೆಜಮಾಡಿ ಕರಾವಳಿ ಯುವಕ ವೃಂದದ ಅಧ್ಯಕ್ಷ ಅಶೋಕ್ ವಿ.ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಹೆಜಮಾಡಿ ಗ್ರಾಪಂ ಅಧ್ಯಕ್ಷೆ ರೇಶ್ಮಾ ಎ. ಮೆಂಡನ್, ಉಪಾಧ್ಯಕ್ಷ ಮೋಹನ್ ಸುವರ್ಣ, ಸದಸ್ಯ ಶರಣ್ ಕುಮಾರ್ ಮಟ್ಟು, ಮಂಗಳೂರು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಮಿಹಿರ್ ಮತ್ತು ಡಾ. ಹಿತಾಶ್ರೀ ಚಂದ್ರಕಾಂತ್ ಶ್ರೀಯಾನ್, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ, ಉಚ್ಚಿಲ ಕರಾವಳಿ ಫ್ರೆಂಡ್ಸ್ ಅಧ್ಯಕ್ಷ ಹರಿಪ್ರಸಾದ್ ಸಾಲ್ಯಾನ್, ಹದಿನಾರುಪಟ್ಣ ಮೊಗವೀರ ಮಹಾಸಭಾ ಅಧ್ಯಕ್ಷ ರವಿ ಎಚ್. ಕುಂದರ್, ಕರಾವಳಿ ಯುವತಿ ವೃಂದದ ಅಧ್ಯಕ್ಷೆ ಪವಿತ್ರಾ ಗಿರೀಶ್ ಮುಖ್ಯ ಅತಿಥಿಗಳಾಗಿದ್ದರು.

ಸಂಪತ್ ಸನಿಲ್ ಸ್ವಾಗತಿಸಿದರು. ಅದಿತ್ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ದೀಪಕ್ ವಂದಿಸಿದರು.

 ಶಿಬಿರದಲ್ಲಿ ಒಟ್ಟು ೭೧ ಯೂನಿಟ್ ರಕ್ತ ಸಂಗ್ರಹಿಸಲಾಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.