ಮಂಗಳೂರು: ಜೂನ್ ಬಾರಿಯೂ 5 ರಾಜ್ಯಕ್ಕೆ ಮುಂಗಾರು ಆಗಮನ ವಿಳಂಬವಾಗಿದೆ.
ಬೇಸಗೆ ಮಳೆಯೂ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೆ ಬಿಸಿಲ ಝಳವೂ ಹೆಚ್ಚಾಗಿದ್ದು ಜನರು ಕರಾವಳಿ ಭಾಗದಲ್ಲಿ ತತ್ತರಿಸುವಂತಾಗಿದೆ.
2019ರಲ್ಲಿಯೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಜೂನ್ ಆರಂಭದಲ್ಲಿ ನಿಧಾನವಾಗಿ ಆಗಮಿಸಿತ್ತು.
ಭಾರತೀಯ ಹವಾಮಾನ ಇಲಾಖೆ ಈ ಬಾರಿ ಜೂ.4ರ ವೇಳೆಗೆ ಮುಂಗಾರು ಮಾರುತಗಳು ಕೇರಳ ಪ್ರವೇಶಿಸಲಿವೆ ಎಂದು ತಿಳಿಸಿತ್ತು. ಆದರೆ ಸದ್ಯದ ಸ್ಥಿತಿ ಪ್ರಕಾರ, ಕೇರಳದಲ್ಲಿ ಮಳೆಯಾಗಲು ಇನ್ನೂ 4-5 ದಿನ ಕಾಯಬೇಕಿದೆ. ಹೀಗಾಗಿ ರಾಜ್ಯ ಕರಾವಳಿಗೆ ಮಳೆ ಬರುವಾಗ ವಿಳಂಬ ಆಗಬಹುದು.
ಕೇರಳದ ಬಳಿಕ ಒಂದೆರಡು ದಿನದಲ್ಲಿ ರಾಜ್ಯ ಕರಾವಳಿಗೆ ಮುಂಗಾರು ತಲುಪುವುದು ವಾಡಿಕೆ. ತಡೆಯಾಗಿತ್ತು.
ಪಶ್ಚಿಮದಿಂದ ಪ್ರತೀ ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವಿಕೆ, ಗಾಳಿಯ ಚಲನೆ, ಕಡಲಿನಲ್ಲಿ ಅಬ್ಬರ ಹೆಚ್ಚಾಗುವುದು ಮತ್ತು 48 ಗಂಟೆಗಳ ನಿರಂತರ ಮಳೆ ಸುರಿಯುವಿಕೆ ಮೊದಲಾದ ಲಕ್ಷಣಗಳನ್ನು ಅವಲೋಕಿಸಿ ಹವಾಮಾನ ಇಲಾಖೆ ಮುಂಗಾರಿನ ಆಗಮನವನ್ನು
ಘೋಷಿಸುತ್ತದೆ. ಈ ಬಾರಿ ಆ ರೀತಿಯ ವಿದ್ಯಮಾನ ಇನ್ನೂ ಉಂಟಾಗಿಲ್ಲ. ಕೇರಳ, ಕರ್ನಾಟಕದ ಒಂಬತ್ತು ನಿಗದಿತ ಕೇಂದ್ರಗಳಲ್ಲಿ ನಿರಂತರ ಮಳೆಯಾಗಿದ್ದು ಕಂಡುಬಂದರೆ ಮಾತ್ರ ಮುಂಗಾರು ಘೋಷಣೆ ಮಾಡುತ್ತಾರೆ.
ಕಳೆದ ವರ್ಷ ಮೇ 29ಕ್ಕೆ ಕೇರಳ ಕರಾವಳಿಗೆ ಮುಂಗಾರು ಅಪ್ಪಳಿಸಿದ ಎರಡರಿಂದ ಮೂರು ದಿನಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿತ್ತು.
ಆದರೆ ಸದ್ಯ ಆ ರೀತಿಯ ವಾತಾವರಣ ಇಲ್ಲ. ಇನ್ನು 4-5 ದಿನಗಳ ಒಳಗಾಗಿ ಕೇರಳ ಕರಾವಳಿ ಭಾಗಕ್ಕೆ ಮುಂಗಾರು ನಿರೀಕ್ಷೆ ಆಗಮಿಸುವ ನಿರಿಕ್ಷೆ ಇದೆ.
ಬಳಿಕ ಎರಡರಿಂದ ಮೂರು ದಿನಗಳ ಒಳಗೆ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಉತ್ತಮ ಮಳೆ ಸುರಿಯಬಹುದು. ಈ ಬಾರಿ ಬೇಸಗೆ ಮಳೆಯೂ ಉತ್ತಮವಾಗಿ ಆಗಿಲ್ಲದ ಕಾರಣ ಮುಂಗಾರು ವಿಳಂಬ ಕೃಷಿ ಆಗಿದೆ. ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ.

