• Home  
  • ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ತನ್ನ ಪಾರಮ್ಯ ಮೆರೆಯುತ್ತಿದೆ : ಆರ್. ಅಶೋಕ್ ಆರೋಪ (Drug mafia is asserting its supremacy in the state: R. Ashok alleges)
- ರಾಜಕೀಯ

ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ತನ್ನ ಪಾರಮ್ಯ ಮೆರೆಯುತ್ತಿದೆ : ಆರ್. ಅಶೋಕ್ ಆರೋಪ (Drug mafia is asserting its supremacy in the state: R. Ashok alleges)

Share: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ತನ್ನ ಪಾರಮ್ಯ ಮೆರೆಯುತ್ತಿದೆ : ಆರ್. ಅಶೋಕ್ ಆರೋಪ ಕಾಪು ಮಂಥನ್‌ ರಿಸಾರ್ಟಿನಲ್ಲಿ ನಡೆದ ಪತ್ರಿಕಾಗೋಷ್ಠಿ (Kaup) ಕಾಪು: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ತನ್ನ ಪಾರಮ್ಯ ಮೆರೆಯುತ್ತಿದ್ದರೂ, ಕಾಂಗ್ರೆಸ್ ಸರಕಾರ  ಅದನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.   ಸೋಮವಾರ ಕಾಪುವಿನ ಮಂಥನ್‌ ರಿಸಾರ್ಟಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ಭಾರೀ ಡ್ರಗ್ಸ್ ಮಾಫಿಯಾವನ್ನು ಪತ್ತೆಹಚ್ಚಿರುವುದು ಕರ್ನಾಟಕ ಸರ್ಕಾರದ ವೈಫಲ್ಯವನ್ನು ಬಹಿರಂಗಪಡಿಸಿದೆ. […]

(Kaup) ಕಾಪು: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ತನ್ನ ಪಾರಮ್ಯ ಮೆರೆಯುತ್ತಿದ್ದರೂ, ಕಾಂಗ್ರೆಸ್ ಸರಕಾರ  ಅದನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

  ಸೋಮವಾರ ಕಾಪುವಿನ ಮಂಥನ್‌ ರಿಸಾರ್ಟಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ಭಾರೀ ಡ್ರಗ್ಸ್ ಮಾಫಿಯಾವನ್ನು ಪತ್ತೆಹಚ್ಚಿರುವುದು ಕರ್ನಾಟಕ ಸರ್ಕಾರದ ವೈಫಲ್ಯವನ್ನು ಬಹಿರಂಗಪಡಿಸಿದೆ.

ಒಂದೆರಡು ದಿನದಿಲ್ಲಿ ಹೊಸ ವರ್ಷಾಚರಣೆ ನಡೆಯಲಿದ್ದು, ಕರ್ನಾಟಕದಲ್ಲಿ ‘ಡ್ರಗ್ಸ್ ಸೆಲೆಬ್ರೇಶನ್ ನಡೆಯುತ್ತಿದೆ. ಮಹಾರಾಷ್ಟ್ರ ಪೊಲೀಸರು ಬೆಂಗಳೂರಿಗೆ ಬಂದು ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

   ಈ ದಾಳಿಗೆ ನಾವು ಮಹಾರಾಷ್ಟ್ರ ಪೊಲೀಸರಿಗೆ ಸಹಕಾರ ನೀಡಿದ್ದೇವೆ ಎನ್ನುತ್ತಾರೆ ಗೃಹ ಸಚಿವರು. ನಮ್ಮ ರಾಜ್ಯದಲ್ಲಿ ಜೋರಾಗಿ ಡ್ರಗ್‌ ಮಾಫಿಯಾ ನಡೆಯುತ್ತಿದ್ದರೂ, ನಮ್ಮ ಪೊಲೀಸರು ಗಾಡ ನಿದ್ರೆಯಲ್ಲಿದ್ದಾರೆ. ಇದಕ್ಕಿಂತ ದೊಡ್ಡ ಅವಮಾನ ಏನಿದೆ? ಗುಪ್ತಚರ ವ್ಯವಸ್ಥೆ ಸತ್ತು ಹೋಗಿದೆಯೇ? ಎಂದು ಪ್ರಶ್ನಿಸಿದರು.

    ಮಂಗಳೂರು ಮತ್ತು ಬೆಂಗಳೂರು ಜೈಲುಗಳಲ್ಲಿ ಡ್ರಗ್ ಪೆಡ್ಲರ್‌ಗಳು ತುಂಬಿದ್ದಾರೆ.  ಜೈಲುಗಳು ‘ಫೈವ್ ಸ್ಟಾರ್’ ಸೌಲಭ್ಯಗಳ ಕೇಂದ್ರಗಳಾಗಿವೆ. ಜೈಲುಗಳಲ್ಲಿ ಡ್ರಗ್ಸ್, ಅಫೀಮ್, ಮದ್ಯ ಎಲ್ಲವೂ ಸಿಗುತ್ತಿದೆ. ಜೈಲಿನಲ್ಲಿ ಪ್ರತಿದಿನ ಒಬ್ಬ ಕಾನ್ಸ್ಟೇಬಲ್ ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾನೆ. ಅದಕ್ಕೂ ಪೊಲೀಸರ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ ಎಂಬ ಆರೋಪವನ್ನೂ ಆರ್‌ ಅಶೋಕ್‌ ಮಾಡಿದರು.

   ಗೃಹ ಸಚಿವರಿಗೆ ಏನು ಕೇಳಿದರೂ ‘ನೋಡೋಣ’, ʼವರದಿ ಬಂದಿಲ್ಲʼ ಎನ್ನುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿ ಜಗಳದಲ್ಲಿ ಮುಳುಗಿದ್ದಾರೆ. ಇವರು ಸಿಎಂ ಆಗುತ್ತಾರೆ, ಅವರು ಸಿಎಂ ಆಗುತ್ತಾರೆ ಎನ್ನುವ ಸರ್ಕಾರ ಇದು ಗಿಣಿ ಶಾಸ್ತ್ರದಂತಾಗಿದೆ ಎಂದರು.  

 ಸರ್ಕಾರ ನಡೆಸುತ್ತಿರುವ ವೇಣುಗೋಪಾಲ್  

  ಬೆಂಗಳೂರು ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಮುಸ್ಲೀಮರನ್ನು ತೆರವು ಮಾಡಿದರೇ, ಅದನ್ನು ಪ್ರಶ್ನಿಸುವುದಕ್ಕೆ ಕೇರಳ ಸರ್ಕಾರಕ್ಕೆ ಯಾವ ಅಧಿಕಾರ ಇದೆ. ತೆರವಾದವರಿಗೆ ಪುನರ್ವಸತಿ ಕಲ್ಪಿಸಿ ಎಂದು ಕಾಂಗ್ರೆಸ್ ನ ಕೆ. ಸಿ. ವೇಣುಗೋಪಾಲ್ ಹೇಳಿದ್ದಾರೆ. ಹಾಗಾದರೆ  ಸರ್ಕಾರವನ್ನು ವೇಣುಗೋಪಾಲ್ ನಡೆಸುತಿದ್ದಾರೆಯೇ ಎಂದು ಆಶೋಕ್ ಪ್ರಶ್ನಿಸಿದರು.

  ಈ ಪ್ರಕರಣದ ಬಗ್ಗೆ ಕೇರಳದ ಜನಪ್ರತಿನಿಧಿಗಳ ನಿಯೋಗ ಬೆಂಗಳೂರಿಗೆ ಬಂದಿರುವುದು ಕಾಂಗ್ರೆಸ್ ಸರ್ಕಾರದ ದುರ್ಬಲತೆಯನ್ನು ತೋರಿಸುತ್ತದೆ. ಈ ನಿಯೋಗ ಬರುವುದಕ್ಕೆ ಯಾಕೆ ಅವಕಾಶ ನೀಡಿದಿರಿ. ನಮ್ಮ ನೆಲ-ಜಲ ವಿಚಾರದಲ್ಲಿ ಕಾಂಗ್ರೆಸ್ ಗೆ ಯಾವುದೇ ಕಾಳಜಿ ಇಲ್ಲ ಎಂಬುದನ್ನು ಇದು ತೋರಿಸುತ್ತಿದೆ ಎಂದವರು ಆರೋಪಿಸಿದರು.

  ಮುಂದಿನ ಚುನಾವಣೆಗಳ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡುವುದಿಲ್ಲ ಎಂದು ದೇವೇಗೌಡರು ಮಾದ್ಯಮಕ್ಕೆ ಹೇಳಿಕೆ ನೀಡಿದ್ದಾರೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಬಿಜೆಪಿ–ಜೆಡಿಎಸ್ ಮೈತ್ರಿ ಹಾಲು ಜೇನಿನಂತಿದೆ. ನಾವು ಎನ್‌ಡಿಎ ಪಾಲುದಾರರು. ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಮೆಂಡನ್‌, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್‌ ಶೆಟ್ಟಿ, ಕಾಪು ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಶ್ರೀಕಾಂತ್‌ ನಾಯಕ್‌, ರೇಶ್ಮಾ ಉದಯ ಶೆಟ್ಟಿ ಉಪಸ್ಥಿತರಿದ್ದರು.  

Leave a comment

Your email address will not be published. Required fields are marked *

eMedia Kannada  @2025. All Rights Reserved.