ರಾಷ್ಟ್ರೀಯ ಕರಾಟೆಯಲ್ಲಿ ಪ್ರಾಪ್ತಿ ಎಸ್. ಪೂಜಾರಿ, ಆಯುಷ್ ಎಸ್. ಪೂಜಾರಿಯವರಿಗೆ ಚಿನ್ನದ ಪದಕ
ಬೋಳ ಪುಷ್ಪ ಪೂಜಾರಿ ಮತ್ತು ಬೋಳ ಸತೀಶ್ ಪೂಜಾರಿ ದಂಪತಿಗಳ ಮಕ್ಕಳು.
(Belman) ಬೆಳ್ಮಣ್ : ಮೂಡಬಿದ್ರಿಯ ಗೈಡ್ಸ್ ಕನ್ನಡ ಭವನದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಿ ಬಾಲಕಿಯರ 13 ವರ್ಷ ವಯೋಮಿತಿಯ ಕಟಾ ವಿಭಾಗದಲ್ಲಿ ಮತ್ತು ಫೈಟಿಂಗ್ ವಿಭಾಗದಲ್ಲಿ ಚಿನ್ನದ ಪದಕವನ್ನು ಬೋಳ ಪ್ರಾಪ್ತಿ ಎಸ್. ಪೂಜಾರಿ ಮತ್ತು ಬಾಲಕರ 9 ವರ್ಷ ವಯೋಮಿತಿಯ ಕಟಾ ವಿಭಾಗದಲ್ಲಿ ಮತ್ತು ಫೈಟಿಂಗ್ ವಿಭಾಗದಲ್ಲಿ ಚಿನ್ನದ ಪದಕವನ್ನು ಬೋಳ ಆಯುಷ್ ಎಸ್. ಪೂಜಾರಿ ಪಡೆದಿದ್ದಾರೆ.
ಕಾರ್ಕಳ ತಾಲೂಕು ಪಂಚಾಯತ್ ನಿಕಟ ಪೂರ್ವ ಸದಸ್ಯರಾದ ಬೋಳ ಪುಷ್ಪ ಪೂಜಾರಿ ಮತ್ತು ಬೋಳ ಪಂಚಾಯತ್ ಮಾಜಿ ಅಧ್ಯಕ್ಷರಾದ ಬೋಳ ಸತೀಶ್ ಪೂಜಾರಿ ದಂಪತಿಗಳ ಮಕ್ಕಳು.
ಇವರಿಗೆ ಕರಾಟೆ ಶಿಕ್ಷಕ ಸತೀಶ್ ಪೂಜಾರಿ ಬೆಳ್ಮಣ್ಣುರವರು ತರಬೇತಿ ನೀಡಿರುತ್ತಾರೆ.
ಸಾಧಕ ವಿದ್ಯಾರ್ಥಿಗಳು ಬೆಳ್ಳಣ್ಣು ಲಕ್ಷ್ಮೀ ಜನಾರ್ಧನ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

